Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರಲ್ಲಿ 7 ಕೋಟಿ ದರೋಡೆ ಕೇಸ್ : ಎಲ್ಲಿಗೆ ಬಂತು ತನಿಖೆ..? ಪರಮೇಶ್ವರ್ ಹೇಳಿದ್ದೇನು..?

ದರೋಡೆ
---Advertisement---

ಬೆಂಗಳೂರು: ಖದೀಮರು ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಹಾಡಹಗಲೇ ದರೋಡೆ ಮಾಡಿದ್ದಾರೆ. ಅದು ಒಂದೆರಡು ಸಾವಿರ, ಲಕ್ಷ ಅಲ್ಲ ಬರೋಬ್ಬರಿ 7 ಕೋಟಿ ರೂಪಾಯಿ. ಆ ಸಂಬಂಧ ತನಿಖೆ ನಡೆಯುತ್ತಿದ್ದು, ಒಟ್ಟು ನಾಲ್ಕು ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕರ್ನಾಟಕ ಗಡಿಭಾಗಗಳಲ್ಲಿ ವಿಚಾರಣೆ ಶುರುವಾಗಿದೆ. ಈ ತನಿಖೆ ಎಲ್ಲಿಗೆ ಬಂತು ಎಂಬುದರ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ‌.

ನಿನ್ನೆ ನಡೆದ ದರೋಡೆಯ ಕೇಸ್ ಬಗ್ಗೆ ಪೊಲೀಸರು ಈಗಾಗಲೇ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ರಾಬರಿಗೆ ಬಳಕೆ ಮಾಡಿಕೊಂಡಂತ ವಾಹನಗಳಲ್ಲಿ, ಒಂದು ವಾಹನದ ಫೋಟೋ ಹಾಕಿದ್ದರು. ಅದರ ಬಗ್ಗೆ ಚೆಕ್‌ ಮಾಡಿದಾಗ ಅದು ಬೇರೆಯವರ ಹೆಸರಿನ ನಂಬರ್ ಪ್ಲೇಟ್ ಬಳಕೆ ಮಾಡಿದ್ದರು. ಆ ನಂಬರ್ ಹುಡುಕಿಕೊಂಡು ಹೋದಾಗ ಮಿಸ್ ಯೂಸ್ ಆಗಿರುವುದು ತಿಳಿದು ಬಂದಿದೆ.

ಈಗ ಆ ಹಣವನ್ನು ಹೊರಗಡೆ ತೆಗೆದುಕೊಂಡು ಹೋಗಿದ್ದಾರಾ ಹೇಗೆ ಎಂಬ ತನಿಖೆ ನಡೆಯುತ್ತಿದೆ. ಯಾಕಂದ್ರೆ ಅವರು ವಾಹನವನ್ನು ಬದಲಾಯಿಸಿಕೊಂಡಿದ್ದಾರೆ, ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇಡೀ ನಗರದಲ್ಲಿರುವ ಸಿಸಿಟಿವಿಯನ್ನು ಪರಿಶೀಲನೆ ಮಾಡ್ತಾ ಇದ್ದೀವಿ. ಖಂಡಿತ ಹಿಡಿದು ಹಾಕ್ತೀವಿ. ಬಿಜಾಪುರದಲ್ಲೂ ಇದೇ ರೀತಿಯ ಘಟನೆ ಆಗಿತ್ತು. ಅಲ್ಲಿಯೂ ಹಿಡಿದಿದ್ದರು. ವಾಹನಗಳು ಯಾವ್ದು, ನಮಗೆ ಬಂದ ಮಾಹಿತಿ, ಒಳಗೆ ಬಂದ ವಾಹನಗಳು ಯಾವ್ದು ಹೀಗೆ ಈಗಿನ ಟೆಕ್ನಿಕಲ್ ಬಳಕೆ ಮಾಡಿಕೊಂಡು ತಪಾಸಣೆ ನಡೆಸಲಾಗುತ್ತಿದೆ. ರಾಬರಿ ಮಾಡಿರುವವರನ್ನು ಬಿಡುವ ಮಾತೇ ಇಲ್ಲ. ಪೊಲೀಸರು ಎಲ್ಲಾ ರೀತಿಯಲ್ಲೂ ತಪಾಸಣೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಸಿಕ್ಕಿ ಹಾಕಿಕೊಳ್ತಾರೆ ಎಂದು ಭರವಸೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...