Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಯ್ ಆತ್ಮಹತ್ಯೆ ಕೇಸ್ : ಎಸ್ಐಟಿ ರಚನೆ, ವಂಶೀಕೃಷ್ಣ ನೇತೃತ್ವದಲ್ಲಿ ತನಿಖೆ ಶುರು

---Advertisement---

ಬೆಂಗಳೂರು: ನಿನ್ನೆ ಇಡೀ ರಾಜ್ಯವನ್ನೇ ಶಾಕ್ ಮಾಡಿದ್ದು ರಾಯ್ ಆತ್ಮಹತ್ಯೆ. ಉದ್ಯಮದಲ್ಲಿ ದೊಡ್ಡಮಟ್ಟಕ್ಕೆ ಬೆಳೆದಿದ್ದಂತ ವ್ಯಕ್ತಿ ತನ್ನದೇ ಗನ್ ನಲ್ಲಿ ಶೂಟ್ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುವುದು ಅಂದ್ರೆ ಸುಮ್ಮನೆಯ ಮಾತಾ..? ಜೀವನದ ಬಗ್ಗೆ ಸ್ಪೂರ್ತಿಯ ಮಾತುಗಳನ್ನಾಡಿ, ಅವರೇ ಆತ್ಮಹತ್ಯೆ ಮಾಡಿಕೊಂಡರಲ್ಲಾ ಎಂಬ ಪ್ರಶ್ನೆಗಳ ಜೊತೆಗೆ ಕೇವಲ ಐಟಿ ತನಿಖೆಗೆ ಹೆದರಿ ಅವರು ಆತ್ಮಹತ್ಯೆ ಮಾಡಿಕೊಳ್ಳುವವರು ಅಲ್ಲ ಎಂಬೆಲ್ಲಾ ಚರ್ಚೆಗಳು ಶುರುವಾಗಿವೆ. ಹೀಗಾಗಿಯೇ ರಾಯ್ ಆತ್ಮಹತ್ಯೆ ಕೇಸ್ ಗೆ ಎಸ್ಐಟಿ ಎಂಟ್ರಿಯಾಗಿದೆ.

 

ಅಶೋಕ ನಗರ ವ್ಯಾಪ್ತಿಗೆ ಸೇರಿದ್ದ ಕಾರಣ ನಿನ್ನೆಯಿಂದಾನೂ ಎಲ್ಲಾ ರೀತಿಯಾದ ತನಿಖೆಯನ್ನು ಅಶೋಕ ನಗರ ಪೊಲೀಸರು ಮಾಡ್ತಾ ಇದ್ದರು. ಇದೀಗ ಎಸ್ಐಟಿ ತಂಡವನ್ನು ರಚನೆ ಮಾಡಿದ್ದು, ಅಶೋಕ ನಗರ ಪೊಲೀಸರು ತಮ್ಮ ಬಳಿ ಇದ್ದಂತ, ಸಂಬಂಧಪಟ್ಟ ದಾಖಲೆಗಳನ್ನು ಎಸ್ಐಟಿಗೆ ರವಾನೆ ಮಾಡಲಿದ್ದಾರೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ಅನ್ನು ರಚನೆ ಮಾಡಲಾಗಿದೆ. ಈ ಎಸ್ಐಟಿ ತಂಡದಲ್ಲಿ ಬೆಂಗಳೂರು ದಕ್ಷಿಣ ವಿಭಾಗ್ ಡಿಸಿಪಿ ಲೋಕೇಶ್ ಕೂಡ ಇರಲಿದ್ದಾರೆ.

 

ಎಸ್ಐಟಿ ನೇತೃತ್ವವನ್ನು ವಹಿಸಿರುವಂತ ಜಂಟು ಪೊಲೀಸ್ ಕಮಿಷನರ್ ವಂಶಿ ಕೃಷ್ಣ ನಿನ್ನೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆಯನ್ನು ಮಾಡಿದ್ದಾರೆ. ಈಗ ತನಿಖೆಯ ನೇತೃತ್ವ ವಹಿಸಿ, ಎಲ್ಲಾ ಆಯಾಮಗಳಿಂದಾನೂ ಆತ್ಮಹತ್ಯೆ ಬಗ್ಗೆ ತನಿಖೆ ನಡೆಸಲಿದ್ದಾರೆ. ನಿಜಕ್ಕೂ ರಾಯ್ ಅವರು ಐಟಿ ದಾಳಿಗೇನೆ ಹೆದರಿದರಾ..? ಹಿಂದೆ ಬೇರೆ ಯಾರಾದ್ರೂ ಇದ್ದಾರಾ ಈ ಎಲ್ಲಾ ಪ್ರಶ್ನೆಗಳಿಗೂ ಎಸ್ಐಟಿ ತಂಡ ತನಿಖೆ ನಡೆಸಿದ ಬಳಿಕ ಉತ್ತರ ಸಿಗುವ ನಿರೀಕ್ಷೆ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now