Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೈಹಿಕವಾಗಿ ಸಧೃಡವಾಗಿರಲು ಕ್ರೀಡೆಯಲ್ಲಿ ಪಾಲ್ಗೊಳ್ಳಿ : ಡಾ. ಬಸವಕುಮಾರ ಸ್ವಾಮೀಜಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಡಿ. 17 : ಮನುಷ್ಯ ದೈಹಿಕವಾಗಿ ಸಧೃಡವಾಗಿರಲು ಯಾವುದಾದರೊಂದು ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಿದೆ ಎಂದು ಡಾ. ಬಸವಕುಮಾರ್ ಸ್ವಾಮೀಜಿ ತಿಳಿಸಿದರು.

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ದುರ್ಗಾ ಇಲೆವೆನ್ ಕ್ರಿಕೇಟರ್ಸ್‍ವತಿಯಿಂದ 4ನೇ ಬಾರಿಗೆ ರಾಜವೀರ ಮದಕರಿ ನಾಯಕ ಕಪ್ 2025 ಲೀಗ್ ಕಮ್ ನಾಕೌಟ್ ಪಂದ್ಯಾವಳಿಯೂ ಡಿ. 17 ರಿಂದ 21ರವರೆಗೆ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಹೊನಲು-ಬೆಳಕಿನ ಕ್ರಿಕೆಟ್ ಟೂರ್ನಮೆಂಟ್‍ನ್ನು ಬುಧವಾರ ಬೆಳಿಗ್ಗೆ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇಂದಿನ ದಿನಮಾನದಲ್ಲಿ ಮಕ್ಕಳು ಮೈದಾನದಲ್ಲಿ ಆಡುವುದು ಕಡಿಮೆಯಾಗಿದೆ ಮನೆಯಲ್ಲಿಯೇ ಮೊಬೈಲ್‍ನಲ್ಲಿ ಆಡುವುದನ್ನು ಕಲಿತ್ತಿದ್ದಾರೆ. ಪೋಷಕರು ಸಹಾ ತಮ್ಮ ಮಕ್ಕಳನ್ನು ಮೈದಾನಕ್ಕೆ ಆಡುವುದಕ್ಕೆ ಕಳುಹಿಸುವುದು ಕಡಿಮೆಯಾಗಿದೆ. ಇದರಿಂದ ಮಕ್ಕಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂದರು.

ನಮ್ಮ ತಾತ, ತಂದೆಯವರ ಕಾಲದಲ್ಲಿ ಹೊಲ,ಗದ್ದೆಗಳಿಗೂ ಹೋಗಿ ಕೆಲಸವನ್ನು ಮಾಡುತ್ತಿದ್ದರು. ಉತ್ತಮವಾದ ಪೌಷ್ಟಿಕವಾದ ಆಹಾರವನ್ನು ಸೇವನೆ ಮಾಡುತ್ತಿದ್ದರು. ರಾತ್ರಿ ನೆಮ್ಮದಿಯಾಗಿ ನಿದ್ರೆಯನ್ನು ಮಾಡುತ್ತಾ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಆದರೆ ಈಗ ಎಲ್ಲದಕ್ಕೂ ಸಹಾ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ. ದೈಹಿಕ ಶ್ರಮ ಎನ್ನುವುದು ಕಡಿಮೆಯಾಗುತ್ತಿದೆ, ಇದರಿಂದ ಕಡಿಮೆ ವಯಸ್ಸಿನಲ್ಲಿಯೇ ವಿವಿಧ ರೋಗಗಳು ಬರುತ್ತಿವೆ. ಇದರ ಬದಲು ದೈಹಿಕವಾಗಿ ಶ್ರಮವನ್ನು ಹಾಕಿದರೆ ರೋಗಗಳಿಂದ ದೂರವಾಗಿ ಉತ್ತಮವಾದ ಆರೋಗ್ಯವನ್ನು ಹೊಂದಬಹುದಾಗಿದೆ ಎಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕರಾದ ಸಿ.ಬಿ.ನಾಗರಾಜ್ ಮಾತನಾಡಿ, ಸ್ನೇಹಜೀವಿ ಬಳಗದವತಿಯಿಂದ ಇದು ನಾಲ್ಕನೇ ಬಾರಿ ಟೂರ್ನಮೆಂಟ್ ನಡೆಯುತ್ತಿದ್ದು, ಇದರಲ್ಲಿ ಪ್ರಥಮ ಬಹುಮಾನ 2,00,001 ರೂ, ದ್ವೀತೀಯ ಬಹುಮಾನ 1,00,001 ರೂ. ಹಾಗೂ ತೃತೀಯ ಬಹುಮಾನ 50,001 ರೂ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು, ಇದ್ದಲ್ಲದೆ ಉತ್ತಮ ಬ್ಯಾಟ್ಸ್‍ಮನ್ ಹಾಗೂ ಬೌಲರ್‍ಗೆ ಟ್ರೋಫಿಯನ್ನು ನೀಡಲಾಗುವುದು, ಸರಣಿ ಶ್ರೇಷ್ಠ ಪಡೆದವರಿಗೆ ಎಲ್‍ಇಡಿ ಟಿ.ವಿ.ಯನ್ನು ನೀಡಲಾಗುವುದು ಎಂದರು.

ಇದು ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು ರಾಜ್ಯದ ವಿವಿಧೆಡೆಗಳಿಂದ 43 ತಂಡಗಳು ಭಾಗವಹಿಸಿವೆ 5 ದಿನಗಳಲ್ಲಿ ಇವುಗಳು 115 ಮ್ಯಾಚ್‍ಗಳನ್ನು ಆಡಲಿದ್ದಾರೆ. ಹೂರ ಜಿಲ್ಲೆಗಳಿಂದ 17 ತಂಡ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ 26 ತಂಡಗಳು ಭಾಗವಹಿಸಿವೆ ಎಂದು ತಿಳಿಸಿದರು.

ಸ್ನೇಹಜೀವಿ ಬಳಗದ ವತಿಯಿಂದ ಆಯೋಜನೆ ಮಾಡಲಾಗಿರುವ ಈ ಕ್ರಿಕೆಟ್ ಟೂರ್ನಿಯ ಸೂರಪ್ಪ, ರಾಜೀವ್, ರಾಮು, ಅನೀಸ್, ಅರ್ಜುನ ಹಾಗೂ ದುರ್ಗನ್ ಕ್ರಿಕೆಟರ್ಸ್‍ನ ಆಟಗಾರರು ಹಾಜರಿದ್ದರು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now