Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸ್ವಂತ ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸದವಕಾಶ ಇಲ್ಲಿದೆ.

---Advertisement---

ಸ್ವಂತ ಉದ್ಯೋಗ ಮಾಡಬಯಸುವ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರವು ಸುವರ್ಣಾವಕಾಶ ನೀಡುತ್ತಿದೆ. ನಿಮ್ಮದೇ ಗ್ರಾಮದಲ್ಲಿ ‘ಗ್ರಾಮ ಒನ್’ ಕೇಂದ್ರವನ್ನು ಆರಂಭಿಸಬಹುದು. ಈ ಕೇಂದ್ರವನ್ನು ತೆರೆಯಲು ಬೇಕಾದ ಅರ್ಹತೆಗಳು, ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. (ಡಿಪ್ಲೊಮಾ, ಐಟಿಐ, ಪದವಿ ಅಥವಾ ಸ್ನಾತಕೋತ್ತರ ಪದವೀಧರರಿಗೂ ಅವಕಾಶವಿದೆ). ಅಭ್ಯರ್ಥಿಗಳಿಗೆ ಕಂಪ್ಯೂಟರ್ ನಿರ್ವಹಣೆಯ ಜ್ಞಾನವಿರಬೇಕು.ಕೇಂದ್ರ ಸ್ಥಾಪಿಸಲು ಸುಮಾರು ₹1 ರಿಂದ ₹2 ಲಕ್ಷ ಬಂಡವಾಳ ಹೂಡುವ ಸಾಮರ್ಥ್ಯವಿರಬೇಕು.

ಕೇಂದ್ರವನ್ನು ನಡೆಸಲು ನಿಮ್ಮ ಬಳಿ ಈ ಕೆಳಗಿನ ಉಪಕರಣಗಳು ಇರಬೇಕಾಗುತ್ತದೆ:ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್.ಪ್ರಿಂಟರ್ ಮತ್ತು ಬಯೋಮೆಟ್ರಿಕ್ ಸ್ಕ್ಯಾನರ್.ವೇಗದ ಇಂಟರ್ನೆಟ್ ಸೌಲಭ್ಯ. ಕೌಂಟರ್, ಆಪರೇಟರ್ ಕುರ್ಚಿ, ಗ್ರಾಹಕರಿಗಾಗಿ 4-5 ಕುರ್ಚಿಗಳು, ಉತ್ತಮ ಬೆಳಕು/ಗಾಳಿ, ಸಿಸಿಟಿವಿ ಮತ್ತು ಎಲ್ಸಿಡಿ ಟಿವಿ ಸೌಲಭ್ಯವಿರಬೇಕು.

ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್.ಶೈಕ್ಷಣಿಕ ಅಂಕಪಟ್ಟಿಗಳು (PUC/Degree).ಬ್ಯಾಂಕ್ ಪಾಸ್ ಬುಕ್ ಅಥವಾ ರದ್ದಾದ ಚೆಕ್ (Cancelled Cheque).ವಿಳಾಸದ ಪುರಾವೆ.
ಪೊಲೀಸ್ ತಪಾಸಣಾ ಪ್ರಮಾಣ ಪತ್ರ (Police Verification Certificate).ಇತ್ತೀಚಿನ ಭಾವಚಿತ್ರ.

ಆಸಕ್ತರು ಆನ್ ಲೈನ್ ಮೂಲಕ ಈ ಕೆಳಗಿನ ಹಂತಗಳಲ್ಲಿ ಅರ್ಜಿ ಸಲ್ಲಿಸಬಹುದು:ವೆಬ್ ಸೈಟ್: ಗ್ರಾಮ ಒನ್ ಅಧಿಕೃತ ವೆಬ್ಸೈಟ್ https://www.karnatakaone.gov.in/Public/GramOneFranchiseeTermsKn
ನೋಂದಣಿ: ‘ಈಗಲೇ ನೋಂದಾಯಿಸಿ’ (Register Now) ಮೇಲೆ ಕ್ಲಿಕ್ ಮಾಡಿ, ಮೊಬೈಲ್ ಸಂಖ್ಯೆ ನೀಡಿ OTP ಮೂಲಕ ಲಾಗಿನ್ ಆಗಿ.
ಮಾಹಿತಿ ಭರ್ತಿ: ವೈಯಕ್ತಿಕ ವಿವರ, ವಿಳಾಸ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಿಖರವಾಗಿ ನಮೂದಿಸಿ.
ದಾಖಲೆ ಅಪ್ ಲೋಡ್: ಸ್ಕ್ಯಾನ್ ಮಾಡಿದ ಆಧಾರ್, ಪ್ಯಾನ್, ಅಂಕಪಟ್ಟಿ ಮತ್ತು ಫೋಟೋಗಳನ್ನು ಅಪ್ ಲೋಡ್ ಮಾಡಿ.
ಶುಲ್ಕ ಪಾವತಿ: ಅರ್ಜಿ ಶುಲ್ಕವಾಗಿ ₹100 ಪಾವತಿಸಬೇಕು (ಇದು ಮರುಪಾವತಿ ಮಾಡಲಾಗುವುದಿಲ್ಲ).
ಠೇವಣಿ: ನಿಮ್ಮ ಅರ್ಜಿ ಆಯ್ಕೆಯಾದಲ್ಲಿ, ₹5,000 ಭದ್ರತಾ ಠೇವಣಿಯನ್ನು (Refundable Security Deposit) ಪಾವತಿಸಬೇಕಾಗುತ್ತದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now