ದಿಕ್ಕು ತಪ್ಪಿತು ಸಿಎಂ ಸಿದ್ದರಾಮಯ್ಯ ಇದ್ದ ಹೆಲಿಕಾಪ್ಟರ್​: ಕಾರಣವೇನು?

1 Min Read

ಸಿಎಂ ಸಿದ್ದರಾಮಯ್ಯ  ತೆರಳುತ್ತಿದ್ದ ಹೆಲಿಕಾಪ್ಟರ್ ದಿಕ್ಕು ತಪ್ಪಿದೆ!. ನಿಗದಿಯಾಗಿದ್ದ ಜಾಗದ​​​ಲ್ಲಿ ಹೆಲಿಕಾಪ್ಟರ್​ ಇಳಿದಿಲ್ಲ. ಬದಲಿಗೆ ಮತ್ತೊಂದು ಹೆಲಿಪ್ಯಾಡ್​ನಜಾಗದಲ್ಲಿ ಹೆಲಿಕಾಫ್ಟರ್​​​ನನ್ನು ಇಳಿಸಿದ್ದು, ಸಿಎಂ ಸ್ವಾಗತಕ್ಕೆ ಬಂದಿದ್ದ ಅಧಿಕಾರಿಗಳು ಒಂದು ಕ್ಷಣ ಗೊಂದಲ ಆಗಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬರುತ್ತಿದ್ದ ಹೆಲಿಕಾಪ್ಟರ್ ದಿಕ್ಕು ತಪ್ಪಿತ್ತು ಎನ್ನಲಾಗ್ತಿದೆ. ಇತ್ತ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಕಾದು ನಿಂತು ಸುಸ್ತಾಗಿದ್ದಾರೆ. ನಂತರ ಹೆಲಿಕಾಪ್ಟರ್​ ದಿಕ್ಕು ತಪ್ಪಿ ಮತ್ತೊಂದು ಹೆಲಿಪ್ಯಾಡ್​​ನಲ್ಲಿ ಇಳಿದ ವಿಚಾರ ತಿಳಿದು ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖಾ ಅಧಿಕಾರಿಗಳು ಸಿಎಂ ಸ್ವಾಗತಿಸಲು ಓಡೋಡಿ ಬಂದಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಲಿಂಗಸುಗೂರಿನ ಹಿರಿಯ ಕಾಂಗ್ರೆಸ್ ಮುಖಂಡ ಅಮರೇಗೌಡ ಬಯ್ಯಾಪುರ ಅವರ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ರಾಯಚೂರು ರಸ್ತೆಯ ಶ್ರೀನಿವಾಸ್ ಲೇಔಟ್‌ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಗಾಗಿ ವಿಶೇಷವಾಗಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಹೆಲಿಕಾಪ್ಟರ್​ ದಿಕ್ಕು ತಪ್ಪಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಖಾಸಗಿ ಹೆಲಿಪ್ಯಾಡ್ ನಲ್ಲಿ ಇಳಿದಿದೆ.

Share This Article
Enable Notifications OK No thanks