Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ ಬಸ್ ದುರಂತ : ನಾಪತ್ತೆಯಾಗಿದ್ದ ಮಾನಸ ಶವವಾಗಿ ಪತ್ತೆ.. ಮದುವೆ ಬಗ್ಗೆ ನೆನೆದು ತಂದೆ ಕಣ್ಣೀರು

---Advertisement---

ಚಿತ್ರದುರ್ಗ: ಕ್ರಿಸ್ ಮಸ್ ರಜೆ ಇದೆ ಅಂತ ತನ್ನ ಸ್ನೇಹಿತೆಯರ ಜೊತೆಗೆ ಬಸ್ ಹತ್ತಿದ್ದ ಮಾನಸ ಇಂದು ಹೆಣವಾಗಿ ಪೋಷಕರಿಗೆ ಕಾಣಿಸಿದ್ದಾಳೆ. ಬೆಳಗ್ಗೆಯೇ ಬಸ್ ದುರಂತದ ವಿಚಾರ ತಿಳಿದು, ಮಗಳು ಅದೇ ಬಸ್ ನಲ್ಲಿ ಇದ್ದಳು ಎಂಬ ವಿಚಾರ ಗೊತ್ತಾದ ಕೂಡಲೇ ಮಾನಸ ತಂದೆ – ತಾಯಿ ದುರಂತದ ಸ್ಥಳಕ್ಕೆ ಓಡೋಡಿ ಬಂದರು. ಮಗಳು ಕಾಣದೆ ಕಂಗಾಲಾಗಿದ್ದಾರೆ. ಇದೀಗ ಮಾನಸ ಸಿಕ್ಕಿದ್ದಾಳೆ. ಆದರೆ ಜೀವಂತವಾಗಿ ಅಲ್ಲ. ಮಗಳ ಮದುವೆ ಮಾಡಬೇಕೆಂದು ಕನಸು ಕಂಡಿದ್ದ ತಂದೆ ಆಘಾತಗೊಂಡುದ್ದಾರೆ.

 

ಮಾನಸ ಮೃತದೇಹವನ್ನ ತಂದೆ ಚಂದ್ರೆಗೌಡ ಗುರುತು ಹಿಡಿದಿದ್ದಾರೆ. ಮಗಳ ಕುತ್ತಿಗೆಯಲ್ಲಿದ್ದ ಗಣೇಶನ ಲಾಕೆಟ್ ನೋಡಿ ಕಂಡು ಹಿಡಿದಿದ್ದಾರೆ. ದೇಹಗಳು ಸಾಕಷ್ಟು ಸುಟ್ಟಿವೆ. ಹೀಗಾಗಿ ಮೃತದೇಹಗಳನ್ನು ಕಂಡು ಹಿಡಿಯುವುದು ಕಷ್ಟವಾಗಿದೆ. ಆಸ್ಪತ್ರೆಗಳಲ್ಲೆಲ್ಲಾ ಹೋಗಿ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಕಡೆಗೆ ಘಟನಾ ಸ್ಥಳಕ್ಕೆ ಬಂದಾಗ ಮಗಳ ಶವ ಕಂಡಿದೆ.

ಬೆಳಗ್ಗೆ ಆಕೆಯ ಸ್ನೇಹಿತೆ ಮಿಲನಾ ಕರೆ ಮಾಡಿದ್ದಳು. ಈ ರೀತಿ ಆಕ್ಸಿಡೆಂಟ್ ಆಗಿದೆ. ಬಸ್ ಎಲ್ಲಾ ಸುಟ್ಟು ಹೋಗಿದೆ ಎಂದು ತಿಳಿಸಿದಳು. ತಕ್ಷಣ ಹೊರಟು ಕಾರಲ್ಲಿ ಬಂದೆವು. ಮಾರ್ಚ್ ಏಪ್ರಿಲ್ ನಲ್ಲಿ ಮದುವೆ ಫಿಕ್ಸ್ ಆಗಿತ್ತು. ಕಳೆದ ಸೋಮವಾರ ರಾತ್ರಿ ಬಸ್ ಹತ್ತಿಸಿದ್ದೆವು. ಅದೇ ಕಡೆ. ಬೆಂಗಳೂರಿಗೆ ಹೋಗ್ತಿನಿ ಅಂತ ಹೋದಳು. ನಾವೂ ಚನ್ನರಾಯಪಟ್ಟಣದಲ್ಲಿಯೇ ಇದ್ದವು. ಜೀವಂತವಾಗಿ ಇದ್ದಾಳೆ ಎಂಬ ಆಸೆಯಿಂದಾನೆ ಇದ್ದೆವು. ಆದರೆ ಇಲ್ಲಿ ಹೆಣವಾಗಿ ಸಿಕ್ಕಳು ಎಂದು ತಂದೆ ಚಂದ್ರೆಗೌಡ ದುಃಖ ವ್ಯಕ್ತಪಡಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...