Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕುರಿ ಮೇಕೆ ಕಳ್ಳತನ : ನಾಯಕನಹಟ್ಟಿ ಪೊಲೀಸರಿಂದ ಐವರ ಬಂಧನ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜನವರಿ. 22 : ಕುರಿ ಹಾಗೂ ಮೇಕೆ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಿಕ್ಕ ಉಳ್ಳಾರ್ತಿಯ ಸಣ್ಣ ಬಂಗಾರಯ್ಯ
ಮಲ್ಲೂರ ಹಳ್ಳಿಯ ರವಿಕುಮಾರ್, ರಾಜಣ್ಣ, ನಾಗೇಶ್, ಹಾಗೂ ಚಳ್ಳಕೆರೆ ಗಾಂಧಿನಗರದ ಭಾಷಾ ಎಂದು ಗುರುತಿಸಲಾಗಿದೆ. ಅವರಿಂದ ಸುಮಾರು 6,45,000 ಬೆಲೆಬಾಳುವ 1 ಗೂಡ್ಸ್ ವಾಹನ ಹಾಗೂ ನಗದು ಹಣವನ್ನ ವಶಕ್ಕೆ ಪಡೆದಿದ್ದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮನೆ ಮುಂದೆ ಮೇವಿಗೆಂದು ಕಟ್ಟಿಕೊಂಡಿದ್ದ ಕುರಿ ಹಾಗೂ ಮೇಕೆ ಗಳನ್ನ ಕಳ್ಳರು ಡಿಸೆಂಬರ್ 11‌/12/2025 ರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಚಳ್ಳಕೆರೆ ತಾಲೂಕಿನ ನೆರ್ಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ತಿಕೆಯ್ಯನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ಗ್ರಾಮದ ನಾಗರಾಜ್ ಎನ್ನುವ ರೈತ 50 ಕುರಿಗಳನ್ನ ಸಾಕಾಣಿಕೆ ಮಾಡಿಕೊಂಡು ಜೀವ ಸಾಗಿಸುತ್ತಿದ್ದ. ಇದರಲ್ಲಿ 11 ಟಗರು ಹಾಗೂ ಮೇಕೆ ಓತಗಳನ್ನ ‌ಮನೆಯ ಮುಂದೆ ರಾತ್ರಿ ಮೇವಿಗಾಗಿ ಕಟ್ಟಿಕೊಂಡಿದ್ದ ಕರಿಗಳನ್ನ ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.

ಕುರಿ ಮೇಕೆ ಕಳ್ಳತನವಾದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ನಾಯಕನಹಟ್ಟಿ ಪಿಎಸ್ಐ ಪಾಂಡುರಂಗಪ್ಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಭಂಡಾರ ಇವರ ದರ್ಶನದಲ್ಲಿ ತನಿಖೆ ನಡೆಸಿದ್ದಾರೆ. ತಾಲೂಕಿನ ವ್ಯಾಪ್ತಿಯ ಮೊನ್ನೆ ಕೋಟೆ ಗ್ರಾಮ ಹಾಗೂ ಕಾತ್ರಿಕೆಯ್ಯನಹಟ್ಟಿಯಲ್ಲಿ ಕುರಿ ಮೇಕೆಗಳನ್ನು ಕಳ್ಳತನ ಮಾಡಿದ್ದ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now