ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ಬೇಕು ಅಂತ ಕಾಯ್ತಾ ಇದ್ದಾರೆ. ಆದ್ರೆ ಅದಕ್ಕೆ ಅವಕಾಶ ಸಿಕ್ತಾ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿಯೂ ಆರು ವರ್ಷ ತುಂಬಿದೆ. ಸೋಷಿಯಲ್ಮೀಡಿಯಾದಲ್ಲೆಲ್ಲಾ ಗುಡ್ ನ್ಯೂಸ್ ಸಿಗಲಿದೆ ಎಂದು ವೈರಲ್ ಆಗ್ತಿರುವ ವಿಚಾರಕ್ಕೆ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ನಾನು ಸೋಷಿಯಲ್ ಮೀಡಿಯಾ ನೋಡೋದೆ ಇಲ್ಲ. ಆ ಬಗ್ಗೆ ನನಗೇನು ಗೊತ್ತಿಲ್ಲ ಎಂದಿದ್ದಾರೆ.
ಇದೆ ವೇಳೆ, ಬಮುಲ್ ಬ್ರಾಂಡ್ ಅಂಬಾಸಿಡರ್ ಆಗಿ ಸುಧಾರಾಣಿ ಅವರನ್ನ ನೇಮಕ ಮಾಡಿದ್ದರ ಬಗ್ಗೆಯೂ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಬ್ರಾಂಡ್ ಅಂಬಾಸಿಡರ್, ಸುಧಾರಾಣಿ ಅವರತ್ತಿರ ಮಾತನ್ನಾಡಿದ್ದೀವಿ. ದೇಸಿ ಹಾಲು, ಎ2 ಪ್ರಾಡೆಕ್ಟ್ ಏನಿದೆ. ಅದಕ್ಕೆ ಅವರನ್ನ ಅಂಬಾಸಿಡರ್ ಮಾಡಬೇಕು ಅಂತ ಹೇಳಿದ್ದೀವಿ. ಬೇರೆ ಯಾವ ಒಕ್ಕೂಟದಲ್ಲೂ ಅದಿಲ್ಲ. ನಮ್ಮ ಒಕ್ಕೂಟದಲ್ಲಿ ಮಾತ್ರ ಅದಿರೋದು. ಹೀಗಾಗಿ ನಮ್ಮ ಒಕ್ಕೂಟದ ಕೆಳಗಡೆ ನಮ್ಮ ತೀರ್ಮಾನವನ್ನ ಮಾಡ್ತೇವೆ. ಅದು ಕೂಡ ಶೀರ್ಘದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ.
ಹಣ ರೈತರದ್ದು ನಮ್ಮದು ನಿಮ್ಮದು ಆದರೆ ಒಕೆ. ಸ್ಪರ್ಧೆ ಮಾಡೋದಕ್ಕೆ ಹೋಗಿ ರೈತರಿಗೆ ಕಷ್ಟ ಆಗಬಾರದು. ನಾವಿರೋದೆ ರೈತರಿಗೋಸ್ಕರ. ನಮ್ಮ ಸಂಸ್ಥೆ ಹುಟ್ಟಿರೋದೆ ರೈತರಿಂದ. ರೈತರ ಹಿತವನ್ನ ಕಾಪಾಡಬೇಕು, ಗುಣಮಟ್ಟವನ್ನ ಉಳಿಸಿಕೊಳ್ಳಬೇಕು. ಅದು ನಮ್ಮ ಬ್ರ್ಯಾಂಡ್. ನಂದಿನಿ ಎಂದರೆ ಅದೇ. ಆ ಗುರಿಯನ್ನ ಇಟ್ಟುಕೊಂಡೇ ಕೆಲಸ ಮಾಡಿದ್ದೇವೆ. ಇನ್ನು ಸಾಕಷ್ಟು ಬದಲಾವಣೆಗಳನ್ನ ಮಾಡಬೇಕಿದೆ. ಬೇರೆ ಸಂದರ್ಭದಲ್ಲಿ ನೀವೂ ಬಂದ್ರೆ ಅದನ್ನ ಸಂಪೂರ್ಣವಾಗಿ ಕೊಡುವುದಕ್ಕೆ ಬಯಸುತ್ತೇನೆ. ಇನ್ನು ಹೆಚ್ಚಿನ ಬದಲಾವಣೆಗಳನ್ನ ತರುವ ಪ್ರಯತ್ನ ಮಾಡ್ತಾ ಇದ್ದೇವೆ ಎಂಬ ಮಾತನ್ನ ಡಿಕೆ ಸುರೇಶ್ ಅವರು ಹೇಳಿದ್ದಾರೆ.






