ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಉಮೇಶ್ ಎಂದಾಕ್ಷಣ ನೆನಪಾಗುತ್ತಿದ್ದದ್ದೇ ಅಪಾರ್ಥ ಮಾಡ್ಕೊಬೇಡಿ ಎಂಬ ಡೈಲಾಗ್. ಆದ್ರೆ ಇಂದು ಆ ನಟನ ನೆನಪುಗಳು ಮಾತ್ರ ಉಳಿದಿವೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಉಮೇಶ್ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ ಈಗ 80 ವರ್ಷ ವಯಸ್ಸು. ಆದರೂ ಎಷ್ಟು ಲವಲವಿಕೆಯಿಂದ ಓಡಾಡುತ್ತಾ ಇದ್ದರು. ಕ್ಯಾನ್ಸರ್ ಇದೆ ಎಂಬುದು ತಿಳಿಯುವುದಕ್ಕೂ ಮುನ್ನ ಅಂದ್ರೆ ಮೂರ್ನಾಲ್ಕು ತಿಂಗಳ ಹಿಂದಿನವರೆಗೂ ಸಿನಿಮಾಗಳ ಪ್ರಚಾರ ಕಾರ್ಯದಲ್ಲಿ ಓಡಾಡ್ತಾ ಇದ್ರು.
ಅವರು ಅಭಿನಯಿಸಿದ ಪ್ರತಿ ಸಿನಿಮಾದ ಪ್ರಚಾರದಲ್ಲೂ ಕಾಣಿಸಿಕೊಳ್ತಾ ಇದ್ರು. ಆದ್ರೆ ಅದ್ಯಾವಾಗೋ ಮನೆಯ ಬಾತ್ ರೂಂ ನಲ್ಲಿ ಕಾಲು ಜಾರಿ ಬಿದ್ದರೋ ಅಲ್ಲಿಂದ ಹಾಸಿಗೆ ಹಿಡಿದರು. ಆಸ್ಪತ್ರೆಗೆ ದಾಖಲಾದವರಿಗೆ ಶಾಕಿಂಗ್ ವಿಚಾರವನ್ನ ಡಾಕ್ಟರ್ ತಿಳಿಸಿದ್ರು. ದೇಹದಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು. ಅದಕ್ಕೆ ಚಿಕಿತ್ಸೆಯನ್ನು ಕೊಡಿಸಲಾಗಿತ್ತಾದರೂ ಫಲಕಾರಿಯಾಗದೆ ಇಂದು ಬೆಳಗ್ಗೆ 8.35ಕ್ಕೆ ಕೊನೆಯುಸಿರೆಳೆದಿದ್ದಾರೆ.
ಉಮೇಶ್ ಅವರು ಸುಮಾರು ಮೂಲತಃ ಮೈಸೂರಿನವರು. ಸುಮಾರು 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿಗೇನೆ ರಂಗ ಭೂಮಿ ಪ್ರವೇಶ ಮಾಡಿದವರು. ಗುಬ್ಬಿ ವೀರಣ್ಣ ರಂಗಮಂದಿರ ಪ್ರವೇಶ ಮಾಡಿದರು. ಉಮೇಶ್ ಅವರಿಗಿದ್ದ ಪ್ರತಿಭೆಯನ್ನು ಪುಟ್ಟಣ್ಣ ಕಣಗಾಲ್ ಅವರು ಗುರುತಿಸಿ ಬಿ ಆರ್ ಪಂತಲು ಅವರಿಗೆ ತಿಳಿಸಿದ್ದರು. ಅಲ್ಲಿಂದ ಉಮೇಶ್ ಅವರ ಸಿನಿ ಜರ್ನಿ ಶುರುವಾಗಿದ್ದು. ಎಷ್ಟು ಸಿನಿಮಾದಲ್ಲಿ ನಗಿಸಿದ್ದು ಉಮೇಶ್ ಅವರು. ಕಡೆ ಗಳಿಗೆಯ ತನಕವು ಆ ನಗು ಅವರ ಮುಖದಲ್ಲಿತ್ತು, ಸಾವು ಹತ್ತಿರವಾಗುತ್ತಿದ್ದರು ಎಲ್ಲರನ್ನು ನಗಿಸಿದವರು ಈ ಉಮೇಶ್.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











