Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೈಕಮಾಂಡ್ ಹೇಳಲಿ.. ಪದೇ ಪದೇ ಯಾಕೆ : ಸಿದ್ದರಾಮಯ್ಯ ಗರಂ

---Advertisement---

 

ಬೆಂಗಳೂರು: ಕುರ್ಚಿ ಕದನದ ಈಗಂತೂ ಜೋರಾಗಿನೇ ನಡೀತಾ ಇದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ಬಂದ ಮೇಲಂತು ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಎದುರಾಗುತ್ತಲೆ ಇದೆ. ಇದೀಗ ಸಿದ್ದರಾಮಯ್ಯ ಅವರು ಅದೇ ಅದೇ ಪ್ರಶ್ನೆಗೆ ಗರಂ ಆಗಿದ್ದಾರೆ.

ನಾವೂ ಏನು ಮಾತು ಕೊಟ್ಟಿದ್ದೀವಿ ಅದರಂತೆ ನಡೆದಿದ್ದೀವಿ. ಸಾವಿರ ದಿನ ಆಚರಣೆ ಮಾಡ್ತಾ ಇರುವುದು ಮೈಲಿಗಲ್ಲಲ್ಲ. ನಾವೂ ಈ ದೇಶದ ಬಡವರಿಗೆ, ದಲಿತರಿಗೆ ಇವರಿಗೆಲ್ಲಾ ಆರ್ಥಿಕವಾಗಿ, ಸಾಮಾಜಿಕವಾಗಿ ಬಲಪಡಿಸಬೇಕು. ಇದನ್ನ ಮುಂದುವರೆಸುವ ಕೆಲಸ ಮಾಡುತ್ತೇವೆ. ಇಲ್ಲಿಯವರೆಗೆ ಏನು ಮಾತು ಕೊಟ್ಟಿದ್ದೀವಿ ಅದನ್ನ ಮಾಡಿದ್ದೀವಿ ಎಂದಿದ್ದಾರೆ. ಸರ್ಕಾರದ ಸಾಧನಾ ಸಮಾವೇಶದ ಬಗ್ಗೆ ಬಿಜೆಪಿಯವರು ವಿರೋಧ ಮಾಡ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಹೊಟ್ಟೆಕಿಚ್ಚಿದೆ. ಅದಕ್ಕೆ ವಿರೋಧ ಮಾಡ್ತಾರೆ. ಯಾಕಂದ್ರೆ ಅವ್ರು ಏನು ಮಾಡ್ಲಿಲ್ವಲ್ಲ ಅದಕ್ಕೆ. ಅವರು ಏನು ಮಾಡಿದ್ದಾರೆ. 2018ರಲ್ಲಿ 600 ಭರವಸೆಗಳನ್ನ ಕೊಟ್ಟಿದ್ದರು. ಅದರಲ್ಲಿ 10% ಈಡೇರಿಸಿದ್ದಾರಾ..? ನಮ್ಮನ್ನ ವಿರೋಧಿಸುವುದಕ್ಕೆ ಯಾವ ಅಧಿಕಾರ ಇದೆ ಎಂಬ ಪ್ರಶ್ನೆ ಕೇಳಿದ್ದಾರೆ.

ಇದೇ ವೇಳೆ ಅಧಿಕಾರ ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಹೈಕಮಾಂಡ್ ಏನು ಹೇಳ್ತಾರೋ ಅದೇ ರೀತಿ ನಡೆದುಕೊಳ್ತೀನಿ ಅಂದಿದ್ದೀನಿ. ಆ ಬಗ್ಗೆ ಏನು ಕೇಳ್ಬೇಡಿ ಅಂತ ಹೇಳಿದ್ದೀನಿ. ಪುನಃ ಪುನಃ ನೀವ್ಯಾಕೆ ಅದನ್ನೇ ಕೇಳ್ತೀರಿ. ಹೈಕಮಾಂಡ್ ಏನು ಹೇಳುತ್ತೆ ಅದನ್ನೇ ನಮ್ಮ ಪಕ್ಷದವರೆಲ್ಲ ಕೇಳಬೇಕು. ಟ್ವೀಟ್ ಹೈಕಮಾಂಡ್ ಅವರೇನಾದರೂ ಮಾಡ್ತಾರಾ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಡಿಕೆ ಶಿವಕುಮಾರ್ ಅವರು ಕೂಡ ಹೈಕಮಾಂಡ್ ನಾಯಕರ ಸ್ಪಷ್ಟ ಉತ್ತರಕ್ಕಾಗಿ‌ಕಾಯ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...