Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ, ತುಮಕೂರು ಸೇರಿ ಹಲವು ಜಿಲ್ಲೆಗಳಲ್ಲಿ ಗೃಹ ಮಂಡಳಿಯಿಂದ ಸೈಟುಗಳ ಹರಾಜು : ನೀವೂ ಕೊಳ್ಳಬಹುದು

---Advertisement---

ಬೆಂಗಳೂರು: ಈಗಂತು ಭೂಮಿ ತೆಗೆದುಕೊಳ್ಳಬೇಕು ಎಂಬ ಹಂಬಲ ಎಲ್ಲರಲ್ಲೂ ಇದೆ. ಆದ್ರೆ ಇತ್ತೀಚಿನ ದಿನದಲ್ಲಿ ಚಿನ್ನದ ಬೆಲೆ ಏರಿಕೆಯಾದಷ್ಟೇ ಫಾಸ್ಟ್ ಆಗಿ ಭೂಮಿಯ ಬೆಲೆಯೂ ಏರಿಕೆಯಾಗುತ್ತಿದೆ. ಹೀಗಾಗಿ ಸಾಮಾನ್ಯ ಜನ ಇದನ್ನ ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಆದರೆ ಕರ್ನಾಟಕ ಗೃಹ ಮಂಡಳಿಯಿಂದ ಈಗ ಸೈಟುಗಳ ಹರಾಜು ಪ್ರಕ್ರಿಯೆ ಶುರು ಮಾಡಿದ್ದಾರೆ. ಹರಾಜಿನ ಮೂಲಕವೇ ಸೈಟುಗಳನ್ನ ತೆಗೆದುಕೊಳ್ಳಬಹುದು. ಈಗಾಗಲೇ ಶುರುವಾಗಿದ್ದು, ಇನ್ನು ಬಹಳಷ್ಟು ಸಮಯವಿರುವ ಕಾರಣ ನೀವೂ ತೆಗೆದುಕೊಳ್ಳಬಹುದು. ಹಾಗಾದ್ರೆ ಅದೇಗೆ ಎಂಬುದರ ಡಿಟೈಲ್ ಇಲ್ಲಿದೆ ನೋಡಿ.

ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ನಿವೇಶನಗಳ ಇ ಹರಾಜು ಮೂಲಕ ಸೈಟುಗಳ ಮಾರಾಟ ಮಾಡುತ್ತಿವೆ. ಮನೆ, ಮೂಲೆ ಮತ್ತು ಮಧ್ಯಂತರ ನಿವೇಶನಗಳ ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ. ವಾಸಯೋಗ್ಯ ಮತ್ತು ವಾಣಿಜ್ಯ ಸೈಟುಗಳನ್ನು ಕೂಎ ಹರಾಜು ಮಾಡಲಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ಇ ಹರಾಜು ನೋಂದಣಿ ಆರಂಭವಾಗಿದೆ. ಆದರೆ ಇಂದಿನಿಂದ ನವೆಂಬರ್ 29ರ ಮಧ್ಯಾಹ್ನ 12 ಗಂಟೆಯವರೆಗೆ ನೋಂದಣಿಗೆ ಅವಕಾಶ ಇದೆ.

ಈ ಹರಾಜಿನಲ್ಲಿ ಭಾಗವಹಿಸಿ ನೀವೂ ಕೂಡ ಸೈಟ್ ಗಳನ್ನ ತೆಗೆದುಕೊಳ್ಳಬಹುದು. http://kppp.karnataka.gov.in ವೆಬ್ಸೈಟ್ ಗೆ ಲಾಗಿನ್ ಆಗುವ ಮೂಲಕ ನೀವೂ ಸೈಟ್ ಗಳನ್ನ ತೆಗೆದುಕೊಳ್ಳಬಹುದು. ಬೆಂಗಳೂರಿನ ಸೂರ್ಯ ನಗರ, ತುಮಕೂರಿನ ಗೂಳೂರು ಬಡಾವಣೆ, ಪಾವಗಡ ಬಡಾವಣೆಯಲ್ಲಿ ಮೂಲೆ‌ನಿವೇಶನ, ಮಂಗಳೂರಿನ ಅಮ್ಟಾಡಿ ಬಟ್ವಾ, ಕೊಪ್ಪಳದ ಡಿಸಿ ಆಫೀಸ್ ಹಿಂಭಾಗ, ಕಲ್ಬುರ್ಗಿಯ ಕಾಳಗನೂರು ಕುಸನೂರು ಬಡಾವಣೆ, ಧಾರವಾಡದ ಕುಂದವಾಡ, ದಾವಣಗೆರೆಯ ಹರಿಹರ – ಅಮರಾವತಿ, ಚಿತ್ರದುರ್ಗ ಜಿಲ್ಲೆಯ ಕೆಳಗೋಟೆ ಬಡಾವಣೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು- ಯರದಕಟ್ಟೆ ಬಡಾವಣೆ ಮೂಲೆ ನಿವೇಶನಗಳು,   ಚಿತ್ರದುರ್ಗ ಜಿಲ್ಲೆಯ ಮದಕರಿಪುರ ಬಡಾವಣೆಯ  ಮೂಲೆ ನಿವೇಶನ ಹಲವು ಕಡೆ ಹರಾಜು ಪ್ರಕ್ರಿಯೆ ಶುರುವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...