ಶಿವಮೊಗ್ಗ: ಮಕ್ಕಳಲ್ಲಿ ಪೋಷ್ಠಿಕಾಂಶ, ಖನಿಜಾಂಶಗಳ ಕೊರತೆಯಾಗದಿರಲಿ ಎಂದು ಶಾಲೆಗಳಲ್ಲಿ ಆಗಾಗ ಮಾತ್ರೆಗಳನ್ನ ನೀಡಲಾಗುತ್ತದೆ. ಇದೀಗ ಅಂತದ್ದೇ ಮಾತ್ರೆಗಳನ್ನ ನುಂಗಿದ ಶಾಲಾ ಮಕ್ಕಳು ಅಸ್ಚಸ್ಥರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿಯಲ್ಲಿ ನಡೆದಿದೆ. 200ಕ್ಕೂ ಅಧಿಕ ಮಕ್ಕಳಿದ್ದ ಶಾಲೆಯದು. ಮಾತ್ರೆ ತೆಗೆದುಕೊಂಡ 59 ಮಕ್ಕಳು ಅಸ್ವಸ್ಥರಾಗಿದ್ದಾರೆ.
ಮಾತ್ರೆ ಕೊಟ್ಟ ತಕ್ಷಣ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟರ ನೋವಿನಿಂದ ಅಸ್ವಸ್ಥಗೊಂಡ ಮಕ್ಕಳನ್ನು ಕಂಡು ಶಿಕ್ಷಕರು ಗಾಬರಿಯಾಗಿದ್ದಾರೆ. ಬೇಗನೇ ಭದ್ರಾವತಿಯ ಆಸ್ಪತ್ರೆಗೆ ಎಲ್ಲಾ ಮಕ್ಕಳನ್ನು ದಾಖಲು ಮಾಡಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ್ದು, ಎಲ್ಲಾ ಮಕ್ಕಳು ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಮನೆಯಿಂದ ಮಕ್ಕಳು ಶಾಲೆಗರ ಬಂದಾಗ ಶಿಕ್ಷಕರ ಜವಾಬ್ದಾರಿ ಜಾಸ್ತಿಯಾಗಿರುತ್ತದೆ. ಹೀಗೆ ಇದ್ದಕ್ಕಿದ್ದ ಹಾಗೇ ಮಕ್ಕಳಿಗೆ ಅಪಾಯವಾದರೆ ಶಿಕ್ಷಕರಿಗೂ ಗಾಬರಿಯಾಗದೆ ಇರುತ್ತಾ..? ದೇವರ ದಯೆ ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ ಮಾತು ಕೇಳಿಸಿಕೊಂಡು ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಮಕ್ಕಳಿಗೆ ಮಾತ್ರೆಯನ್ನು ತೆಗೆದುಕೊಂಡ ಮೇಲೆ ಯಾಕೆ ಆ ರೀತಿಯಾದಂತ ಸಮಸ್ಯೆ ಆಯ್ತು ಅನ್ನೋದು ಇನ್ನು ತಿಳಿದಿಲ್ಲ. ಸದ್ಯ ಆಸ್ಪತ್ರೆಯಲ್ಲಿಯೇ ಮಕ್ಕಳಿಗೆ ಸ್ವಲ್ಪ ಸಮಯ ವಿಶ್ರಾಂತಿಯನ್ನು ನೀಡಲಾಗಿದೆ. ಖನಿಜಾಂಶ ಕೊರತೆಯಾದರೆ ಮಕ್ಕಳ ಬೆಳವಣಿಗೆಗೂ ಕಷ್ಟಕರವಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಿಂದ ವಾರಕ್ಕೊಮ್ಮೆ ಮಾತ್ರೆಗಳನ್ನ ನೀಡಲಾಗುತ್ತದೆ. ತಿನ್ನುವ ಆಹಾರದಲ್ಲಿ ಈಗಂತೂ ಪೋಷಕಾಂಶಗಳು ಬೇಕಾದಷ್ಟು ಸಿಗುವುದು ಬಹಳ ಕಷ್ಟವಾಗಿದೆ. ಹೀಗಾಗಿಯೇ ಮಕ್ಕಳು ಶಕ್ತಿದಾಯಕವಾಗಿ ಬೆಳೆಯಲೆಂದು ಮಾತ್ರೆ ಕೊಡುವುದು, ಮಧ್ಯಾಹ್ನದ ಆಹಾರದ ಮೊಟ್ಡೆ, ಹಾಲು ಎಲ್ಲವನ್ನು ನೀಡಲಾಗುತ್ತದೆ. ಸದ್ಯ ಮಕ್ಕಳು ಚೇತರಿಸಿಕೊಂಡಿರುವುದು ಪೋಷಕರಿಗೂ ನಿರಾಳವೆನಿಸಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






