Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನೈಸರ್ಗಿಕ ಆಮ್ಲೀಯ ಮಳೆ ಎಂದರೇನು ? ಇದರ ಸಂಪೂರ್ಣ ಮಾಹಿತಿ…!

---Advertisement---

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಸುದ್ದಿಒನ್ : ಆಮ್ಲ ಮಳೆ ಎಂದರೆ ವಾತಾವರಣದಲ್ಲಿನ ಮಾಲಿನ್ಯ ಕಾರಕಗಳು ಮಳೆ ನೀರಿನೊಂದಿಗೆ ಬೆರೆತು, ಸಾಮಾನ್ಯಕ್ಕಿಂತ ಹೆಚ್ಚಿನ ಆಮ್ಲೀಯತೆಗಳು (PH ಕಡಿಮೆ) ಹೊಂದಿರುವ ಮಳೆಗೆ ಆಮ್ಲ ಮಳೆ ಎನ್ನಲಾಗುತ್ತದೆ. ಇದು ಧೂಳಿನ ರೂಪದಲ್ಲೂ ಭೂಮಿಗೆ ಬೀಳಬಹುದು.

ಆಮ್ಲಮಳೆಯ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಕೆಳಗೆ ವಿವರವಾಗಿ ವಿವರಿಸಲಾಗಿದೆ.‌ಆಮ್ಲ ಮಳೆಗೆ ಮುಖ್ಯಕಾರಣ ವಾತಾವರಣಕ್ಕೆ ಬಿಡುಗಡೆಯಾಗುವ ಸಲ್ಪರ್ ಡೈಅಕ್ಸರ್ (SO2) ಮತ್ತು ನೈಟ್ರೋಜನ್ ಆಕ್ಸೈಡ್‍ಗಳು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು, ಕಾರ್ಖಾನೆಗಳು, ತೈಲ ಸಂಸ್ಕರಣಗಾರಗಳು ಮತ್ತು ವಾಹನಗಳ ಹೊಗೆ, ಜ್ವಾಲಮುಖಿ ಸ್ಪೋಟಗಳು ಮತ್ತು ಸಸ್ಯಗಳ ಕೊಳೆಯುವಿಕೆ, ಕಾರ್ಖಾನೆಗಳು ಮತ್ತು ವಾಹನಗಳಿಂದ ಹೊರಬರುವ Sಔ2 ಮತ್ತು ನೈಟ್ರೋಜನ್ ಆಕ್ಸೈಡ್‍ಗಳು, ಅನಿಲಗಳು ಗಾಳಿಯಲ್ಲಿ ಸೇರುತ್ತದೆ.

ಈ ಅನಿಲಗಳು ವಾತಾವರಣದಲ್ಲಿರುವ ನೀರಾವಿ ಆಮ್ಲಜನಕ ಮತ್ತು ಇತರೆ ರಾಸಾಯನಿಕ ಗಳೊಂದಿಗೆ ಪ್ರತಿಕ್ರಿಯಿಸುತ್ತವೆ. ಸರೋವರಗಳು ಮತ್ತು ನದಿಗಳ ಗುಣಮಟ್ಟ ಕಡಿಮೆಯಾಗಿ ಮೀನುಗಳು ಮತ್ತು ಜಲಚರಗಳು ಸಾಯುತ್ತವೆ. ಆಮೃತಶಿಲೆ ಮತ್ತು ಸುಣ್ಣದ ಕಲ್ಲಿನಿಂದ ಮಾಡಿದ ಐತಿಹಾಸಿಕ ಸ್ಮಾರಕಗಳು ಸವೆದು ಹೋಗುತ್ತದೆ. ಜಲಚರಗಳು ಮತ್ತು ಸಸ್ಯಗಳು ಅಳಿದು ಹೋಗುತ್ತವೆ. ಮಣ್ಣಿನ ರಾಸಾಯನಿಕ ಸಂಯೋಜನೆಯನ್ನು ಬದಲಾಯಿಸಿ ಪೋಷಕಾಂಶಗಳನ್ನು ತೊಳೆಯುವ ಮೂಲಕ ಮಣ್ಣನ್ನು ಫಲವತ್ತತೆ ರಹಿತವಾಗಿಸುತ್ತದೆ. ಅರಣ್ಯಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮರಗಳ ಎಲೆಗಳನ್ನು ಸುಡುವುದಲ್ಲದೇ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಉಂಟು ಮಾಡಿ ಅರಣ್ಯ ನಾಶಕ್ಕೆ ಕಾರಣವಾಗುತ್ತದೆ.

ಆಮೃತಶಿಲೆಯಿಂದ ನಿರ್ಮಿತವಾದ ತಾಜ್‍ಮಹಲ್‍ನಂತರ ಐತಿಹಾಸಿಕ ಕಟ್ಟಡಗಳನ್ನು ಆಮ್ಲ ಮಳೆ ಸವೆಸುತ್ತದೆ. ಆಮ್ಲ ಮಳೆಗೆ ಕಾರಣವಾಗುವ ವಾಯುಮಾಲಿನ್ಯ ಕಾರಕಗಳು, ಉಸಿರಾಟದ ತೊಂದರೆಗಳು, ಅಸ್ತಮಾ ಮತ್ತು ಶ್ವಾಸಕೋಶಗಳ ಖಾಯಿಲೆಗಳು ಬರುತ್ತವೆ. ಮೇಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸೌರಶಕ್ತಿ, ಪವನಶಕ್ತಿ ಮತ್ತು ಜಲವಿದ್ಯುತ್ ಶಕ್ತಿಯಂತಹ ಹಸಿರು ಇಂಧನಗಳ ಬಳಕೆಯನ್ನು ಹೆಚ್ಚಿಸಬೇಕು.

ಆಮ್ಲ ಮಳೆಯು ಹೆಚ್ಚಾಗಿ ಮಾನವ ಚಟುವಟಿಕೆಗಳಿಂದ ಉಂಟಾಗುತ್ತದೆ. ಸ್ವಚ್ಚ ಇಂಧನ ಮತ್ತು ಜವಾಬ್ದಾರಿಯುತ ಕೈಗಾರಿಕಾ ನಿಯಮಗಳ ಮೂಲಕ ಇದನ್ನು ತಡೆಗಟ್ಟಬಹುದು ಎಂದು ವೈಜ್ಞಾನಿಕವಾಗಿ ಅಭಿಪ್ರಾಯ ಪಡಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now