ಬೆಂಗಳೂರು: ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತದಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಕೆಎಸ್ಡಿಎಲ್ ನಲ್ಲಿ ಬಳಸುವ ಕಚ್ಛಾ ತೈಲದ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜೆಡಿಎಸ್ ಶಾಸಕರೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ನಾವೂ 800 ಪೇಜ್ ವರದಿಯನ್ನು ಪಡೆದಿದ್ದೇನೆ. 1918ರಲ್ಲಿ ಕರ್ನಾಟಕ ಸಾಬೂನು ಮಾರ್ಜಕ ನಿಯಮಿತ ಸಂಸ್ಥೆ ಜಾರಿಗೆ ಬಂದಿತ್ತು. ಸಾಬೂನು ಮತ್ತು ಮಾರ್ಜಕ ತಯಾರಿಕೆಯಲ್ಲಿ ಬಳಸುವ ಕಚ್ಚಾ ತೈಲವಾಗಿ ಶ್ರೀಗಂಧ ತೈಲ ಸರಬರಾಜಿನಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಆರೋಪಿಸಿದ್ದಾರೆ.
ಬೇರೆ ಕಂಪನಿಗೆ ಅವಕಾಶ ನೀಡದೆ ಒಂದೇ ಕಂಪನಿಗೆ ಟೆಂಡರ್ ಗೆ ಅವಕಾಶ ನೀಡಿದ್ದಾರೆ. ಕರ್ನಾಟಕದ ಅರೋಮಸ್ ಕಂಪನಿಗೆ ಎರಡು, 9 ಸಲ ಟೆಂಡರ್ ಕೊಟ್ಟಿದ್ದಾರೆ. ಬ್ಲಾಕ್ ಲೀಸ್ಟ್ ನಲ್ಲಿರುವ ಕಂಪನಿಗೆ ಟೆಂಡರ್ ಕೊಟ್ಟಿದ್ದಾರೆ. 2019ರಲ್ಲಿಯೇ ಈ ಕರ್ನಾಟಕ ಅರೋಮಸ್ ಕಂಪನಿ ಬ್ಲಾಕ್ ಲೀಸ್ಟ್ ನಲ್ಲಿತ್ತು.
ನಾನು ಇದಕ್ಕೆ ಸಂಬಂಧಸಿದಂತೆ ಮಾಹಿತಿ ಪಡೆಯಲು 2022, 2023ರಲ್ಲಿಯೇ ಪತ್ರ ಬರೆದಿದ್ದೆ. ಆಗ ಒಂದು ಕೆಜಿಗೆ ಸ್ಯಾಂಡಲ್ ಆಯಿಲ್ ಗೆ 2,24,655 ರೂಪಾಯಿ ಇತ್ತು. ನಾನು ಪತ್ರ ಬರೆದ ನಂತರ 2025ರಲ್ಲಿ ಸ್ಯಾಂಡಲ್ ಆಯಿಲ್ ಬೆಲೆ ಕೆಜಿಗೆ 93,116 ರೂಪಯಿ ಮಾಡಿದ್ದಾರೆ. ಅಂದರೆ ಹಿಂದಿನ ಬೆಲೆಗಿಂತ ಕೆಜಿಗೆ 1.2 ಲಕ್ಷ ರೂಪಾಯಿ ಕಡಿಮೆ ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ. ಈವರೆಗೆ 11,000 ಕೆಜಿ ಸ್ಯಾಂಡಲ್ ವುಡ್ ಆಯಿಲ್ ಅನ್ನು ಪ್ರತಿ ಕೆಜಿಗೆ 1.2 ಲಕ್ಷ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಇದರಿಂದ ಕಂಪನಿಗೇನೆ ಸುಮಾರು 132 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದಿದ್ದಾರೆ.




