ಡಿ. 07 ರಂದು ಉಚಿತ ಸಾಮೂಹಿಕ ವಿವಾಹ ಸಮಾವೇಶ : ಕಾಂಗ್ರೆಸ್ ಮುಖಂಡ ಸೋಮಶೇಖರ್ ಅವರಿಂದ 50 ಚೀಲ ಅಕ್ಕಿ ದೇಣಿಗೆ

1 Min Read

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ಚಿತ್ರದುರ್ಗದಲ್ಲಿ ಡಿ.07 ರಂದು ನಡೆಯಲಿರುವ 1008 ರೈತ ಕುಟುಂಬಕ್ಕೆ ಉಚಿತ ಸಾಮೂಹಿಕ ವಿವಾಹ ಸಮಾವೇಶಕ್ಕೆ ಈಗಾಗಲೇ ಭರದ ಸಿದ್ದತೆ ನಡೆಯುತ್ತಿದೆ.

ಈ ಕಾರ್ಯಕ್ರಮಕ್ಕೆ ಸುಮಾರು 12 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈಗಾಗಲೇ ಹಲವಾರು ದಾನಿಗಳು ಹಲವಾರು ವಸ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ. ಇಂದು(ನವೆಂಬರ್. 25 ರಂದು) ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ 2021 ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಚುನಾವಣೆಗೆ ಸ್ಪರ್ಧಿಸಿದ್ದ
ಬಿ. ಸೋಮಶೇಖರ್ ಅವರು 50 ಚೀಲ ಅಕ್ಕಿ ಮತ್ತು ಎಣ್ಣೆಯನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article