ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಹೊಸದುರ್ಗ, ಜನವರಿ. 08 : ಮದುವೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಮಗನೊಬ್ಬ ತಂದೆಯನ್ನ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ತಂದೆ ಮಲಗಿದ್ದ ವೇಳೆ ರಾಡ್ ನಿಂದ ತಲೆಗೆ ಹೊಡೆದು ಹತ್ಯೆಗೈದಿರುವಂತ ಘಟನೆ ತಾಲ್ಲೂಕಿನ ಅತ್ತಿಘಟ್ಟದಲ್ಲಿ ನಡೆದಿದೆ..

ಸಣ್ಣನಿಂಗಪ್ಪ ಎನ್ನುವ ವ್ಯಕ್ತಿ ಮಗನಿಂದ ಕೊಲೆಯಾಗಿದ್ದಾರೆ. ಮೃತ ಸಣ್ಣನಿಂಗಪ್ಪನಿಗೆ ಮೂವರು ಮಕ್ಕಳು. ಹಿರಿಯ ಮಗ ಮಾರುತಿಯಾಗಿದ್ದರೇ, ಎರಡನೇ ಮಗ ನಿಂಗರಾಜ, ಕಿರಿಯ ಮಗಳು ಜ್ಯೋತಿ. ಮಾರುತಿ ಹಾಗೂ ಜ್ಯೋತಿಗೆ ಮದುವೆಯಾಗಿತ್ತು. ಎರಡನೇ ಮಗ ನಿಂಗರಾಜ ಮದುವೆ ಆಗಿರಲಿಲ್ಲ.ಈ ವಿಚಾರಕ್ಕೆ ನಿಂಗರಾಜು ತಂದೆ ಸಣ್ಣ ನಿಂಗಪ್ಪ ಜೊತೆಗೆ ಜಗಳ ಮಾಡಿದ್ದಾನೆ. ಈ ವೇಳೆ ಹೊಸದುರ್ಗದಲ್ಲಿ ಇದ್ದಂತ ಹಿರಿಯ ಮಗ ಮಾರುತಿಯನ್ನು ಮನೆಗೆ ಕರೆದು ಬುದ್ದಿ ಹೇಳಿಸಿದ್ದಾರೆ. ಆಗ ಸುಮ್ಮನೇ ಆಗಿದ್ದಂತ ನಿಂಗರಾಜ, 11 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದಂತ ತಂದೆ ಸಣ್ಣನಿಂಗಪ್ಪನಿಗೆ ಟ್ರ್ಯಾಕ್ಟರ್ ರಾಡ್ ನಿಂದ ತಲೆ ಹೊಡೆದು ಪರಾರಿ ಆಗಿದ್ದಾನೆ.
ಹಲ್ಲೆಗೆ ಒಳಗಾಗಿ ತೀವ್ರ ರಕ್ತಸ್ರಾವಗೊಂಡಿದ್ದ ಸಣ್ಣ ನಿಂಗಪ್ಪನನ್ನು ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪರೀಕ್ಷೆ ನಡೆಸಿದಂತ ವೈದ್ಯರು ಸಣ್ಣ ನಿಂಗಪ್ಪ ಮೃತ ಪಟ್ಟಿರುವ ವಿಷಯವನ್ನು ಖಚಿತ ಪಡಿಸಿದ್ದಾರೆ.
ಹಿರಿಯ ಮಗ ಮಾರುತಿ, ಹೊಸದುರ್ಗ ಪೊಲೀಸ್ ಠಾಣೆಗೆ ತೆರಳಿ ತಮ್ಮ ನಿಂಗರಾಜ, ತಂದೆ ಸಣ್ಣ ನಿಂಗಪ್ಪನನ್ನು ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡ ಹೊಸದುರ್ಗ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ರಮೇಶ್ ನೇತೃತ್ವದಲ್ಲಿ ಪಿಎಸ್‌ಐ ಮಹೇಶ್ ಕುಮಾರ್.ಎಸ್, ಕ್ರೈಂ ಪಿಸಿ ರಮೇಶ್ ಕೊಲೆ ಆರೋಪಿ ನಿಂಗರಾಜ ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















