ಬೆಂಗಳೂರು: ಎಂ.ಪಿ.ರೇಣುಕಾಚಾರ್ಯ ಇಂದು ಇದ್ದಕ್ಕಿದ್ದ ಹಾಗೇ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದರು. 20 ನಿಮಿಷಕ್ಕೂ ಹೆಚ್ಚಿನ ಕಾಲ ಚರ್ಚೆಯನ್ನು ಮಾಡಿದರು. ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನ್ನಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮೊದಲನೆಯದಾಗಿ ಹೊಸ ವರ್ಷದ ಶುಭಾಶಯ ಕೋರಿದ್ದೇನೆ. ಭದ್ರಾ ಜಲಾಶಯ ನಿರಾವರಿ ನಿಗಮದಲ್ಲಿ ಒಂದು ಲಕ್ಷದ ಐದು ಸಾವಿರ ಹೆಕ್ಟೇರ್ ಇದೆ. ಭದ್ರಾ ಜಲಾಶಯದ ಅಚ್ಚುಕಟ್ಟು. ಅದನ್ನ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರಿಸಲು ಹೊರಟಿದ್ದಾರೆ. ನಾನು ವಿನಂತಿ ಮಾಡಿದ್ದೇನೆ. 2 ಲಕ್ಷದ 25 ಸಾವಿರ ಹೆಕ್ಟೇರ್ ಹನಿ ನೀರಾವರಿ, ಚಿತ್ರದುರ್ಗ ಮತ್ತು ತುಮಕೂರಿಗೆ, ಒಂದು ವೇಳೆ ಭದ್ರಾ ಜಲಾಶಯವನ್ನ ವಿಶ್ವೇಶ್ವರಯ್ಯ ಯೋಜನೆಗೆ ಸೇರಿಸಿದ್ರೆ, ದಾವಣಗೆರೆ ಜಿಲ್ಲೆಯ ಹಕ್ಕು ಹೋಗುತ್ತೆ. ಹಾಗಾಗಿ ಮಾನ್ಯ ಉಪಮುಖ್ಯಮಂತ್ರಿಗಳನ್ನ ಭೇಟಿ ಮಾಡಿ, ಇದನ್ನ ಮ್ಯೂಸಿಯಂನಲ್ಲಿ ಸೇರಿಸುವುದು ಬೇಡ ಎಂದು ಮನವಿ ಮಾಡಿದ್ದೇನೆ.
ಕರ್ನಾಟಕ ನೀರಾವರಿ ನಿಗಮದಲ್ಲಿಯೇ ಇರಲಿ ಎಂದು ಮನವಿ ಮಾಡಿದ್ದೇನೆ. ಸುಮಾರು 20 ನಿಮಿಷಗಳ ಕಾಲ ಬಹಳಷ್ಟು ಆತ್ಮೀಯವಾಗಿ ಮಾತನ್ನಾಡಿದ್ದಾರೆ. ನಮ್ಮ ಉದ್ದೇಶ ಇಲ್ಲಿ ರಾಜಕಾರಣಕ್ಕಾಗಿ ಭೇಟಿ ಮಾಡಲ್ಲ. ನಮ್ಮ ಅವರ ನಡುವೆ ಆತ್ಮೀಯ ಸಂಬಂಧ, ವಿಶ್ವಾಸಕ್ಕೆ ಮಾತನ್ನಾಡಿದ್ದೀವಿ. ಇಲ್ಲಿ ಯಾವುದೇ ರಾಜಕೀಯ ವಿಚಾರಗಳನ್ನು ಮಾತನ್ನಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಭದ್ರಾ ಜಲಾಶಯ ನಮ್ಮ ಹಕ್ಕು. ನಮ್ಮ ದಾವಣಗೆರೆ ಜಿಲ್ಲೆಗೆ ಸೇರಿದ್ದು. ಒಂದು ಲಕ್ಷದ ಐದು ಸಾವಿರ ಹೆಕ್ಟೇರ್. ನೋಡೋಣಾ ಚರ್ಚೆ ಮಾಡ್ತೀವಿ ಅಂತ ಹೇಳಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಬೇಕು. ಅವರ ಬಳಿಯೂ ಮನವಿ ಮಾಡ್ತೇನೆ ಎಂದಿದ್ದಾರೆ.

