ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 03 : ಚಿತ್ರದುರ್ಗದಿಂದ ಬರುವ 220 ಕೆ.ವಿ ಹಿರೆಮಲ್ಲನಹೊಳೆ-ಚಿತ್ರದುರ್ಗ ಮಾರ್ಗ ಮತ್ತು 66 ಕೆ.ವಿ ತುರುವನೂರು-ಚಿತ್ರದುರ್ಗ ಮಾರ್ಗದಲ್ಲಿ ವಿ.ಜೆ.ಎನ್.ಎಲ್ ರವರು ಭದ್ರ ಮೇಲ್ದಂಡೆ ಯೋಜನೆಯ ಅಕ್ವಡಕ್ಟ್ ನಿರ್ಮಾಣ ಕಾಮಗಾರಿ ಯನ್ನು ನಿರ್ವಹಿಸುವುದರಿಂದ ಈ ಕೆಳಕಂಡ ದಿನಾಂಕಗಳಂದು ಈ ಊರುಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಆಗಲಿದೆ.
ಫೆಬ್ರವರಿ 5, 8, 16, 22, 26, ಮತ್ತು ಮಾರ್ಚ್ ತಿಂಗಳಲ್ಲಿ 1 ಮತ್ತು 5 ನೇ ತಾರೀನಂದು ಬೆಳಿಗ್ಗೆ 10.00 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು :
ಮಾಡನಾಯಕನಹಳ್ಳಿ, ಸಿ.ಜಿ.ಹಳ್ಳಿ, ಯಲವರ್ತಿ, ಮುದ್ದಾಪುರ, ಹೊಸಗೊಲ್ಲರಹಟ್ಟಿ, ಬಂಗಾರಕ್ಕನಹಳ್ಳಿ, ರಾಯನಹಳ್ಳಿ, ಸೂರೇನಹಳ್ಳಿ, ಐನಹಳ್ಳಿ, ತುರುವನೂರು, ಬೋಮ್ಮಕ್ಕನಹಳ್ಳಿ, ಕೂನಬೇವು, ಅವಳೇನಹಳ್ಳಿ, ದೊಡ್ಡಘಟ್ಟ, ಕರಿಯಮ್ಮನಹಟ್ಟಿ, ಕೋಟೆಹಟ್ಟಿ, ಹುಣಸೇಕಟ್ಟೆ , ಯಲಗೋಡು, ಐಸಮುದ್ರ, ನೆಲ್ಲಿಕಟ್ಟೆ , ಕಾಲಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆದುದರಿಂದ ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















