Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬೂಕನಕೆರೆಯಿಂದ ಶಿಕಾರಿಪುರದ ಜರ್ನಿ ಸುಲಭವಲ್ಲ : ತಂದೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಬಿವೈವಿ

---Advertisement---

ಬೆಂಗಳೂರು: ಇಂದು ಯಡಿಯೂರಪ್ಪ ಅವರಿಗೆ 84ನೇ ಹುಟ್ಟುಹಬ್ಬದ ಸಂಭ್ರಮ. ಮನೆಯಲ್ಲಿ ಬೆಳಗ್ಗೆಯೇ ದೇವರ ಪೂಜೆ ಮಾಡಿ, ಅವರಿಷ್ಟಪಡುವ ಪುಟಾಣಿ ಹಸುಗಳಿಗೆ ಅಲಂಕಾರ ಮಾಡಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೆಲ್ಲಾ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

 

ಸನ್ಮಾನ್ಯ ಬಿಎಸ್ ಯಡಿಯೂರಪ್ಪ ಅವರು ನನ್ನಂತ ಲಕ್ಷಾಂತರ ಕಾರ್ಯಕರ್ತರಿಗೆ ಒಂದು ಸ್ಪೂರ್ತಿಯೂ ಹೌದು, ಪ್ರೇರಣೆಯೂ ಹೌದು. ಅಂಥ ಒಬ್ಬ ಜನನಾಯಕ ಅವರು. ನಾನು ಯಡಿಯೂರಪ್ಪ ಅವರ ಮಗನಾಗಿ ರಾಜ್ಯಾದ್ಯಂತ ಪ್ರವಾಸ ಮಾಡ್ತಾ ಇದ್ದೇನೆ ಅಂತ ಹೇಳಿದ ಕೂಡಲೇ ನನಗೆ ಹೆಮ್ಮೆ ಅನ್ಸುತ್ತೆ. ಅಂಥೊಬ್ಬ ಜನನಾಯಕನನ್ನ, ಹೋರಾಟಗಾರನನ್ನ, ರೈತ ನಾಯಕನನ್ನ ಗುರುತಿಸಿದ ನಮ್ಮ ಹೆಮ್ಮೆಯ ಶಿಕಾರಿಪುರ ತಾಲೂಕಿನ ಮತದಾರರು ಹಾಗೂ ಬಂಧುಗಳಿಗೂ ಇದೇ ವೇಳೆ ಕೃತಜ್ಞತೆ ಸಲ್ಲಿಸುತ್ತೇನೆ.

ಯಡಿಯೂರಪ್ಪ ಅವರು ರಾಜಕೀಯ ಕುಟುಂಬದ ಹಿನ್ನಲೆಯಿಂದ ಬಂದವರಲ್ಲ. ಜನಸಂಘದ ಕಾಲದಿಂದ ಬೂಕನಕೆರೆಯಲ್ಲಿ ಜನಿಸಿ, ಶಿಕಾರಿಪುರಕ್ಕೆ ಬಂದು ಇಲ್ಲಿ ಸಂಘಟನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅಂಥಹ ಕಷ್ಟದ ಕಾಲದಲ್ಲೂ ಇಲ್ಲಿಗೆ ಬಂದು ಸಂಘಟನೆ ಮಾಡಿ, ತಾನೂ ಮುಂದೊಂದು ದಿನ ಶಾಸಕನಾಗಬೇಕು, ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಇದ್ಯಾವುದು ಕೂಡ ಅವರ ಅಪೇಕ್ಷೆ ಇರಲಿಲ್ಲ. ಆದರೆ ಯಡಿಯೂರಪ್ಪ ಅವರು ಬಡವರು, ರೈತರು, ದೀನದಲಿತರು ಸಂಕಷ್ಟದಲ್ಲಿ ಇರ್ತಾ ಇದ್ರು, ಸಹಜವಾಗಿನೇ ಆ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈ ನಾಡಿನ ಮುಖ್ಯಮಂತ್ರಿಗಳಾದಾಗಲೂ ಇದ್ಯಾವುದನ್ನು ಕೂಡ ಮರೆಯಲಿಲ್ಲ ಎಂದು ತಂದೆಯ ಬಗ್ಗೆ ಹೆಮ್ಮೆಯ ಮಾತುಗಳನ್ನ ಆಡಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now