ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನ ಎದುರಿಸುತ್ತಿದೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ನಲ್ಲಿ ಗೊಂದಲ ಸೃಷ್ಟಿಯಾಗಿದೆ. ಕೆಲವರು ಈ ಮೈತ್ರಿಗೆ ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ. ಮಂಡ್ಯ ಭಾಗದಲ್ಲೂ ಈ ಸಂಬಂಧ ವಿರೋಧವಿದೆ. ಇದಕ್ಕೆ ಕುಮಾರಸ್ವಾಮಿ ಅವರನ್ನ ಮಧ್ಯ ಪ್ರವೇಶಿಸುವಂತೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, ಜಿಬಿಎ ಚುನಾವಣೆ ಅಷ್ಟೇ ಅಲ್ಲ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಗಳಿಗೂ ಪಕ್ಷದ ಸಿದ್ಧತೆ ಮಾಡಿಕೊಳ್ಳಬೇಕು. ಅದೆಲ್ಲದಕ್ಕೂ ಈಗಾಗಲೇ ನಾವೂ ಕೂಡ ತಯಾರಿ ಮಾಡಿಕೊಳ್ತಾ ಇದ್ದೀವಿ. ನಮ್ಮಲ್ಲಿ ಮುಕ್ತವಾದಂತ ತೀರ್ಮಾನ ಇಟ್ಟುಕೊಂಡಿದ್ದೇವೆ. ನಮ್ಮಿಂದ ಯಾವುದೇ ರೀತಿಯಲ್ಲಿ ಮೈತ್ರಿಯ ವಿಚಾರದಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಅನ್ನೋದು ನಮ್ಮಲ್ಲೂ ಇದೆ. ಮುಂದಿನ ದಿನಗಳಲ್ಲಿ ಯಾವ ಥರ ರಾಜಕೀಯದ ಬೆಳವಣಿಗೆ, ಸ್ಥಳೀಯ ಸಂಸ್ಥೆಗಳ ಬಗ್ಗೆ, ಸ್ಥಳೀಯವಾಗಿ ನಮ್ಮ ಬಿಜೆಪಿ ನಾಯಕರುಗಳ ತೀರ್ಮಾನ ಏನಿದೆ ಇದೆಲ್ಲವನ್ನು ನೋಡಿಕೊಂಡು ತೀರ್ಮಾನ ಮಾಡುತ್ತೇವೆ.

ಕಾಂಗ್ರೆಸ್ ದುರಾಡಳಿತ ಈ ರಾಜ್ಯದಿಂದ ಹೋಗಬೇಕು. ಅದು ನಮ್ಮ ಪಕ್ಷದ ಉದ್ದೇಶ. ಅದಕ್ಕೆ ನಾವೂ ತಯಾರಾಗಿದ್ದೀವಿ. ಆ ವಿಷಯದಲ್ಲಿ ಎಲ್ಲಾ ರೀತಿಯ ಮುಕ್ತವಾದ ತೀರ್ಮಾನವನ್ನು ಮಾಡಿದ್ದೇವೆ. ಬೆಂಗಳೂರು ನಗರ ಹಲವಾರು ವರ್ಷಗಳಿಂದ ಅಭಿವೃದ್ದಿ ಎಂಬಂತದ್ದು ಸಂಪೂರ್ಣವಾಗಿ ಸ್ಥಗಿತವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಆಗ್ತಾ ಇದೆ. ಕಸ ವಿಲೇವಾರಿ, ಗುಂಡಿ ಮುಚ್ಚೋದು ಯಾವ್ಯಾವ ಪಕ್ಷಗಳ ನಡವಳಿಕೆ, ಯಾವ್ಯಾವ ಪಕ್ಷಗಳ ಕಾಣಿಕೆ ಏನಿದೆ..? ಇದೇ ವಿಚಾರಗಳನ್ನ ಮುಂದಿಟ್ಟುಕೊಂಡು ಜನರ ಬಳಿ ಹೋಗಬೇಕಿದೆ.










