ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆ ಶೇ.2.5ರಷ್ಟು ಹೆಚ್ಚಳವಾಗಿದ್ದು, ಪರಿಷ್ಕೃತ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಖಾಸಗಿ ವಾಹನಗಳಿಗೆ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆ ಏಪ್ರಿಲ್ 1 ರಿಂದ ಶೇ. 2.5 ರಷ್ಟು ಹೆಚ್ಚಾಗಿ 3,075 ರೂ.ಗಳಿಗೆ ತಲುಪಲಿದೆ.
ಪ್ರಸ್ತುತ, ವಾರ್ಷಿಕ ಪಾಸ್ನ ಬೆಲೆ 3,000ರೂ.ಗಳಾಗಿದೆ. ಈ ಪಾಸ್ ಬಳಸಿದರೆ ಕಾರುಗಳು 200 ಟೋಲ್ ಪ್ಲಾಜಾಗಳನ್ನು ದಾಟುವವರೆಗೆ ಪ್ರತ್ಯೇಕವಾಗಿ ಟೋಲ್ ಪಾವತಿಸಬೇಕಿಲ್ಲ.ಮಾಹಿತಿಯ ಪ್ರಕಾರ ದೇಶದಲ್ಲಿ ಈಗಾಗಲೇ 50 ಲಕ್ಷಕ್ಕೂ ಹೆಚ್ಚು ವಾಹನ ಮಾಲಕರು ವಾರ್ಷಿಕ ಪಾಸ್ ಬಳಸುತ್ತಿದ್ದಾರೆ. ಹೆದ್ದಾರಿಗಳಲ್ಲಿ ಸಂಚಾರ ಸುಗಮವಾಗಲು ಮತ್ತು ಟೋಲ್ ಪಾವತಿಯನ್ನು ವೇಗಗೊಳಿಸಲು ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳನ್ನು ಪ್ರತಿ ವರ್ಷವೂ ಪರಿಷ್ಕರಿಸಲಾಗುತ್ತದೆ. ಇದೇ ನಿಯಮದ ಪ್ರಕಾರ ಈ ಬಾರಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರದಲ್ಲೂ ಹೆಚ್ಚಳ ಮಾಡಲಾಗಿದೆ . ಈ ತಿಂಗಳೊಳಗೆ ರೀಚಾರ್ಜ್ ಮಾಡುವವರು 3,000ರೂ. ಪಾವತಿಸಿ ಖರೀದಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











