ಬೆಳಗಾವಿ: ರೈತರಿಗಾಗಿ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿಹಿ ಸುದ್ದಿ ನೀಡಿದ್ದಾರೆ. ಹಾಲಿಗೆ ನೀಡುವ ಪ್ರೋತ್ಸಾಹ ಧನದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಜೆಪಿಯವರಿಗೂ ತಿರುಗೇಟು ನೀಡಿದ್ದಾರೆ. 630 ಕೋಟಿ ರೂಪಾಯಿಯನ್ನ ಬಿಟ್ಟು ಹೋಗಿದ್ರಿ. ಅದನ್ನೆಲ್ಲಾ ತೀರಿಸಿದವನು ನಾನೇ. ಅದು ಉತ್ತರ ಕರ್ನಾಟಕಕ್ಕೆ ಸೇರಿಕೊಳ್ಳುತ್ತದೆ. ಒಂದು ದಿನಕ್ಕೆ 5 ಕೋಟಿ ಪ್ರೋತ್ಸಾಹಧನವನ್ನ ಕೊಡ್ತಾ ಇದ್ದೀವಿ ಎಂದಿದ್ದಾರೆ.
ಇದರ ನಡುವೆ ರೈತರಿಗೆ ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡಿದ್ದಾರೆ. ಪ್ರಸ್ತುತ ಪ್ರತಿ ಲೀಟರ್ ಗೆ 5 ರೂಪಾಯಿ ಸಿಕ್ತಾ ಇದೆ. ಈ ವರ್ಷದ ಅವಧಿಯಲ್ಲಿ 7 ರೂಪಾಯಿಗೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಯೂನಿಯನ್ ಅವರು ಕ್ಯಾಟ್ಲಿಫೇಡ್ ರೇಟ್ ಜಾಸ್ತಿ ಮಾಡಿದ್ದಾರೆ. ನೀವು ಕೊಡುವ ಸಬ್ಸಿಡಿಯಿಂದ ರೈತರಿಗೆ ಲಾಭ ಆಗ್ತಾ ಇಲ್ಲ ಎಂಬ ವಿಪಕ್ಷದವರ ಮಾತಿಗೆ, ರೈತರಿಗೆ ಸಬ್ಸಿಡಿ ತಲುಪುತ್ತಾ ಇಲ್ವಾ. ಸಹಾಯಧನವಾಗಿ ಸರ್ಕಾರದಿಂದ 5 ರೂಪಾಯಿ ಕೊಡುತ್ತಾ ಇದ್ದೀವಿ. ಈಗ 7 ರೂಪಾಯಿ ಕೊಡಬೇಕು ಅಂತ ಹೇಳಿದ್ದೀರಲ್ವಾ ಅದನ್ನು ಈ ವರ್ಷದ ಅವಧಿಯಲ್ಲಿ ಕೊಟ್ಟೆ ಕೊಡ್ತೀವಿ ಎಂದು ಭರವಸೆ ನೀಡಿದ್ದಾರೆ.
ಯಾವಾಗಲೂ ಪ್ರಣಾಳಿಕೆ ಮಾಡುವುದು ಐದು ವರ್ಷಕ್ಕೆ. ಪ್ರಣಾಳಿಕೆಯನ್ನ ಫುಲ್ ಫಿಲ್ ಮಾಡಿಲ್ಲ ಅಂತ ಬೆಲ್ಲದ್ ಮಾತನಾಡಿದ್ದಾರೆ, ನೀವೂ ಮಾತನಾಡಿದ್ದೀರಿ. 2013-18ರವರೆಗೆ 165 ಭರವಸೆಗಳನ್ನ ಕೊಟ್ಟಿದ್ದೇವೆ. ಅದರಲ್ಲಿ 158 ಭರವಸೆಗಳನ್ನ ಈಡೇರಿಸಿದ್ದೇವೆ. ಬೇಕಾದರೆ ಪ್ರಣಾಳಿಕೆಯನ್ನ ಇಟ್ಟುಕೊಂಡು ನೋಡಿ. ಕೊನೆಯ ವರ್ಷದ 2017-18ರಲ್ಲಿ ಬಜೆಟ್ ಮಂಡಿಸಿದ್ದೀನಲ್ಲ ಅದನ್ನ ತೆಗೆದು ನೋಡಿದರೇನೆ ನಾನು ಈಡೇರಿಸಿದ್ದೀನಾ ಇಲ್ವಾ ಎಂಬುದು ಗೊತ್ತಾಗಿ ಬಿಡುತ್ತದೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.




