ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 01 : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (karnataka film chamber of commerce) ಚುನಾವಣೆ ನಿನ್ನೆ (ಜನವರಿ 31) ನಡೆದಿತ್ತು.
ಬೆಂಗಳೂರಿನಲ್ಲಿ ನಡೆದ ಈ ಚುನಾವಣೆಯಲ್ಲಿ ಪ್ರದರ್ಶಕ ವಲಯದಿಂದ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿದ್ದ ಚಲನಚಿತ್ರ ಪ್ರದರ್ಶಕರು ಮತ್ತು ವಿತರಕರು ಚಿತ್ರದುರ್ಗದ ಶಂಕರ್ ಟಾಕೀಸ್‍ನ ಜಿ.ಪಿ.ಕುಮಾರ್ ಜಯಶಾಲಿಯಾಗಿದ್ದಾರೆ.
ಅಧ್ಯಕ್ಷರಾಗಿ ಭಾಮಾ ಹರೀಶ್ ವಿರುದ್ಧ ಜಯಮಾಲ ಅವರು ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಈ ಬಾರಿ ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮುಂದಿನ ಅವಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಜಯಮಾಲ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಯಮಾಲ ಅವರು ಎರಡನೇ ಬಾರಿ ಫಿಲಂ ಚೇಂಬರ್ನ ಅಧ್ಯಕ್ಷೆಯಾಗಿದ್ದಾರೆ. 2008ರಲ್ಲಿ ಹಿರಿಯ ನಟಿ ಜಯಮಾಲ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಈಗ ಮತ್ತೊಮ್ಮೆ ಅಧ್ಯಕ್ಷೆ ಆಗಿದ್ದಾರೆ.











