Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯ ಅವರಿದ್ದ ವೇದಿಕೆ ಮೇಲೂ ಯತ್ನಾಳ್ ಗೆ ಜೈಕಾರ : ಏನಂದ್ರು ಹಿಂದೂ ಹುಲಿ..?

---Advertisement---

ವಿಜಯಪುರ: ಇತ್ತೀಚೆಗಷ್ಟೇ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಯತ್ನಾಳ್ ಒಂದೇ ವೇದಿಕೆಯನ್ನ ಹಂಚಿಕೊಂಡಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಇದ್ದರು ಕೂಡ ಯತ್ನಾಳ್ ಬೆಂಬಲಿಗರು ಯತ್ನಾಳ್ ಪರ ಘೋಷಣೆಯನ್ನ ಕೂಗ್ತಾ ಇದ್ದರು. ಆ ಸಂಬಂಧ ಯತ್ನಾಳ್ ಅವರು ಇಂದು ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದೂಗಳ ಸಂಘಟನೆ ಆಗ್ಬೇಕು. ಇಂದು ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಆಗ್ತಾ ಇದೆ. ಕರ್ನಾಟಕದಲ್ಲಿ ಬಾಂಗ್ಲಾದೇಶದವರು, ರೊಹಿಂಗ್ಯಾಗಳು ಇರುವುದರಿಂದ ಮುಂದೊಂದು ದಿನ ಬಾಂಗ್ಲಾದೇಶದಲ್ಲಿ ಆದಂತ ಪರಿಸ್ಥಿತಿ ಕರ್ನಾಟಕದಲ್ಲಿ ಹಿಂದೂಗಳಿಗೆ ಬರಬಾರದು ಅಂತ ಹೇಳಿ, ಹಿಂದುಗಳು ಸಂಘಟಿತರಾಗಬೇಕು. ಬಾಂಗ್ಲಾದೇಶದಲ್ಲಾದ ಘಟನೆ ಬಗ್ಗೆ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ನಮ್ಮ ಸನಾತನ ಧರ್ಮ, ಭಾರತ ಉಳಿಯುವುದಕ್ಕೆ ಸಂಘಟನೆ ಅನಿವಾರ್ಯತೆ ಇದೆ. ಈ ಮೂಲಕ ಹಿಂದೂ ಧರ್ಮ ಉಳಿಸುವುದಕ್ಕೂ ಸಾಧ್ಯತೆ ಇದೆ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ನಾನು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ‌.

ವಿಜಯಪುರದ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಮುಜುಗರ ಆಯ್ತು ಎಂಬ ಮಾತಿಗೆ, ಯಾವಾಗಲೂ ಒಂದನ್ನ ತಿಳಿದುಕೊಳ್ಳಬೇಕು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖ್ಯಮಂತ್ರಿ ಅಲ್ಲ, ರಾಜ್ಯದ ಮುಖ್ಯಮಂತ್ರಿ ಅನ್ನೋದನ್ನ. ನಮ್ಮ ಪ್ರಧಾನ ಮಂತ್ರಿಗಳು ಬಿಜೆಪಿ ಪ್ರಧಾನಿಯಲ್ಲ ದೇಶದ ಪ್ರಧಾನಿಗಳು. ನಾನೇಗೆ ಸಿದ್ದರಾಮಯ್ಯ ಅವರಿಗೆ ಗೌರವ ಕೊಟ್ಟಿದ್ದೀನಿ, ಅದೇ ನಿರೀಕ್ಷೆ ಮಾಡ್ತೇನೆ. ನಮ್ಮ ಪ್ರಧಾನಿಗಳಿಗೂ ಅಷ್ಟೇ ಗೌರವ ಕೊಡಬೇಕು ಅಂತ. ಸಿದ್ದರಾಮಯ್ಯ ಅವರಿಗೆ ಬಹಳಷ್ಟು ಮಂದಿ ಹೋಗಿ ಹೇಳಿರ್ತಾರೆ. ಅವ ಏನು ಇಲ್ಲ ಜೀರೋ ಇರ್ತಾನೇ ಅಂತ. ಸಿದ್ದರಾಮಯ್ಯ ಅವರು ಬಂದ್ಮೇಲೆ ನೋಡಿದ್ದಾರೆ ಎಂದು ಜೈಕಾರದ‌ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಆಗಸ್ಟ್ 17ರ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಶುಭಫಲ, ಹಣಕಾಸಿನಲ್ಲಿ ಲಾಭದ ಯೋಗ!

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?