Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಬೋಧಿ ತರಬೇತಿ ಅಧ್ಯಯನ ಕೇಂದ್ರದ ಚಾಲನೆ

---Advertisement---

ಸುದ್ದಿಒನ್, ಚಿತ್ರದುರ್ಗ. ನ.18: ಧಮ್ಮ ಸಾಂಸ್ಕøತಿಕ ಕೇಂದ್ರ ಮತ್ತು ವಿಮುಕ್ತಿ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧಮ್ಮ ತರಬೇತಿ ಅಧ್ಯಯನ ಕೇಂದ್ರ ಮತ್ತು ಈಜುಕೊಳದ ಉದ್ಘಾಟನೆ ನೆರವೇರಿಸಿ, ಮಾತನಾಡಿದ ಯು.ಕೆ.ಯ ಕ್ರಿಸ್ಟಿನಾ ದೊರೊತಿ ಅವರು, ಧಮ್ಮ ಕೇಂದ್ರದಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರ ಹಕ್ಕುಗಳಿಗಾಗಿ ತರಬೇತಿ ಮತ್ತು ಅಧ್ಯಯನಕ್ಕಾಗಿ ಆರಂಭಿಸಲಾಗಿರುವ ಕೇಂದ್ರವು ವಿಶೇಷವಾಗಿ ನಿರ್ಮಾಣಗೊಂಡಿದೆ ಎಂದು ಹೇಳಿದರು.

 

ಗ್ರಾಮೀಣ ಭಾಗದ ಮಕ್ಕಳಿಗಾಗಿ ಈಜುಕೊಳ ನಿರ್ಮಾಣ ಹಾಗೂ ತರಬೇತಿಗಾಗಿ ಕುಟೀರವನ್ನು ನಿರ್ಮಾಣಮಾಡುವ ಮೂಲಕ ಸಾರ್ವಜನಿಕರ ಅನುಕೂಲಕ್ಕಾಗಿ ವಿಮುಕ್ತಿ ವಿದ್ಯಾಸಂಸ್ಥೆ ವಿಶೇಷ ಮುತುವರ್ಜಿ ವಹಿಸಿ, ನಿರ್ಮಾಣಮಾಡಲಾಗಿರುವ ಕೊಳವು ನಿಜಕ್ಕೂ ಅದ್ಭುತವಾಗಿದೆ ಎಂದು ಕ್ರಿಸ್ಟಿನಾ ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಾ.ನಟರಾಜ್ ಮಾತನಾಡಿ, ವಿಮುಕ್ತಿ ವಿದ್ಯಾಸಂಸ್ಥೆ ಮತ್ತು ಧಮ್ಮ ಕೇಂದ್ರದಲ್ಲಿ ನಿರಂತರವಾದ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿರುತ್ತದೆ. ಇಲ್ಲಿ ಪ್ರತಿ ಕಾರ್ಯಕ್ರಮಗಳು ಕೂಡ ಭಿನ್ನ ಹಾಗೂ ವಿಭಿನ್ನವಾಗಿ ಏರ್ಪಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತದೆ ಎಂದು ಹೇಳಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರವರು ರಚಿಸಿದಂತಹ ಸಂವಿಧಾನದ ಆಧಾರದ ಮೇಲೆ ರೂಪಕಗಳನ್ನು ಮಾಡಿ ಜನರಿಗೆ ಮಾಹಿತಿ ನೀಡುವಂತಹ ಕೆಲಸ ನಡೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದರು.
ಪ್ರೋ.ಜೆ.ಯಾದವರೆಡ್ಡಿ ಮಾತನಾಡಿ, ಸಂವಿಧಾನದ ಪೀಠಿಕೆಗಳನ್ನು ಬಳಸಿಕೊಂಡು ರೂಪಕಗಳನ್ನು ಮಾಡುವ ಮೂಲಕ ಜನಸಾಮಾನ್ಯರಿಗೆ ಸಂವಿಧಾನದ ಆಶಯಗಳನ್ನು ಭಿತ್ತರಿಸುವಂತಹ ಕೆಲಸ ವ್ಯವಸ್ಥಿತವಾಗಿ ಧಮ್ಮ ಕೇಂದ್ರದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಭಾರತದ ಸಂವಿಧಾನ ಈ ದೇಶದ ಪ್ರಜಾಪ್ರಭುತ್ವ ಸೇರಿದಂತೆ, ಸರ್ವಧರ್ಮಗಳಿಗೂ ಸಮಾನತೆ ಮತ್ತು ರಕ್ಷಣೆ ನೀಡುವಂತಹ ಹೊಣೆಗಾರಿಕೆ ಹೊಂದಿದೆ ಎಂದು ಹೇಳಿದರು. ದೇಶದಲ್ಲಿ ಶಾಂತಿ & ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವಂತಹ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲಿದೆ ಎಂದು ಹೇಳಿದರು.

ಕುಟೀರ ಮತ್ತು ಕೊಳ ಉದ್ಥಾಟನಾ ಸಮಾರಂಭದಲ್ಲಿ ವಿಮುಕ್ತಿ ವಿದ್ಯಾಸಮಸ್ಥೆಯ ನಿರ್ದೇಶಕರಾದ ಆರ್.ವಿಶ್ವಸಾಗರ್ ಅವರು ಮಾತನಾಡಿ, ಓಪನ್ ಹ್ಯಾಂಡ್ ಇಂಡಿಯಾ ಪ್ರಾಜೆಕ್ಟ್ ವತಿಯಿಂದ ಕ್ರಿಸ್ಟಿನಾ ಅವರು ತಾವು ದುಡಿದ ಮತ್ತು ಸಂಪಾದನೆಮಾಡಿದ ಹಣವನ್ನು ವಿಮುಕ್ತಿ ವಿದ್ಯಾಸಂಸ್ಥೆಗೆ ನೆರವು ನೀಡುವ ಮೂಲಕ ಇಲ್ಲಿನ ಗಿಡ, ಮರ, ಪಕ್ಷಿ, ಪ್ರಾಣಿ, ಜೀವ ಸಂಕುಲನಗಳ ಬೆಳವಣಿಗೆ ಮತ್ತು ಜೀವಿಸಲು ಅವಕಾಶ ಮಾಡಿಕೊಟ್ಟಿರುವ ಹಿಂದೆ ಇವರ ನೆರವು ಇದೆ ಎಂದು ಹೇಳಿದರು.

ಧಮ್ಮ ಕೇಂದ್ರದಲ್ಲಿ ಸಾವಿರಾರು ಗಿಡಮರಗಳನ್ನು ಕಳೆದ 2015 ರಿಂದ ಪೋಷಿಸಿಕೊಂಡು ಬರಲಾಗಿದೆ. ಈಗ ಈ ಗಿಡ ಮರಗಳ ಮಧ್ಯೆ, ಹಕ್ಕಿ, ಜೀವ ಸಂಕುಲನಗಳು ಬದುಕುವಂತಹ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಬಹಳಷ್ಟು ಕಾರಣಕರ್ತರು ಯು.ಕೆ.ಯ ಕ್ರಿಸ್ಟಿನಾ ಮೆಡಮ್ ಅವರು ಎಂದು ಹೇಳಿದರು.

ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕರು ಮತ್ತು ದಲಿತ ಪರ ಚಿಂತಕರಾದ ಶಿವಕುಮಾರ್, ಫಾದರ್ ಪಾಲ್, ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣಮ್ಮ, ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್‍ಕುಮಾರ್, ಪ್ರಗತಿಪರ ಹೋರಾಟಗಾರ ಪುರುಷೋತ್ತಮ್, ಶ್ರೀಮತಿ ನಾಗರತ್ನ, ಶ್ರೀಮತಿ ಬಿಬಿಜಾನ್, ಅರಣ್ಯಸಾಗರ್, ನಾಗಪ್ಪ, ಚಿಂಚೊಳ್ಳಿ ಭಾಗದ ಕಾರ್ಯಕರ್ತರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...