ಹಾಸನ: ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವದ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಟಾಪಟಿ ನಡೆದಿದೆ. ಈ ಜಟಾಪಟಿಯಲ್ಲಿ ಸಂಸದ ಶ್ರೇಯಸ್ ಪಾಟೀಲ್ ಅವರು ಹರಕೆ ಮಾಡಿಕೊಂಡಿದ್ದ ಬಟ್ಟೆಯನ್ನು ರಥಕ್ಕೆ ಕಟ್ಟಿಲ್ಲ. ಈ ಸಂಬಂಧ ಸಂಸದ ಶ್ರೇಯಸ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲಾಡಳಿತ ತೀರ್ಮಾನ ಏನಿದೆಯೋ ಅಷ್ಟೆ. ಸುಸೂತ್ರವಾಗಿ ಆಯ್ತು. ಜಿಲ್ಲಾಡಳಿತ, ತಾಲೂಕು ಆಡಳಿತ ಈ ಲೋಪದೋಷದಲ್ಲೂ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೀತು. ನನಗೂ ಸಹ ಆಹ್ವಾನ ಮಾಡಿದ್ರು. ಆದರೆ ನನಗೆ ಬೇರೆ ಕೆಲಸ ಇದ್ದ ಕಾರಣ ಸಭೆಗೆ ಹೋಗೋದಕ್ಕೆ ಆಗ್ಲಿಲ್ಲ. ಅವತ್ತು ನಮ್ಮ ಭಕ್ತಾಧಿಗಳು, ಬ್ಲಾಕ್ ಅಧ್ಯಕ್ಷರೆಲ್ಲ ಚರ್ಚೆ ಮಾಡಿದರು ಹೊಸ ಬಟ್ಟೆ ಹಾಕೋಣಾ ಅಂತ. ಸ್ಥಳೀಯ ಶಾಸಕರು ಕೂಡ ಅನುಮತಿ ನೀಡಿದರು. ಅದಾದ ನಂತರ ನಮ್ಮ ತಾಯಿ ಕೂಡ ಹೇಳಿದರು, ನಿನ್ನ ಸಂಬಳ ಏನು ಬರುತ್ತೆ, ಬೇರೆ ಯಾವುದಕ್ಕೋ ಖರ್ಚು ಮಾಡೋದು ಬೇಡ, ಎರಡು ಲಕ್ಷ ತೆಗೆದು ಅದನ್ನ ದೇವರಿಗೆ ಬಳಸು ಅಂತ ಹೇಳಿದ್ರು.
ಅದಾದ ನಂತರ ನಾನು ಕೂಡ ತಹಶಿಲ್ದಾರರಿಗೆ ಕಳುಹಿಸಿಕೊಟ್ಟೆ, ಅವರೊಂದು ರೆಸಿಪ್ಟ್ ಕೊಟ್ರು. ಅಲ್ಲಿಂದ ಶುರುವಾಗಿದ್ದು ಇದು. ತಹಶಿಲ್ದಾರರು ಭಕ್ತಾಧಿಗಳಿಂದೆಲ್ಲಾ ಸಂಗ್ರಹಿಸಿ ಬಟ್ಟೆ ತಂದ್ರು. ಇದೇ ದೇವಸ್ಥಾನದ ಆವರಣದಲ್ಲಿ ಟೈಕರ್ ಗಳು ಹೊಕೆಯೋದಕ್ಕೆ ಶುರು ಮಾಡಿದರು. ಅವರ ಹಿಂಬಾಲಕರು ಬಂದು ಗಲಾಟೆ ಮಾಡಿ, ಅವರನ್ನು ಓಡಿಸಿದರು. ಮಷಿನ್, ಅರ್ಧಬರ್ಧ ಹೊಲೆದ ಬಟ್ಟೆಯನ್ನೆಲ್ಲಾ ತಾಲೂಕು ಆಫೀಸಿಗೆ ಡಂಪ್ ಮಾಡಿದ್ರು. ಅಲ್ಲಿಗೆ ನಿಂತಿತ್ತು. ನಾನು ಜಿಲ್ಲಾಧಿಕಾರಿಯನ್ನು ಕೇಳಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹೊಸ ಬಟ್ಟರನು ಬೇಡ, ಹಳೆ ಬಟ್ಟರನು ಬೇಡ. ಹೂವಿನ ಅಲಂಕಾರದಲ್ಲಿಯೇ ರಥೋತ್ಸವ ನಡೆಯಲಿ ಅಂದ್ರು. ನಾನು ಒಪ್ಪಿಕೊಂಡೆ. ಅದಾದ ಮೇಲೂ ಹೈಡ್ರಾಮಾ ಶುರು ಮಾಡಿದ್ದಾರೆ. ನಾವೆಲ್ಲಾ ದೇವರಿಗೆ ಬಿಟ್ಟಿದ್ದೀವಿ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











