Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿರ್ದೇಶಕ ರಾಜ್ ಜೊತೆಗೆ ಸಮಂತಾ 2ನೇ ಮದುವೆ : ದೇವಸ್ಥಾನದಲ್ಲಿ ವಿವಾಹ

---Advertisement---

ತೆಲುಗು ನಟಿ ಸಮಂತಾ ರುತುಪ್ರಭು ಮೊದಲ ಮದುವೆಯಿಂದ ದೂರ ಬಂದ ಮೇಲೆ, ಡಿವೋರ್ಸ್ ಪಡೆದ ಮೇಲೆ ತಾನಾಯ್ತು ತನ್ನ ಕೆಲಸವಾಯ್ತು ಅಂತ ಬ್ಯುಸಿಯಾಗಿದ್ರು. ಅತ್ತ ನಾಗಚೈತನ್ಯಾ ಎರಡನೇ ಮದುವೆಯೂ ಆಗಿದ್ದಾಯ್ತು. ನಂತರದ ದಿನಗಳಲ್ಲಿ ಸಮಂತಾ ಕೂಡ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವಿಚಾರ ಗುಲ್ಲೆದ್ದಿತ್ತು. ಇದೀಗ ಅದಕ್ಕೆ ಅಧಿಕೃತವಾದ ಮುದ್ರೆ ಒತ್ತಿದ್ದಾರೆ. ಸಮಂತಾ ಹಾಗೂ ರಾಜ್ ಮದುವೆಯಾಗಿದ್ದಾರೆ.

ಇಬ್ಬರ ವಿವಾಹ ಮಹೋತ್ಸವ ಸರಳವಾಗಿ ಈಶಾ ಯೋಗ ಕೇಂದ್ರದ ಒಳಗೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಲಕಗಿನ ಜಾವವೇ ಭೈರವಿ ದೇವಸ್ಥಾನದಲ್ಲಿ ಮದುವೆ ಕಾರ್ಯ ನಡೆದಿದೆ. ತುಂಬಾ ಸರಳವಾಗಿ ನಡೆದಿರುವ ಈ ವಿವಾಹ ಮಹೋತ್ಸವಕ್ಕೆ 30 ಜನ ಆತ್ಮೀಯರನ್ನ ಮಾತ್ರ ಕರೆಸಲಾಗಿತ್ತಂತೆ. ಇನ್ನು ಸಮಂತಾ ಈ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯನ್ನುಟ್ಟು ಕಂಗೊಳಿಸಿದ್ದಾರೆ ಎನ್ನಲಾಗಿದೆ. ಮದುವೆಯಲ್ಲಿ ಸಮಂತಾ ಎಷ್ಟು ಬ್ಯೂಟಿಫುಲ್ ಆಗಿ ಕಂಡಿದ್ದಾರೆ ಎಂಬುದನ್ನ ಅವರು ಫೋಟೋ ವಿಡಿಯೋ ಶೇರ್ ಮಾಡಿದ ನಂತರವಷ್ಟೇ ಗೊತ್ತಾಗಲಿದೆ.

ಹಾಗೇ ಸಮಂತಾ ಹಾಗೂ ನಿಡುಮೋರೆ ಇಬ್ಬರ ಸ್ನೇಹ, ಸಂಬಂಧ ಫ್ಯಾಮಿಲಿ ಮ್ಯಾನ್ ವೆಬ್ 2 ಸಿರೀಸ್ ಮೂಲಕ ಶುರುವಾಗಿತ್ತು. ಸ್ನೇಹ ಅಲ್ಲಿಂದ ಪ್ರೀತಿಯಾಗಿ ಬದಲಾಗಿದೆ. ಇದೀಗ ಅಧಿಕೃತವಾಗಿ ಮದುವೆಯ ಮುದ್ರೆಯನ್ನ ಒತ್ತಿದ್ದಾರೆ. ಇಬ್ಬರ ಕಡೆಯಿಂದ ಮದುವೆ ಬಗ್ಗೆ ಇನ್ನು ಯಾವುದೇ ರೀತಿಯ ಅಧಿಕೃತ ಘೋಷಣೆ ಬಂದಿಲ್ಲ. ಇಡೀ ಅಭಿಮಾನಿ ಸಮೂಹವೇ ಆ ದಿನಕ್ಕೋಸ್ಕರ ಕಾಯ್ತಿದೆ. ಇದೀಗ ಸಮಂತಾ ಮದುವೆ ಫೋಟೋ ಗಳನ್ನು ತಮ್ಮ‌ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದ್ದು, ಎಲ್ಲರೂ ಶುಭ ಹಾರೈಸುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now