ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣ ಆಸ್ಪತ್ರೆಗೆ ದಾಖಲು 

1 Min Read

ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಣ್ಣ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ‌.ಅವರನ್ನು ತಕ್ಷಣವೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈಗ ಅವರ ಆರೋಗ್ಯ  ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ

ವೈದ್ಯರು ನಡೆಸಿದ ಸೂಕ್ಷ್ಮ ಪರೀಕ್ಷೆಯಲ್ಲಿ ಹೃದಯದ ಎರಡು ಕಡೆ ಬ್ಲಾಕೇಜ್ ಇರುವುದಾಗಿ ಪತ್ತೆಯಾಗಿದೆ. ತಕ್ಷಣವೇ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಬ್ಲಾಕೇಜ್ ತೆರವುಗೊಳಿಸಲಾಗಿದೆ. ಚಿಕಿತ್ಸೆ ನಂತರ ಶಾಸಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿ ಪ್ರಕಾರ, ಇದು ಲಘು ಹೃದಯಾಘಾತವಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ ಪರಿಣಾಮ ಯಾವುದೇ ದೊಡ್ಡ ಅಪಾಯ ತಪ್ಪಿದೆ. ಬ್ಲಾಕೇಜ್ ತೆರವುಗೊಳಿಸಿದ ನಂತರ ಅವರ ಸ್ಥಿತಿ ಸ್ಥಿರವಾಗಿದೆ. ಕೆಲವು ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Share This Article
Enable Notifications OK No thanks