Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೈಲಿನಲ್ಲಿರುವ ದರ್ಶನ್ ಅವರಿಗೆ ಮತ್ತಷ್ಟು ಸಂಕಷ್ಟ ಹೆಚ್ಚಳ..!

---Advertisement---

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಆದ್ರೆ ಪ್ರತಿದಿನ ಬದುಕೋದಕ್ಕೆ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹಾಸಿಗೆ, ದಿಂಬು ಇಲ್ಲದೆ ಒದ್ದಾಡುತ್ತಿದ್ದಾರೆ. ಹಾಸಿಗೆ, ದಿಂಬಿಗಾಗಿ ಅದೆಷ್ಟು ಬಾರಿ ಕೋರ್ಟ್ ಗೆ ಮನವಿ ಮಾಡಿದ್ರೋ ಏನೋ. ಆದರೂ ಸಿಗುತ್ತಿಲ್ಲ. ವಾಕ್ ಮಾಡೋದಕ್ಕೆ ಕೋರ್ಟ್ ಅನುಮತಿ ಸಿಕ್ಕಿತ್ತು. ಆದ್ರೆ ಈಗ ಅದಕ್ಕೂ ಬ್ರೇಕ್ ಬೀಳುತ್ತಿದೆ. ಪರಪ್ಪನ ಅಗ್ರಹಾರಕ್ಕೆ ಹೊಸ ಅಧಿಕಾರಿಯ ನೇಮಕದಿಂದ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ‌.

ಪರಪ್ಪನ ಅಗ್ರಹಾರ ಜೈಲು ಜೈಲಿನಂತೆ ಇಲ್ಲ. ಅಲ್ಲಿ ಮರ್ಡರ್ ಮಾಡಿದವನಿಗೆ, ಉಗ್ರನಿಗೂ ರಾಜಾತಿಥ್ಯ ನೀಡುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ವೈರಲ್ ಆಗಿತ್ತು. ಇದೆಲ್ಲವನ್ನು ಕಂಟ್ರೋಲ್ ಮಾಡುವುದಕ್ಕೆ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ನೇಮಕವಾದ ಮೇಲೆ ಕಟ್ಟುನಿಟ್ಟಿನ ನೀತಿಯನ್ನ ಜಾರಿಗೆ ತರಲಾಗಿದೆ.

ಅಂಶು ಕುಮಾರ್ ನೇಮಕದಿಂದ ಪ್ರತಿದಿನ ಜೈಲನ್ನು ಮಾನಿಟರಿಂಗ್ ಮಾಡಲಾಗುತ್ತದೆ. ಸಿಬ್ಬಂದಿಗಳಿಂದ ಪ್ರತಿದಿನ ಜೈಲಿನಲ್ಲಿ ತಪಾಸಣೆ ನಡೆಯುತ್ತದೆ‌. ಇನ್ನು ದರ್ಶನ್ ವಿಚಾರಕ್ಕೆ ಬರೋದಾದ್ರೆ ಅವರಿಗೆ ವಾಕ್ ಮಾಡುವುದಕ್ಕೆ ಅಂತನಾದ್ರು ಕೋರ್ಟ್ ಅನುಮತಿ ನೀಡಿತ್ತು. ಅಲ್ಪಸ್ವಲ್ಪ ವಾಕ್ ಮಾಡಿಕೊಂಸು ಇದ್ದ ದರ್ಶನ್ ಗೆ, ಈಗ ವಾಕ್ ಮಾಡುವುದಕ್ಕೂ ಅನುಮತಿ ಇಲ್ಲ. ಜೊತೆಗೆ ಜೈಲಿನ ಸಿಬ್ಬಂದಿಗಳು ಊಟವನ್ನ ಕೋಣೆಗೆ ತಂದುಕೊಡುತ್ತಿದ್ದರು. ಈಗ ಅದಕ್ಕೂ ಅನುಮತಿ ಇಲ್ಲ. ದರ್ಶನ್ ಅವರೇ ಊಟ, ತಿಂಡಿಗೆ ಹೋಗಬೇಕು. ಈ ಮೊದಲಾದ್ರೆ ಬಟ್ಟೆ ಒಣಗಿ ಹಾಕುವುದಕ್ಕೆ ಮಾತ್ರ ಹೊರಗೆ ಹೋಗ್ತಾ ಇದ್ರು. ಅಂಶು ಕುಮಾರ್ ಅವರು ಕಂಪ್ಲೀಟ್ ಹ್ಯಾಂಡವರ್ ತೆಗೆದುಕೊಂಡ ಮೇಲೆ ದರ್ಶನ್ ಅವರಿಗೂ ಸಂಕಷ್ಟ ಎದಯರಾಗಿದೆ. ಇದರ ನಡುವೆ ದರ್ಶನ್ ಅಭಿಮಾನಿಗಳೇ ಡೆವಿಲ್ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ‌.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now