ಸಿ ಜೆ ರಾಯ್ ದುರಂತದ ಬೆನ್ನಲ್ಲೇ ಮತ್ತೊಬ್ಬ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನಪ್ರಿಯ ಮುಲ್ತಾನಿ ಬೇಕರಿ ಮಾಲೀಕ, ಶ್ರೀಮಂತ ಉದ್ಯಮಿ ಸುನಿಲ್ ಮೋತಿಲಾಲ್ ಸದರಂಗನಿ17 ಮಹಡಿಯಿಂದ ಜಿಗುದು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಸೋಲಾಪುರದ ಪನಾಶ್ ಅಪಾರ್ಟ್ಮೆಂಟ್ ನಲ್ಲಿ ಸಾಮಾನ್ಯವಾಗಿ ಲಿಫ್ಟ್ ಮೂಲಕ ತೆರಳುತ್ತಿದ್ದ ಸುನಿಲ್ ಮೋತಿಲಾಲ್, 17 ಮಹಡಿಯನ್ನು ಮೆಟ್ಟಿಲು ಮೂಲಕ ಹತ್ತಿದ್ದಾರೆ. ಸಾವನ್ನಪ್ಪು ಸೂಚನೆ ಕಂಡ ಸೆಕ್ಯುರಿಟಿಗಾರ್ಡ್ ಅಲ್ಲಿ ತೆರಳಿ ಕೈಮುಗಿದು ಬೇಡಿಕೊಂಡಿದ್ದಾರೆ.
ಆಗ ಉದ್ಯಮಿ ತಾನು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತೀವ್ರ ಒತ್ತಡದಲ್ಲಿ ತಾನು ನಿರ್ಧಾರ ಮಾಡಿದ್ದೆ ನೀನು ಹೋಗು ನಾನು ಸಾಯುವುದಿಲ್ಲ ಎಂದಿದ್ದಾರೆ. ಇದನ್ನು ನಂಬಿದ ಸೆಕ್ಯುರಿಟಿ ಸುನೀಲ್ ಅವರನ್ನು ಕರೆದುಕೊಂಡು ಕೆಳಗೆ ಇಳಿಯುವಾಗ ಕಿ ಮೇಲಿದೆ ಹೋಗಿ ತರುತ್ತೇನೆ ಎಂದು ಮೇಲೆ ಓಡಿದ ಉದ್ಯಮಿ ರೂಫ್ ಟಾಪ್ ಮೇಲಿಂದ ಕೆಳಕ್ಕೆ ಜಿಗಿದಿದ್ದಾರೆ.ಸುನಿಲ್ ಮೋತಿಲಾಲ್ ತೀವ್ರವಾಗಿ ಮಾನಸಿಕ ಒತ್ತಡದಲ್ಲಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














