Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಸದುರ್ಗ | ಫೆ.1 ರಂದು ಕುಂದೂರು ಗೊಲ್ಲರಹಟ್ಟಿ ಅಂಭಾದೇವಿ ಜಾತ್ರೆ

---Advertisement---

 

ಸುದ್ದಿಒನ್, ಹೊಸದುರ್ಗ, ಜನವರಿ. 28 : ತಾಲ್ಲೂಕಿನ ಬಾಗೂರು ಸಮೀಪದ ಕುಂದೂರು ಗೊಲ್ಲರಹಟ್ಟಿಯ ಗೋವರ್ಧನಗಿರಿ ಜಗದಾಂಬ ಮಹಾಸಂಸ್ಥಾನ ಮಠದಲ್ಲಿ ಜ.31 ರಿಂದ ಫೆ.2ರವರೆಗೆ 13ನೇ ವರ್ಷದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಜರುಗಲಿದೆ.

ಮಹಾಸಂಸ್ಥಾನ ಮಠದ ತಿಮ್ಮಪ್ಪ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಕಾರ್ಯಗಳು ನಡೆಯಲಿದ್ದು, ಜ.31ರಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೆ ಆರಂಭವಾಗಲಿದೆ. ಅದೇದಿನ ಮಧ್ಯಾಹ್ನ ಅಂಭಾದೇವಿ ಮತ್ತು ಲಕ್ಷ್ಮೀವೆಂಕಟೇಶ್ವರ ದೇವರಿಗೆ ಮಹಾಭೀಷೇಕ ಪೂಜೆ ಜರುಗಲಿದೆ.

ಫೆ.1ರಂದು ಭಾರತ್ ಹುಣ್ಣಿಮೆ ದಿನದಂದು ಬೆಳಿಗ್ಗೆ 10.30ರಿಂದ ತಿಮ್ಮಪ್ಪ ಸ್ವಾಮೀಜಿಯವರ ಗೋವರ್ಧಗಿರಿ ಸಿಂಹಾಸನ ಪೀಠಾರೋಹಣ ನಡೆಯಲಿದ್ದು, ನಂತರ ಸಂಜೆ 5ಕ್ಕೆ ಅಂಭಾದೇವಿ ಬ್ರಹ್ಮರಥೋತ್ಸವ ಜರುಗಲಿದೆ. ರಥೋತ್ಸವದ ನಂತರ ಗೋವರ್ಧನಗಿರಿ ಧರ್ಮದ ಬಾವುಟ ಹರಾಜು ಹಾಕಲಾಗುವುದು. ಫೆ.2ರಂದು ಸಂಜೆ 4.30ಕ್ಕೆ ಕುಂಭೋತ್ಸವ ಆಚರಣೆಯೊಂದಿಗೆ ಜಾತ್ರೆ ಕೊನೆಗೊಳ್ಳಲಿದೆ. ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now