ಅನಂತ್ ಸುಬ್ಬುರಾವ್ ಮಗಳ ಬೇಡಿಕೆ ಏನು..? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

1 Min Read

ಬೆಂಗಳೂರು : ಸಾರಿಗೆ ನೌಕರರ ಜೊತೆಗೆ ಸದಾ ನಿಂತಿದ್ದವರು ಅನಂತ್ ಸುಬ್ಬುರಾವ್. ನೌಕರರು ಏನೇ ಬೇಡಿಕೆಗಳನ್ನ ಇಟ್ಟರು ಪ್ರತಿಭಟನೆಗೂ ಜೊತೆಗೆ ನಿಲ್ತಾ ಇದ್ರು. ಸರ್ಕಾರದ ವಿರುದ್ಧ ನೌಕರರ ಪರವಾಗಿ ಧ್ವನಿ ಎತ್ತಿದವರು ಅನಂತ್ ಸುಬ್ಬು ರಾವ್. ಆದರೆ 85 ವರ್ಷಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಸಿದ್ದಾರೆ. ಸಾರಿಗೆ ನೌಕರರು ಅನಂತ್ ಸುಬ್ಬುರಾವ್ ಅವರ ನಿಧನದಿಂದ ನೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಅಂತಿಮ ದರ್ಶನ್ ಪಡೆ್ಉ ಮಾತನ್ನಾಡಿದ್ದಾರೆ. ಅವರು ಕಾರ್ಮಿಕರ ಧ್ವನಿಯಾಗಿದ್ದರು. ಬಹಳಷ್ಟು ಕಾರ್ಮಿಕ ಹೋರಾಟವನ್ನ ಮಾಡಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೆ ಕೆಎಸ್ಆರ್ಟಿಸಿ ಕಾರ್ಮಿಕರ ಪರವಾಗಿ ಅವರು ಬಂದಿದ್ದರು. ಕೊನೆ ಉಸಿರು ಇರುವ ತನಕವೂ ಕಾರ್ಮಿಕರ ಪರ ಕೆಲಸ ಮಾಡಿದ್ದಾರೆ. ಇವತ್ತು ಹೋರಾಟ ಇಟ್ಟುಕೊಂಡಿದ್ದರು. ಮುಂದಕ್ಕೆ ಹಾಕಿರಬೇಕು. ನನಗೆ ಬಹಳ ದಿನಗಳಿಂದ ಪರಿಚಯ. ನಾನು ಸ್ವಲ್ಪ ದಿನ ಕೆಎಸ್ಆರ್ಟಿಸಿ ಮಿನಿಸ್ಟರ್ ಆಗಿದ್ದೆ. ಆಗಿನಿಂದ ತುಂಬಾ ಪರಿಚಯ ಅವರ ಸಾವಿನ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ. ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ.

ಜಾತ್ಯಾತೀತ ವ್ಯಕ್ತಿ. ಅವರ ಮಗಳನ್ನು ಬೇರೆ ಜಾತಿಯವರಿಗೆ ಮುಂದೆ ನಿಂತು ಮಾಡಿಕೊಟ್ಟು ಸ್ಪೂರ್ತಿಯಾಗಿದ್ದಾರೆ ಎಂದರು. ಇದೇ ವೇಳೆ ಅವರ ಮಗಳು 38 ತಿಂಗಳ ಬಾಕಿ ಇರುವ ವೇತನ ಹಾಗೂ ಹೊಸ ಅಗ್ರಿಮೆಂಟ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಸಂಬಂಧ ರಾಮಲಿಂಗಾ ರೆಡ್ಡಿ ಅವರ ಜೊತೆಗೆ ಮಾತನಾಡ್ತೀನಿ ಎಂದಿದ್ದಾರೆ.

Share This Article
Enable Notifications OK No thanks