Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಡಿಕೆಶಿ CM… ವಿಜಯೇಂದ್ರ DCM..ಪ್ರಹ್ಲಾದ್ ಜೋಶಿ ಏನಂದ್ರು..?

---Advertisement---

ಹುಬ್ಬಳ್ಳಿ: ರಾಜ್ಯ ರಾಜಕೀಯ ವಲಯದಲ್ಲಿ ಸಿಎಂ.. ಡಿಸಿಎಂ ವಿಚಾರ ಎಲ್ಲೆಲ್ಲೋ ಹೋಗ್ತಾ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆಶಿ ಹೋರಾಟ ಮಾಡ್ತಾ ಇದ್ದಾರೆ. ಈ ಬೆನ್ನಲ್ಲೇ ಶಾಸಕ ಯತ್ನಾಳ್ ಬೇರೆಯದ್ದೇ ವಿಚಾರವನ್ನ ಹೇಳಿದ್ದಾರೆ. ಡಿಕೆ ಶಿವಕುಮಾರ್ ಬಿಜೆಪಿಗೆ ಬಂದ್ರೆ ಅವರೇ ಸಿಎಂ, ವಿಜಯೇಂದ್ರ ಅವರೇ ಡಿಸಿಎಂ ಎಂಬ ಮಾತನ್ನ ಹೇಳಿದ್ದಾರೆ. ಈ ಮಾತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ನಾವೂ ಒಪ್ಪಲ್ಲ. ಕಾಂಗ್ರೆಸ್ ನಲ್ಲಿ ಇರುವವರೆಲ್ಲ ಭ್ರಷ್ಟಾಚಾರಿಗಳು ಎಂಬ ಮಾತನ್ನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಾವೂ ಯಾರನ್ನೋ ಕರೆದುಕೊಂಡು ಬಂದು ಶಿಂಧೆ ಮಾಡ್ತೀವಿ, ಅವರು ಶಿಂಧೆ ಆಗ್ತಾರೆ ಎಂಬ ಯಾವ ಸಪೋರ್ಟ್ ಕೂಡ ಇಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ. ಯಾರು ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಾಮಾಣಿಕರು, ಅಪ್ರಾಮಾಣಿಕರು ಎಂಬುದಾಗಿ ನಾನು ಮಾತನಾಡ್ತಿಲ್ಲ. ವಿ ಕಾಂಟ್ ದಟ್ ಎಂಬ ಮಾತನ್ನ ಹೇಳಿದ್ದಾರೆ.

ಪ್ರಹ್ಲಾದ್ ಜೋಶಿ ಅವರು ನೀಡಿದ ಹೇಳಿಕೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರೇ ಬಂದರು ಒಪ್ಪುವುದಿಲ್ಲ ಎಂಬ ಮಾತನ್ನ ಹೇಳಿದಂತಿದೆ. ಒಟ್ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೇ ಸಿಎಂ ಖುರ್ಚಿ ಕಾದಾಟ ಜೋರಾಗಿದೆ. ಆಡಳಿತ ಪಕ್ಷದಲ್ಲಿ ಗೊಂದಲ, ಗಲಾಟೆ ಆಗುವಾಗ ವಿರೋಧ ಪಕ್ಷದ ನಾಯಕರು ಪ್ರಭಾವಿ ನಾಯಕನಿಗೆ ಆಫರ್ ಕೊಡುವುದು ಸಹಜ. ತಮಾಷೆಯಾಗಿ ಈ ಮಾತುಗಳನ್ನ ಹೇಳಿದ್ದರು ಕೂಡ ಕೇಂದ್ರ ಸಚುವ ಪ್ರಹ್ಲಾದ್ ಜೋಶಿ ಅವರು ಅದನ್ನ ಸ್ವೀಕಾರ ಮಾಡುವುದಕ್ಕೆ ಸಿದ್ಧರಿಲ್ಲ ಎಂಬುದು ಅವರ ಮಾತಿನ ದಾಟಿಯಲ್ಲಿಯೇ ಅರ್ಥವಾದಂತೆ ಕಾಣಿಸ್ತಾ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...