ಚಿತ್ರದುರ್ಗ: ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಎಉವುದಕ್ಕೆ ಆಗ್ರಹಿಸಿ ಸಾವಿರಾರು ಅಭ್ಯರ್ಥಿಗಳು ಇಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿ- ಧಾರವಾಡದಲ್ಲಿ ಒಂದು ಹೋರಾಟ ನಡೀತಾ ಇದೆ. ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗ ಖಾಲಿ ಇದೆ. ಈಗಾಗಲೇ ಹಣಕಾಸು ವಿಭಾಗದವರು ಸುಮಾರು 65 ಸಾವಿರ ಹುದ್ದೆಗಳನ್ನ ಭರ್ತಿ ಮಾಡಿ ಅಂತ ಆದೇಶ ಕೊಟ್ಟಿದ್ದಾರೆ.
ಆದರೆ ಈ ಆದೇಶ ಕೊಟ್ಟು 6 ತಿಂಗಳಾಗಿದೆ. ಇನ್ನು ಒಂದೇ ಒಂದು ಉದ್ಯೋಗಕ್ಕೂ ಕೂಡ ಇಂಟರ್ ವ್ಯೂ ಕರೆದಿಲ್ಲ. ಈ ಸರ್ಕಾರ ಬಂದು ಎರಡೂವರೆ ವರ್ಷ ಆಗಿದೆ. ಒಬ್ಬ ನಿರುದ್ಯೋಗಿಗೆ ಉದ್ಯೋಗವನ್ನ ಕೊಡಲಿಲ್ಲ. ಇವರು ಅಧಿಕಾರದ ಕಚ್ಚಾಟ. ಇವರಿಗೆ ಮಾತ್ರ ಉದ್ಯೋಗ ಬೇಕು. ಉಪಮುಖ್ಯಮಂತ್ರಿಗರ ಮುಖ್ಯಮಂತ್ರಿ ಉದ್ಯೋಗ ಬೇಕು. ಮುಖ್ಯಮಂತ್ರಿಗೆ ಐದು ವರ್ಷವೂ ಹುದ್ದೆ ಬೇಕು. ಕೋಟಿ ಕೋಟಿ ಆದಾಯಗಳು ಬರುವ ಉದ್ಯೋಗ ಬೇಕು.

ಆದರೆ ಬಡವರ ಮಕ್ಕಳು ಉದ್ಯೋಗ ಇಲ್ಲದೆ ವಂಚಿತರಾಗಿದ್ದಾರೆ. ಅದರ ವಿರುದ್ಧ ಸುಮಾರು 20 ಸಾವಿರ ನಿರುದ್ಯೋಗಿಗಳು, ಅವರ ಹೋರಾಟಕ್ಕೆ ನಾನು ಬೆಂಬಲ ಕೊಡ್ತಾ ಇದ್ದೀನಿ. ನಾನು ಅಲ್ಲಿಗೆ ಹೋಗ್ತಾ ಇದ್ದೀನಿ. ಪಾಪರ್ ಆಗಿದೆ ಸರ್ಕಾರ, ಸಂಬಳ ಕೊಡುವುದಕ್ಕೂ ದುಡ್ಡಿಲ್ಲ. ಆತ್ಮಹತ್ಯೆಗಳು ನಡೀತಾ ಇದ್ದಾವೆ. ಕೆಎಸ್ಆರ್ಟಿಸಿ ಅವರು ಅರಿಯರ್ಸ್ ಕೊಟ್ಟಿಲ್ಲ ಅಂತ, ಅಂಗನವಾಡಿಯವರು ಇನ್ನೇನು ಶುರು ಮಾಡ್ತಾವ್ರೆ, ಗುತ್ತಿಗೆದಾರರು 35 ಕೋಟಿ ಬ್ಯಾಲೆನ್ಸ್ ಕೊಡಬೇಕು ಅಂತಿದ್ದಾರೆ. ಎಲ್ಲೂ ಅಭಿವೃದ್ಧಿ ಕಾರ್ಯ ನಡೀತಾ ಇಲ್ಲ. ತಕ್ಷಣ ಖಾಲಿ ಹುದ್ದೆಗಳ ಭರ್ತಿಗೆ ಇಂಟರ್ ವ್ಯೂ ಕರೀಬೇಕು ಎಂದು ಆಗ್ರಹಿಸಿದ್ದಾರೆ.















