Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಸಣ್ಣ ಮಳೆಗೂ ಕೆರೆಯಂತಾಗುವ ರಸ್ತೆಗಳು; ಸ್ಥಳೀಯರ ಪರದಾಟ!

---Advertisement---

 

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 03 : ನಗರದ ಜೆಸಿಆರ್ ಬಡಾವಣೆ, ಕೆಳಗೋಟೆ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕನಿಷ್ಠ ಮಳೆಯಾದರೂ ಸಾಕು, ರಸ್ತೆಗಳು ಚರಂಡಿಯಂತಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಜೆಸಿಆರ್ ಬಡಾವಣೆಯ ಪಿವಿಎಸ್ ಆಸ್ಪತ್ರೆಯ ಹಿಂಭಾಗದಲ್ಲಿ ಸ್ವಲ್ಪವೇ ಮಳೆಯಾದರೂ ರಸ್ತೆ ಮತ್ತು ಚರಂಡಿ ನಡುವಿನ ವ್ಯತ್ಯಾಸವೇ ತಿಳಿಯದಂತೆ ನೀರು ಹರಿಯುತ್ತಿದೆ. ಮಳೆ ನೀರಿನೊಂದಿಗೆ ಚರಂಡಿ ನೀರು ಸೇರಿಕೊಂಡು ಮನೆಗಳ ಮುಂದೆಲ್ಲಾ ಆವರಿಸಿಕೊಳ್ಳುತ್ತಿದ್ದು, ಇಡೀ ಪ್ರದೇಶ ಕೆರೆಯಂತಾಗುತ್ತಿದೆ.

ಈ ಹಿಂದೆ ಚರಂಡಿ ನೀರು ಸರಾಗವಾಗಿ ಹರಿದು ರಾಜಕಾಲುವೆ ಸೇರುತ್ತಿತ್ತು. ಆದರೆ, ಕೆಲವು ವರ್ಷಗಳ ಹಿಂದೆ ಇದ್ದ ಚರಂಡಿಯನ್ನು ಮುಚ್ಚಿ, ಸಣ್ಣ ರಂಧ್ರ ಕೊರೆದು ಯುಜಿಡಿ (UGD)ಬಿಟ್ಟಿದ್ದಾರೆ. ಇದರಿಂದಾಗಿ ಮಳೆ ಬಂದರೆ ಸಾಕು ನೀರು ಹರಿದುಹೋಗದೆ ರಸ್ತೆಗೆ ನುಗ್ಗುತ್ತಿದೆ. ಇದರಿಂದ ನಡೆದಾಡಲೂ ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಳಗೋಟೆ ರಸ್ತೆಯ ಚಿತ್ರಣ 

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now