ಯುಗಾದಿ ಬಳಿಕ ಸಿಎಂ ಆಗ್ತಾರಾ ಡಿಕೆಶಿ : ಆಪ್ತರ ಬಳಗದಲ್ಲಿ ಓಡಾಡ್ತಿರೋದೇನು..?

1 Min Read

ರಾಮನಗರ: ಬಜೆಟ್ ಮಂಡನೆಯಾದಾಗ ವಿರೋಧ ಪಕ್ಷದ ನಾಯಕರುಗಳು ಬಜೆಟ್ ಬಗ್ಗೆ ಅಸಮಾಧಾನ ಹೊರ ಹಾಕೋದು ಸರ್ವೇ ಸಾಮಾನ್ಯ. ಆದರೆ ತಮ್ಮದೇ ಸರ್ಕಾರದ ಬಜೆಟ್ ಗೆ ತಮ್ಮದೇ ಶಾಸಕರು ಅಸಮಾಧಾನ ಹೊರ‌ ಹಾಕಿದ್ದಾರೆ. ಡಿಕೆ ಶಿವಕುಮಾರ್ ಅವರ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಈ ಬಗ್ಗೆ ಮಾತನ್ನಾಡಿದ್ದಾರೆ.

ಬಜೆಟ್ ನನಗೆ ಸಮಾಧಾನ ತಂದಿಲ್ಲ. ನನ್ನ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಸಿಎಂಗೆ ಮನವಿ ಮಾಡಿದ್ದೆ. ಭಕ್ಷಿಕರೆ ಹೊಡೆದು ಪ್ರವಾಹದಿಂದ ಉಂಟಾದ ಸಮಸ್ಯೆ ಬಗ್ಗೆ ಫೋಟೋ ತೋರಿಸಿ, ಮಾಹಿತಿ ಕೊಟ್ಟಿದ್ದೆ. ಈ ಹಿಂದೆ ಇದ್ದವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ರಸ್ತೆ, ಚರಂಡಿ ಹಾಗೂ ನೀರಾವರಿ ಬಗ್ಗೆ ನಾಲ್ಕೈದು ಬಾರಿ ಮನವಿ ಮಾಡಿದ್ದೆ. ಇದಕ್ಕೆ ವಿಶೇಷ ಅನುದಾನ ನೀಡಬೇಕೆಂದು ಮನವಿ ಮಾಡಿದ್ದೆ. ಆದರೆ ಸಿಎಂ ಏನೂ ಮಾಡಲಿಲ್ಲ‌. ನನಗೆ ನೋವಾಗಿದೆ.

ಪಾರದರ್ಶಕವಾಗಿ ಅನುದಾನ ಕೊಡ್ತಾರೆ ಎನ್ನುವ ನಂಬಿಕೆ ಇತ್ತು. ಈಗ ಆ ನಂಬಿಕೆ ಹುಸಿಯಾಗಿದೆ. ಈಗ ನಾವೂ ಡಿಸಿಎಂ ಹಿಂದೆಯೇ ಹೋಗಬೇಕು. ನಮ್ಮ ಕಷ್ಟ ಸುಖವನ್ನ ಅವರ ಮೇಲೆಯೇ ಹಾಕಬೇಕು. ಈ ಹಿಂದೆ ಕೂಡ ಅವರಿಂದಾನೇ ಅಭಿವೃದ್ಧಿ ಕೆಲಸ ಮಾಡಿಸಿಕೊಂಡಿದ್ದೆ. ಇದು ಅವರ ಜಿಲ್ಲೆ. ಮುಂದೆಯೂ ಅವರ ಮೇಲೆಯೇ ಭಾರ ಹಾಕಬೇಕಾಗುತ್ತದೆ. ಕ್ಷೇತ್ರದ ಜವಬ್ದಾರಿ ಡಿಸಿಎಂ ಅವರ ಮೇಲೂ ಇದೆ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಅಂತ ಪದೇ ಪದೇ ಹೇಳುತ್ತಿದ್ದವರು ಇಕ್ಬಾಲ್. ಆ ಬಗ್ಗೆಯೂ ಮಾತನ್ನಾಡುತ್ತಾ, ನಮ್ಮ ಗುರುಗಳು ಜಪದಿಂದ ಇನ್ನು ಎದ್ದಿಲ್ಲ. ಬಹುಶಃ ಯುಗಾ್ಇ ಹಬ್ಬವಾದ ಮೇಲೆ ಎದ್ದೇಳಬಹುದು ಎಂಬ ಮಾತನ್ನ ಹೇಳಿದ್ದಾರೆ.

Share This Article