Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿ. 30 ರಂದು ಹೇಮದಳ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ

---Advertisement---

ಸುದ್ದಿಒನ್, ಹಿರಿಯೂರು, ಡಿಸೆಂಬರ್. 29 : ತಾಲ್ಲೂಕಿನ ಹೇಮದಳ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 30, 31 ಮತ್ತು ಜನವರಿ 01 ರವರೆಗೂ ವೈಕುಂಠ ಏಕಾದಶಿ‌ಹಾಗೂ ಶ್ರೀ ಸ್ವಾಮಿಯವರ ಪ್ರತಿಷ್ಠಾಪನ ದಿವಸದ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಲಿದೆ.

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ ವರ್ಷಂಗಳು 1947ಕ್ಕೆ ಸರಿಯಾಗಿ ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ವೈಕುಂಠ ಏಕಾದಶಿ ತಿಥಿ ಮಂಗಳವಾರದಿಂದ ಪ್ರಾರಂಭಗೊಂಡು  ತ್ರಯೋದಶಿ ಗುರುವಾರದವರೆಗೂ ತ್ರಿದಿನ ಸಂಕಲ್ಪ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಪ್ರಧಾನದೇವತೆಗಳ ಮತ್ತು ಪರಿವಾರ ದೇವತೆಗಳ ಕಲಶಾರಾಧನೆ ಮತ್ತು ಹೋಮ ಹವನಾದಿಗಳು ನಡೆಯಲಿವೆ.

ಡಿಸೆಂಬರ್ 30 ರಂದು ಮಂಗಳವಾರ, ವೈಕುಂಠ ಏಕಾದಶಿಯಂದು ಬೆಳಿಗ್ಗೆ ಸ್ವಾಮಿಯವರಿಗೆ ಸುಪ್ರಭಾತ ಸೇವೆ, ಅಭಿಷೇಕ, ಅಲಂಕಾರ, ತೋಮಾಲೆ ಸೇವೆ, ವೇದಪಾರಾಯಣ, ಮಹಾನೈವೇದ್ಯ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವಿರುತ್ತದೆ.

ಜನವರಿ 01 ರ ಗುರುವಾರ, ತ್ರಯೋದಶಿ, ಬೆಳಿಗ್ಗೆ  ಶ್ರೀವೆಂಕಟೇಶ ಸುಪ್ರಭಾತ ಸೇವೆ, ಕಳಶ ವಿಸರ್ಜನೆ, ಆಲಯ ಪ್ರದಕ್ಷಣೆ, ಪಂಚಾಮೃತ ಮಹಾ ದ್ರವ್ಯ ಅಭಿಷೇಕ, ಕುಂಭಾಭಿಷೇಕ, ವಿಶೇಷ ಪುಷ್ಪಲಂಕಾರ, ತೋಮಾಲೆ ಸೇವೆ, ಗೋದರ್ಶನಾದಿ ದಶದರ್ಶನಗಳು, ಕೂಷ್ಮಾಂಡ ಬಲಿ, ಕದಲಿ ವೃಕ್ಷ ಛೇದನ, ಅಷ್ಟ ದಿಗ್ಬಲಿ, ಅಷ್ಟೋತ್ತರ ಸೇವೆ, ಮಹಾಪ್ರಸಾದ ನೈವೇದ್ಯ, ಅಷ್ಟಾವಧಾನ ಸೇವೆ ಶಾತುಮರೈ, ರಾಷ್ಟ್ರ ಆಶೀರ್ವಾದ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.

ಈ ಪುಣ್ಯಪ್ರದವಾದ ಶ್ರೀವಾರಿಯವರ ಕೈಂಕರ್ಯದಲ್ಲಿ ಸದ್ಭಕ್ತ ಜನರೆಲ್ಲರೂ ಪಾಲ್ಗೊಂಡು ಶ್ರೀ ಹರಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಹರಿಯ ಚರಣ ಸೇವಕ ಶ್ರೀ
ಜಗದೀಶ ಹುಲಿಕಲ್ ಮತ್ತು ದೇಗುಲದ ಸಮಿತಿಯವರು ಹಾಗೂ ಹೇಮದಳ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now