ಕಾಂಗ್ರೆಸ್ ನಲ್ಲಿದ್ರೆ ಸಿಎಂ ಆಗಲ್ಲ : ಹಳೆ ಹೇಳಿಕೆ ನೆನಪಿಸಿದ್ದಕ್ಕೆ ಯಡಿಯೂರಪ್ಪ ಏನಂದ್ರು..?

1 Min Read

 

ಶಿವಮೊಗ್ಗ: ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಸಿಎಂ ಖುರ್ಚಿ ಕದನ ಸದ್ದು ಮಾಡ್ತಿದೆ. ನಾ ಕೊಡೆ ನೀ ಬಿಡೆ ಅನ್ನೋ ಹಾಗೇ ಜಗ್ಗಾಟ ನಡೀತಾ ಇದೆ. ಸಿದ್ದರಾಮಯ್ಯ ಅವರು ನಾನೇ ಸಿಎಂ ಆಗಿರ್ತೇನೆ ಅಂದ್ರೆ, ಡಿಕೆ ಶಿವಕುಮಾರ್ ಅವರು ನಾನು ಈ ಅವಧಿಯಲ್ಲಿಯೇ ಸಿಎಂ ಆಗ್ಬೇಕು ಅಂತ ಹಠ ಮಾಡ್ತಿದ್ದಾರೆ. ಅದಕ್ಕಾಗಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡ್ತಿದ್ದಾರೆ. ಇದೀಗ ಅವರ ಸಿಎಂ ಹಗ್ಗಜಗ್ಗಾಟದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಅಭಿವೃದ್ಧಿ ಆಗದೆ ಇರುವ ಬಗ್ಗೆ ಬೇಸರ ಹೊರ ಹಾಕಿದ್ದು, ರಾಜ್ಯದಲ್ಲಿ ಆಗ್ತಿರುವ ಕುರ್ಚಿ ಕದನದ ಬಗ್ಗೆ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ವಿಚಾರ. ನಮಗೆ ಸಂಬಂಧವಿಲ್ಲ. ಕಳೆದ ಏಳೆಂಟು ತಿಂಗಳಿನಿಂದ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸದ ಕಡೆಗೆ ಗಮನ ಹರಿಸಿಲ್ಲ. ಅದನ್ನ ಬಿಟ್ಟು ಯಾರು ಮುಖ್ಯಮಂತ್ರಿ ಆಗಬೇಕು ಎಂಬುದರಲ್ಲಿಯೇ ತಲ್ಲೀನರಾಗಿದ್ದಾರೆ. ಇಡೀ ರಾಜ್ಯದ ಜನ ಇವರ ಆಡಳಿತದಿಂದ ಬೇಸತ್ತು ಛೀಮಾರಿ ಹಾಕುತ್ತಿದ್ದಾರೆ.

ಇಷ್ಟಾದರೂ ಸರಿಪಡಿಸಿಕೊಳ್ಳದೆ ತಮ್ಮದೆ ಗೊಂದಲದಲ್ಲಿ ನಿರತರಾಗಿದ್ದಾರೆ. ಮುಂಬರುವ ದಿನದಲ್ಲಿ ರಾಜ್ಯದ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸರ್ಕಾರದ ವಿರುದ್ಧ ಬಿಎಸ್​ವೈ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಈ ಹಿಂದೆ ಯಡಿಯೂರಪ್ಪ ಅವರು ಹೇಳಿದ ಮಾತನ್ನ ಮಾಧ್ಯಮದವರೇ ನೆನಪಿಸಿದಾಗ, ಒಂದು ಕ್ಷಣ ನಕ್ಕಿದ್ದಾರೆ. ಅಂದ್ರೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ರೆ ಖಂಡಿತ ನೀನು ಸಿಎಂ ಆಗಲ್ಲ ಎಂಬ ಮಾತನ್ನ ಈ ಹಿಂದೆ ಯಡಿಯೂರಪ್ಪ ಅವರು ಹೇಳಿದ್ದರು. ಆ ಮಾತಿಗೆ ಉತ್ತರ ನಿರೀಕ್ಷಿಸಿದಾಗ ನಕ್ಕು ಮುಂದಕ್ಕೆ ಸಾಗಿದ್ದಾರೆ.

Share This Article