Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಲ್ಪಸಂಖ್ಯಾತರಿಗೆ ಟಿಕೆಟ್ ಮಿಸ್ : ಸಚಿವ ಜಮೀರ್ ಫಸ್ಟ್ ರಿಯಾಕ್ಷನ್

---Advertisement---

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆಯ ಪ್ರಚಾರದ ಅಬ್ಬರ ಭರದಿಂದ ಸಾಗ್ತಾ ಇದೆ. ಆದರೆ ಇತ್ತ ಸಚಿವ ಜಮೀರ್ ಅಹ್ಮದ್ ಅವರು ಮಾತ್ರ ಪ್ರಯತ್ನ ಫಲ ಸಿಕ್ಕಿಲ್ಲ ಅನ್ನೋ ಬೇಸರದಲ್ಲಿದ್ದಾರೆ. ಸಮರ್ಥ್ ನಾಮಪತ್ರ ಸಲ್ಲಿಕೆ ಮಾಡುವಾಗ ಕೂಡ ದಾವಣಗೆರೆಗೆ ಹೋಗಿಲ್ಲ. ಈ ಸಂಬಂಧ ಸಚಿವ ಜಮೀರ್ ಪ್ರತಿಕ್ರಿಯೆ ನೀಡಿದ್ದಾರೆ.

ನಾಮಿನೇಷನ್ ಸಲ್ಲಿಸುವಾಗ ನಾನು ಹೋಗ್ಬೇಕಿತ್ತು. ಮುಖ್ಯಮಂತ್ರಿಗಳು ಕೂಡ ಹೋಗಬೇಕು ಅಂತ ಹೇಳಿದ್ದರು. ನನ್ನದು ಮೂರು ಕ್ವೆಷನ್ ಇತ್ತು. ಹಾಗಾಗಿ ಸೆಷನ್ ಅಟೆಂಡ್ ಮಾಡಬೇಕಾಗಿತ್ತು. ಪ್ರಚಾರಕ್ಕೆ ನಾವೆಲ್ಲ ಕೂಡ ಹೋಗ್ತೀವಿ. ಗೆಲ್ಲಿಸಿಕೊಂಡು ಬರ್ತೀವಿ. ದಾವಣಗೆರೆಯಲ್ಲಿ ನಾವೂ ಗೆಲ್ತೀವಿ. ಶಾಮನೂರು ಶಿವಶಂಕರಪ್ಪ ಅಜ್ಜನವರು ನಿಧನ ಆದ್ಮೇಲೆ ನಾವೂ ಟಿಕೆಟ್ ಕೇಳಿದ್ದು ನಿಜ. 85 ಸಾವುರ ಮತಗಳಿವೆ. ದಯವಿಟ್ಟು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದು ನಿಜ.. ಅವತ್ತಿಂದ ಆ ಪದ್ಧತಿ ಬಂದಿದೆ. ಯಾರಾದ್ರೂ ನಿಧನ ಹೊಂದಿದರೆ ಅವರ ಕುಟುಂಬದವರಿಗೆ ಕೊಡುವ ಪದ್ಧತಿ ಇದೆ ಎಂದಿದ್ದಾರೆ.

ಜೊತೆಗೆ ನಾವೂ ಕೂಡ ಸಿದ್ದರಾಮಯ್ಯ ಅವರ ಜೊತೆಗೆ ಮಾತನ್ನಾಡಿದ್ದೇವೆ, ಡಿಕೆ ಶಿವಕುಮಾರ್ ಜೊತೆಗೆ ಮಾತನ್ನಾಡಿದ್ದೇವೆ. ಸುರ್ಜೆವಾಲ ಅವರ ಜೊತೆಗೆ ಮಾತನ್ನಾಡಿದ್ದೆವು. ಅವತ್ತಿಂದ ಕುಟುಂಬಸ್ಥರಿಗೆ ಕೊಡುವ ಪದ್ಧತಿ ಇದೆ. ಹೀಗಾಗಿ ಅವರಿಗೆ ಕೊಡುತ್ತೇವೆ ಎಂದಾಗ ನಾವೂ ಒಪ್ಪಿದ್ದೇವೆ. ಮುಂದೆ ಜನರಲ್ ಎಲೆಕ್ಷನ್ ನಲ್ಲಿ ಕನ್ಸಿಡರ್ ಮಾಡೋಣಾ ಎಂದಿದ್ದಾರೆ. ಮೊನ್ನೆ ನಾವೆಲ್ಲಾ ಜೊತೆಗೆ ಇದ್ದೆವು. ಮಲ್ಲಿಕಾರ್ಜುನ ಅವರು, ಸಿಎಂ ಅವರಹ ಕರೆದಿದ್ದರು. ನಾನು ಐದು ದಿನ ದಾವಣಗೆರೆಯಲ್ಲಿಯೇ ಇರ್ತೇನೆ. ಗೆಲ್ಲಿಸಿಕೊಂಡು ಬರ್ತೇನೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...