Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಬಂಜಾರ ಸಂಸ್ಕೃತಿ ಶ್ರೀಮಂತ ಸಂಸ್ಕೃತಿ, ಸಂತರ ತತ್ವ ಸಮುದಾಯಕ್ಕೆ ಸ್ಫೂರ್ತಿ : ಸಂಸದ ಗೋವಿಂದ ಎಂ. ಕಾರಜೋಳ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 26 : ಸೇವಾಲಾಲ ಆಚರಣೆ ವಿಚರಣೆ ಬಗ್ಗೆ ನಮ್ಮೆಲ್ಲರ ಎಲ್ಲರ ಜೀವನದಲ್ಲಿ ರೂಢಿಸಿಕೊಂಡರೆ ಮಾತ್ರ ಜಯಂತಿಗೆ ಬೆಲೆ, ಸೇವಾಲಾಲ ತತ್ವ ಆದರ್ಶ ಎಷ್ಟು ಹೇಳಿದರು ಕಡಿಮೆ ಅವರೆ ತತ್ವ ಇಡೀ ಅನ್ಯ ಸಮುದಾಯಕ್ಕೆ ಮಾದರಿ ಸೇವಾಲಾಲರ ತತ್ವ ಇದನ್ನು ಎಲ್ಲರು ರೂಡಿಸಿಕೊಳ್ಳಬೇಕು, ಸತ್ಯ, ಅಹಿಂಸೆ, ದಯೆ, ಕರುಣೆ ಹಾಗೂ ಶಿಕ್ಷಣದ ಮಹತ್ವವನ್ನು ಸಾರಿದ ಮಹಾನ ನೇತಾ ಅವರು ಎಂದು ಮಾಜಿ ಉಪಮುಖ್ಯ ಮಂತ್ರಿಗಳು ಸಂಸದರಾದ ಗೋವಿಂದ ಎಂ. ಕಾರಜೋಳ ತಿಳಿಸಿದರು.
ಬಂಜಾರ(ಲಂಬಾಣಿ) ಸಮಾಜ (ರಿ) ವತಿಯಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜ್‍ರವರ 287 ನೇ ಜಯಂತೋತ್ಸವ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಬಂಜಾರ ಭವನದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು ಬಂಜಾರ ಸಂಸ್ಕೃತಿ ಅನ್ಯ ಸಮುದಾಯಕ್ಕೆ ಮಾದರಿ ನಂಗಾರಿ ವಾದ್ಯ ಕಲೆ ಅನ್ಯ ಸಮುದಾಯಕ್ಕೆ ಪ್ರೇರಣೆ, ಸಂತ ಸೇವಾಲಾಲ ತತ್ವ ಸಮುದಾಯದಲ್ಲಿ ರೂಡಿಸಿಕೊಳ್ಳಬೇಕು ಸಂಸ್ಕೃತಿಯನ್ನು  ಬೆಳಸುವ ಮೂಲಕ, ಕಲಾವಿದರು ಸಾಗಬೇಕು. ಬಂಜಾರ ಸಂಸ್ಕೃತಿ ಜಾಗೃತಿಯಾಗಬೇಕು ಬಂಜಾರ ಸಮುದಾಯದಲ್ಲಿ ನಶಿಸುತ್ತಿರಿದ ಕಲಾವಿದರು ಬೆಳೆಸಿ ಕಲಿಸುವ ಮನೋಬಾವ ಎಲ್ಲ ಹಿರಿಯ ಕಲಾವಿದರಲ್ಲಿ ಬರಬೇಕು ಸೇವಾಲಾಲ ಆದರ್ಶ ರೂಡಿಯಲ್ಲಿ ಇಟ್ಟುಕೊಳಬೇಕು ಎಂದರು.

ಬಂಜಾರ ಸಮುದಾಯ ಆರಾಧ್ಯ ದೈವ ಸಂತ ಶ್ರೀ ಸೇವಾಲಾಲ ಚಿಂತನ ಮಂಥನ ವೇದಿಕೆ ಬೃಹತ್ ವೇದಿಕೆ ಆಗಬೇಕು ಸೇವಾಲಾಲ ಆಚರಣೆ ವಿಚರಣೆ ಬಗ್ಗೆ ನಮ್ಮೇಲ್ಲರ ಎಲ್ಲರ ಜೀವನದಲ್ಲಿ ರೂಡಿಸಿಕೊಂಡರೆ ಮಾತ್ರ ಜಯಂತಿಗೆ ಬೆಲೆ, ಸೇವಾಲಾಲ ತತ್ವ ಆದರ್ಶ ಎಷ್ಟು ಹೇಳಿದರು ಕಡಿಮೆ ಅವರೆ ತತ್ವ ಇಡೀ ಅನ್ಯ ಸಮುದಾಯಕ್ಕೆ ಮಾದರಿ ಸೇವಾಲಾಲರ ತತ್ವ ಇದನ್ನು ಎಲ್ಲರು ರೂಡಿಸಿಕೊಳ್ಳಬೇಕು, ಸತ್ಯ, ಅಹಿಂಸೆ, ದಯೆ, ಕರುಣೆ ಹಾಗೂ ಶಿಕ್ಷಣದ ಮಹತ್ವವನ್ನು ಸಾರಿದ ಮಹಾನ ನೇತಾ ಅವರು ಧರ್ಮಗುರು ಆದರ್ಶಗಳನ್ನು ಮೈಗೂಡಿಸಿಕೊಂಡು ಬಂಜಾರ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎಂದು ಸಂಸದರಾದ ಗೋವಿಂದ ಎಂ. ಕಾರಜೋಳ ತಿಳಿಸಿದರು.

ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ ಮಾತನಾಡಿ, ಸೇವಾಲಾಲರ ವಿಚಾರಧಾರೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಸರ್ವರಿಗೂ ಸಮಾನತೆ ಮತ್ತು ಶಾಂತಿಯ ಸಂದೇಶವನ್ನು ನೀಡುತ್ತವೆ ಸಂತ ಸೇವಾಲಾಲರು ಸಮುದಾಯದ ಆರಾಧ್ಯ ದಾರ್ಶನಿಕ ಮತ್ತು ಸಮಾಜ ಸುಧಾರಕರು ದೈವ, 19ನೇ ಶತಮಾನದ ಮಹಾನ್ ಮೂಢನಂಬಿಕೆಗಳನ್ನು ವ್ಯಸನಮುಕ್ತ ಮತ್ತು ಸೋದರತೆಯುಳ್ಳ ಸಮ ಸಮಾಜದ ನಿರ್ಮಾಣಕ್ಕೆ ಒತ್ತು ನೀಡಿದರು.

ಕಾಯರ್ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಜಾರ(ಲಂಬಾಣಿ) ಸಮಾಜ ಅಧ್ಯಕ್ಷರಾದ ಎಮ್ ಸತೀಶ್ ಕುಮಾರ್ ಮಾತನಾಡಿ, ಬಂಜಾರ ಸಮುದಾಯ ಸಂಸ್ಕೃತಿ ಶ್ರೀಮಂತಿಕೆ ಕಲೆ ಈ ಕಲೆ ಸಮುದಾಯದಲ್ಲಿ ಬೆಳೆಯುವ ಮುಖಂಡರಿಗೆ ಬೆಂಬಲಿಸಬೇಕು ಬೆಳೆಸಬೇಕು ಕಾಲು ಹಿಡಿದು ಜಗ್ಗುವ ಮನೋಭಾವ ಇರಬಾರದು. ಕಲೆ ನಿರಂತರ ಬರುತ್ತಿದೆ. ಪ್ರತಿಯೊಬ್ಬರು ಕಲಾಕಾರರಿಗೆ ಪ್ರೋತ್ಸಾಹಿಸುವ ಮೂಲಕ ಹುರಿದಂಬಿಸಬೇಕು ಬಂಜಾರ ಸಂಸ್ಕೃತಿ, ಸಂಸ್ಕಾರ, ಕಲೆ ಉಳಿಸಿ ಬೆಳೆಸುವ ಮೂಲಕ ನಿರಂತರ ಕಲಾವಿದರು ಶ್ರಮಿಸುತ್ತಿರುವದು ಸಂತಸ ಸುದ್ದಿ, ಬಂಜಾರ ಸಮುದಾಯ ಒಂದಲ್ಲ ಒಂದು ರೂಪದಲ್ಲಿ ಅನ್ಯಾಯವಾಗುತ್ತಿದೆ ಇಂತಹ ಅನ್ಯಾಯ ಜಾಗೃತ ರಾಗಬೇಕು, ಬಂಜಾರ ಸಮುದಾಯ ಆಗುವಕ್ಕಿಂತ ಮುಚಿತವಾಗಿ ಎಲ್ಲರೂ ಒಂದು ಗೂಡಿ ಒಗ್ಗೂಡಿಕೊಂಡು ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು, ಬಂಜಾರ ಸಮುದಾಯ ಬಡೆದು ತಿನ್ನುವ ಸಮುದಾಯವಲ್ಲ ನಿಸ್ವಾರ್ಥ ಸಮುದಾಯ, ಅನ್ಯಾ ಧರ್ಮಕ್ಕೆ ಮತಾಂತರ ಆಗದೇ ಸಮುದಾಯಲ್ಲಿ ಉಳಿಯಬೇಕು, ಬಂಜಾರ ಸಮುದಾಯದ ಆಚಾರ ವಿಚಾರ ಬಹು ಎತ್ತರಕ್ಕೆ ಬೆಳೆದು ನಿಂತಿದೆ ಎಂದರು.

ದೇವಿಯ ಭಕ್ತರಾಗಿ ಪಶುಪಾಲಕನಾಗಿ ಬದುಕು ನಡೆಸುತ್ತಾ, ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದವರು. ಸಕಲ ಜೀವರಾಶಿಗಳಲ್ಲಿ ಪ್ರೀತಿ, ಕರುಣೆ ತೋರುವುದು ಮತ್ತು ಅಹಿಂಸೆಯನ್ನು ಪಾಲಿಸು ವುದು. ಅಕ್ಷರ ಜ್ಞಾನದ ಮಹತ್ವವನ್ನು ಸಾರಿದರು. ಎಲ್ಲರೂ ಶಿಕ್ಷಿತರಾಗಿ ಜಗತ್ತಿಗೆ ದಾರಿದೀಪವಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. 85%ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ನಗರದಲ್ಲಿ ಶ್ರೀ ಸೇವಾಲಾಲ್ ಅವರ 287ನೇ ಜಯಂತಿ ಅಂಗವಾಗಿ ಬೃಹತ್ ಮೆರವಣಿಗೆ ಜರುಗಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ಸಮ್ಮುಖದಲ್ಲಿ ನಗರದ ಪ್ರವಾಸಿ ಮಂದಿರದ  ಆವರಣದಿಂದ ಬಂಜಾರ್ ಭವನದವರೆಗೆ ಮೆರವಣಿಗೆ ನಡೆದಿದ್ದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ರಘು.ಪಿ ಸಂತ ಸೇವಾಲಾಲ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು.  ತಾಲೂಕಿನ  ವಿವಿಧ ತಾಂಡಗಳಿಂದ ಆಗಮಿಸಿದ್ದ ಹಿರಿಯರು, ಮಹಿಳೆಯರು, ಯುವಕ-ಯುವತಿಯರು ಮೆರವಣಿಗೆ ಯುದ್ದಕ್ಕೂ, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಅವರ ಸಂಪ್ರಾದಾಯಿಕ ಉಡುಗೆಯಲ್ಲಿ ಆಗಮಿಸಿದ್ದ ಮಹಿಳೆಯರು ಹಾಡುಗಳನ್ನು ಹಾಡುತ್ತಾ ತಮ್ಮದೇ ಶೈಲಿಯ ನೃತ್ಯಕ್ಕೆ ಹೆಜ್ಜೆಹಾಕಿದರು.

ಬೆಳಿಗ್ಗೆ 10.30 ರ ಸುಮಾರಿಗೆ ಆರಂಭವಾದ ಮೆರವಣಿಗೆಯು ಪಟ್ಟಣದ ಮುಖ್ಯ ರಸ್ತೆಯ ವಾರ್ಗವಾಗಿ ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಜಿಲ್ಲಾ ಅಸ್ಪತ್ರೆ ಮುಂಬಾಗ, ಎಲ್‍ಐಸಿ ಮುಂಬಾಗ, ಸ್ಟೇಡಿಯಂ ರಸ್ತೆ ಕ್ರಾಸ್, ಪಂಚಚಾರ್ಯ ಕಲ್ಯಾಣ ಮಂಟಪ ಮುಂಭಾಗದಿಂದ ಬಂಜಾರ ಭವನವನ್ನು ತಲುಪಿತು.

ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಹರೀಶ್ ನಾಯ್ಕ ನ್ಯಾಯವಾದಿಗಳಾದ  ಬಿ ಕೆ ರಹಮತ್ ವುಲ್ಲಾ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಗಿರೀಶ್ ಚಂದನಾಯ್ಡ್ ಹಿರಿಯೂರಿನ ನಗರಸಭೆ ಮಾಜಿ ಸದಸ್ಯರಾದ ಶ್ರೀಮತಿ ಅಂಬಿಕ ಪಿ ತುಳಸಿ ರಮೇಶ್, ನಿರ್ಮಲ, ಉಮೇಶ್ ನಾಯ್ಕ್ ಮಂಜುನಾಥ್ ಜೆ. ತಿಪ್ಪೇಸ್ವಾಮಿ ನಾಯ್ಕ, ಕುರನಾಯ್ಕ, ಈರಾನಾಯ್ಕ್ ವೀರಭದ್ರನಾಯ್ಕ ಸೇರಿದಂತೆ ಇತರರು ಭಾಗವಹಿಸಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...