Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಾಗಲಕೋಟೆಯಲ್ಲಿ ಕಲ್ಲು ತೂರಾಟ : ಗೃಹ ಸಚಿವ ಪರಮೇಶ್ವರ್ ಏನಂದ್ರು..?

ಸಚಿವ ಪರಮೇಶ್ವರ್
---Advertisement---

ಬೆಂಗಳೂರು: ಶಿವಾಜಿ ಜಯಂತಿ ಮೆರವಣಿಗೆಯ ವೇಳೆ ನಡೆದ ಕ್ಳು ತೂರಾಟ ಪ್ರಕರಣದ ನಂತರ ಬಾಗಲಕೋಟೆ ಇನ್ನು ಬೂದಿ ಮುಚ್ಚಿದ ಕೆಂಡದಂತೆ ಇದೆ‌. ಎಸ್ಪಿ ಹಣೆಗೆ ಕಲ್ಲು ಬಿದ್ದಿತ್ತು. ಕಿಲ್ಲಾ ಓಣಿಯಲ್ಲಿ ಇದೀಗ ಭದ್ರತೆ ಮತ್ತಷ್ಟು ಹೆಚ್ಚಾಗಿದೆ. ಗದಗ, ಧಾರವಾಡ ಸೇರಿದಂತೆ ಒಟ್ಟು ಐವರು ಎಸ್ಪಿಗಳು, ಎಂಟು ಡಿವೈಎಸ್ಪಿ, 16 ಸಿಪಿಐ, 32 ಪಿಎಸ್ಐ, 65 ಎಎಸ್ಐ, 450 ಕಾನ್ಸಸ್ಟೇಬಲ್ ಸೇರಿದಂತೆ ಬಿಹಿ ಭದ್ರತೆಯನ್ನ ಹೆಚ್ಚಿಸಲಾಗಿದೆ.

ಈ ಸಂಬಂಧ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಯಾರನ್ನು ರಕ್ಷಣೆ ಮಾಡುವುದಿಲ್ಲ. ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಈಗಾಗಲೇ ಅಲ್ಲಿ ಎಂಟು ಜನರನ್ನ ಅರೆಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಎಲ್ಲವೂ ಕಂಟ್ರೋಲ್ ನಲ್ಲಿದೆ. ಹೆಚ್ಚು ಭದ್ರತೆಯನ್ನು ಒದಗಿಸಲಾಗಿದೆ. ಜನ ಕೂಡ ಅರ್ಥ ಮಾಡಿಕೊಳ್ಳಬೇಕು. ಶಾಂತಿಯುತ ಸಭೆ ನಡೆಸುವುದಕ್ಕೆ ಸೂಚನೆ ನೀಡಿದ್ದೇನೆ. ಈಗ ಎಲ್ಲವೂ ಹತೋಟಿಯಲ್ಲಿದೆ ಎಂದಿದ್ದಾರೆ.

ತಿಮ್ಮಾಪುರ ಅವರು ಇದರ ಹಿಂದೆ ರಾಜಕೀಯ ಕಾರಣ ಇದೆ ಎಂಬುದನ್ನ ಹೇಳಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ್ದು, ಮುಂದೆ ಎಲೆಕ್ಷನ್ ಬರ್ತಾ ಇದೆಯಲ್ಲ ಅದಕ್ಕೆ ಆ ರೀತಿ ಹೇಳಿರಬಹುದು ಅವರು. ನಾವೂ ಫೋರ್ಸ್ ಇಟ್ಟಿದ್ದೇವೆ. ಅಂತ ಅಹಿತಕರ ಘಟನೆಯಾದರೆ ಕ್ರಮ ತೆಗೆದುಕೊಳ್ಳುತ್ತಾರೆ. ಪ್ರಚೋದನಕಾರಿ ಭಾಷಣದ ಬಗ್ಗೆ ಇನ್ನು ರೂಲ್ಸ್ ಕಂಪ್ಲೀಟ್ ಆಗಿಲ್ಲ. ಗವರ್ನರ್ ಪರ್ಮಿಷನ್ ಕೊಡಬೇಕು. ಅದು ಆಗುವವರೆಗೂ ಎಫೆಕ್ಟೀವ್ ಬರಲ್ಲ. ಹಿಂದಿನ ಕಾನೂನನ್ನೇ ಈಗಲೂ ಬಳಸಿಕೊಳ್ತಾ ಇದ್ದೀವಿ. ಇಂಥವನ್ನೆಲ್ಲಾ ಕಂಟ್ರೋಲ್ ಗೆ ತರುವುದಕ್ಕೋಸ್ಕರವೇ ಕಾನೂನನ್ನು ತರುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...