ಜನ ಸ್ವದೇಶಿ ವಸ್ತುಗಳನ್ನೇ ಕಡ್ಡಾಯವಾಗಿ ಬಳಕೆ ಮಾಡಬೇಕು : ಬ್ರಿಗೇಡಿಯರ್ ರವಿ ಮುನಿಸ್ವಾಮಿ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ.15 : ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಬೇಕು, ಇದರಿಂದ ನಮ್ಮ ರೈತರ, ವ್ಯಾಪಾರಿಗಳ ಆರ್ಥಿಕ ಶಕ್ತಿ ಹೆಚ್ಚಿಸಲು ಸಾಧ್ಯವಿದೆ. ದೇಶದ ಆರ್ಥಿಕ ಸ್ಥಿತಿ ಉನ್ನತಿ ಹೊಂದಲಿದೆ ಎಂದು ಸ್ವದೇಶಿ ಸೈಕಲ್ ಜಾಗರಣಾ ಸಮಿತಿಯ ಮುಖಂಡ ಬ್ರಿಗೇಡಿಯರ್ ರವಿ ಮುನಿಸ್ವಾಮಿ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಗೆ ನಿನ್ನೆ ಆಗಮಿಸಿದ ಸ್ವದೇಶಿ ವಸ್ತುಗಳ ಬಳಕೆ ಕುರಿತು ಹಮ್ಮಿಕೊಂಡಿರುವ ಬೈಸಿಕಲ್ ಜಾಥಾ ಬಳ್ಳಾರಿ ಜಿಲ್ಲೆಯಿಂದ ತಾಲ್ಲೂಕಿನ ರಾಂಪುರ ಮೂಲಕ ತಾಲ್ಲೂಕಿಗೆ ಬಂದ ಜಾಥಾ ಹಾನಗಲ್ ಮೂಲಕ ಬಿ.ಜಿ.ಕೆರೆ ಮೂಲಕ ಚಳ್ಳಕೆರೆಯನ್ನು ತಲುಪಿ ರಾತ್ರಿ ಚಿತ್ರದುರ್ಗವನ್ನು ತಲುಪಿತು. ಗುರುವಾರ ಕೋಟೆಯ ಮುಂಭಾಗದಲ್ಲಿ ಬೈಸಿಕಲ್ ಪಯಾಣವನ್ನು ಪ್ರಾರಂಭಿಸಿ ಮಾತನಾಡಿದ ಅವರು, ಸ್ವದೇಶಿ ವಸ್ತುಗಳ ಜಾಗೃತಿಗೆ ಸೈಕಲ್ ಯಾತ್ರೆ 35 ದಿನಗಳ ಯಾತ್ರೆ, 3500ಕಿ.ಮೀ. ಕ್ರಮಿಸುವ ಗುರಿಯನ್ನು ಹೊಂದಲಾಗಿದೆ. ಜನ ಸ್ವದೇಶಿ ವಸ್ತುಗಳನ್ನೇ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸಲು ಬೆಂಗಳೂರಿನ ಸ್ವದೇಶಿ ಬೈಸಿಕಲ್ ಜಾಗರಣಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.

ಕೆಲವರು ಜಾಗತೀಕ-ಕರಣದಿಂದ ವಿದೇಶಿ ವಸ್ತುಗಳ ಮೋಹ ಬೆಳೆಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಂಡಿದೆ ಡಿ.13ರಂದು ಬೆಂಗಳೂರಿನಲ್ಲಿ ನೀಡಲಾಗಿದೆ. ಜಾಥಾಕ್ಕೆ ಚಾಲನೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಜಾಥಾ ಭೇಟಿ ನೀಡಲಿದೆ. ಈಗಾಗಲೇ ಅಂದಾಜು 3000 ಕಿ.ಮೀ.ನಷ್ಟು ದೂರ ಕ್ರಮಿಸಿದ್ದು, ಚಿತ್ರದುರ್ಗದ ನಂತರ ಹಿರಿಯೂರು, ಶಿರಾ, ತುಮಕೂರು, ಕೋಲಾರ ಮೂಲಕ ಸಂಚರಿಸಿ ಬೆಂಗಳೂರಿನಲ್ಲಿ ಜ. 19ರಂದು ಕೊನೆಯಾಗಲಿದೆ’ ಎಂದು ಸ್ವದೇಶಿ ಸೈಕಲ್ ಜಾಗರಣಾ ಸಮಿತಿಯ ಮುಖಂಡ ಬ್ರಿಗೇಡಿಯರ್ ರವಿ ಮುನಿಸ್ವಾಮಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ನಮ್ಮ ದೇಶ ಈಗ ಸ್ವಾವಲಂಬಿಯಾಗಿದೆ, ಈ ಮುಂಚೆ ನಮಗೆ ಬೇಕಾದ ವಿವಿಧ ರೀತಿಯ ವಸ್ತುಗಳಿಗೆ ಹೂರ ದೇಶವನ್ನು ಅವಲಂಬಿಸಬೇಕಿತ್ತು ಆದರೆ ಈಗ ನಮ್ಮ ದೇಶದಲ್ಲಿಯೇ ಎಲ್ಲಾ ಉತ್ಪನ್ನಗಳನ್ನು ನಾವೇ ಸ್ವಯಂ ಆಗಿ ತಯಾರು ಮಾಡಲಾಗುತ್ತಿದೆ, ಈ ಹಿನ್ನಲೆಯಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಹಾ ಸ್ವದೇಶಿ ವಸ್ತುಗಳ ಉತ್ಪನ್ನ ಹಾಗೂ ಬಳಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ.ಇದನ್ನು ದೇಶದ ಎಲ್ಲಾ ಪ್ರಜೆಗಳು ಸಹಾ ಅನುಸರಿಸಬೇಕಿದೆ ಎಂದ ಅವರು ಈ ತಂಡದಲ್ಲಿ ಇರುವವರು ಎಲ್ಲಾ ಸೈನದಲ್ಲಿ ಬಹುತೇಲ ನಿವೃತ್ತ ಸೈನಿಕರಾಗಿದ್ದರೆ ಮತ್ತೇ ಕೆಲವರಯ ನಿವೃತ್ತ ಉನ್ನತ ಮಟ್ಟದ ಅಧಿಕಾರಿಗಳಾಗಿ ಎಲ್ಲರಿ 60 ವರ್ಷ ಮೇಲ್ಪಟವರಾಗಿದ್ದಾರೆ ಇವರಲ್ಲಿ ಇರುವ ದೇಶ ಭಕ್ತಿ ಇಂದಿನ ಯುವ ಪೀಳಿಗೆಗೆ ನಾಚುವಂತ ಆಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸುಬೇಕರ್ ರಮೇಶ್ ಜಾಗತಾಪ್, ಕಮಾಂಡರ್ ಲೀಲಕಂಟೇಶ್, ರಮೇಶ್ ನರಸಾಯಿ, ಸಹಸ್ರನಾಮ ಐಯ್ಯರ್, ಬಿಜೆಪಿ ಮುಖಂಡರಾದ ಎ.ಮುರಳಿ, ಸಂಪತ್‍ಕುಮಾರ್, ಮಾಧುರಿ ಗೀರಿಶ್, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ವಿ.ಎಚ್.ಪಿಯ ರುದ್ರೇಶ್, ಕ್ರೀಡಾಪಟು ಗಳಾದ ಚೇತನ, ಪ್ರಶಾಂತ, ಲೀಲಾಧರ್ ಠಾಕೂರ್, ಕೋಟ್ಲ ದೇವರಾಜ್, ಸೇರಿದಂತೆ ಇತರರು ಭಾಗವಹಿಸಿದ್ದರು.

ನಗರದ ಕೋಟೆಯ ಆವರಣದಿಂದ ಪ್ರಾರಂಭವಾದ ಬೈಸಿಕಲ್ ಜಾಥವೂ ತರಾಸು ಬೀದಿ, ಉಚ್ಚಂಗಿ ಯಲ್ಲಪ್ಪ ದೇವಾಲಯ ರಸ್ತೆ, ಚಿಕ್ಕಪೇಟೆ, ಆನೆ ಬಾಗಿಲು, ಸಂತೇಪೇಟೆ ವೃತ್ತ, ಬಿ.ಡಿ.ರಸ್ತೆ, ಎಸ್.ಬಿ.ಎಂ.ರಸ್ತೆ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತ, ಆಸ್ಪತ್ರೆ ಮುಂಭಾಗ, ಸ್ಟೇಡಿಯಂ ರಸ್ತೆ, ಪಂಚಚಾರ್ಯ ಕಲ್ಯಾಣ ಮಂಟಪ ರಸ್ತೆ, ಚಳ್ಳಕೆರೆ ಗೇಟ್ ಮೂಲಕ ಚಂದ್ರಪ್ಪರವರ ಕಾಲೇಜಿನ ಪಕ್ಕದಲ್ಲಿನ ಸೈನಿಕ್ ಉದ್ಯಾನವನದಲ್ಲಿ ಸಮಾರೋಪ ಮಾಡಲಾಯಿತು.

Share This Article
Enable Notifications OK No thanks