Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರತನ್ ಟಾಟಾ ಉಯಿಲ್ ನಲ್ಲಿ ಮೋಹಿನಿಗೆ 500 ಕೋಟಿ : ಹುಡುಕಾಟ ಶುರು..!

---Advertisement---

ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ ಕೋಟ್ಯಾಂತರ ಆಸ್ತಿ ಯಾರ ಪಾಲಾಗಬಹುದು ಎಂಬುದರ ಬಗ್ಗೆಯೇ ಚರ್ಚೆಗಳಾಗಿದ್ದು ಹಡಚ್ಚು. ಇದೀಗ ರತನ್ ಟಾಟಾ ಅವರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಉಯಿಲದ ಬರೆದಿಟ್ಟಿದ್ದು, ಅದರ ಬಗ್ಗೆಯೂ ಚರ್ಚೆಯಾಗುತ್ತಿದೆ.

ರತನ್ ಟಾಟಾ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುವವರು, ಸಾಕಿದ್ದ ನಾಯಿಗೂ ಆಸ್ತಿ ಬರೆದಿದ್ದಾರೆ. ಆದರೆ ಆ ಉಯಿಲ್ ನಲ್ಲಿಯೇ ಇದೀಗ ಮೋಹಿನಿ ಹೆಸರು ಕೂಡ ಪತ್ತೆಯಾಗಿದೆ. ಅದರಲ್ಲೂ ಒಂದಲ್ಲ ಎರಡಲ್ಲ 500 ಕೋಟಿಯಷ್ಟು ಆಸ್ತಿಯನ್ನು ಅವರಿಗೆ ಬರೆಯಲಾಗಿದೆ. ಈ ಮೋಹಿನಿ ಅವರ ಪೂರ್ತಿ ಹೆಸರು ಮೋಹಿನಿ ಮೋಹನ್ ದತ್ತ ಎಂಬಹದಾಗಿದೆ. ಇವರು ಕೂಡ ದೊಡ್ಡ ಬಿಸಿನೆಸ್ ವುಮೆನ್. ಜಾರ್ಖಂಡ್ ನ ಜೇಮಶೇಡ್ ಪುರದ ಒಬ್ಬ ವಾಣಿಜ್ಯೋದ್ಯಮಿಯಾಗಿದ್ದಾರೆ. ಸ್ಟಾಲಿಯನ್ ಎಂಬ ಟ್ರಾವೆಲ್ ಏಜೆನ್ಸಿಯನ್ನ ಇವರು ನಡೆಸುತ್ತಿದ್ದಾರೆ.

2013ರಲ್ಲಿ ತಾಜ್ ಹೊಟೇಲ್ ಗ್ರೂಪ್ ನ ಜೊತೆಗೆ ಅಂಗ ಸಂಸ್ಥೆಯಾಗಿ ಸೇರ್ಪಡೆಗೊಂಡರು. ಮೋಹಿನಿ ಮೋಹನದತ್ತ ಅವರು ಹಾಗೂ ಅವರ ಕುಟುಂಬಸ್ಥರು ಸ್ಟಾಲಿಯನ್ ಕಂಪನಿಯಲ್ಲಿ ಶೇಕಡಾ 80ರಷ್ಟು ಷೇರುಗಳನ್ನು ಹೊಂದಿದ್ದರೆ ಟಾಟಾ ಗ್ರೂಪ್ ಶೇಕಡಾ 20 ರಷ್ಟು ಶೇರುಗಳನ್ನು ಹೊಂದಿತ್ತು. ಮೋಹಿನಿ ಅವರು ರತನ್ ಟಾಟಾ ಹಾಗೂ ಅವರ ಕುಟುಂಬದವರಿಗೆ ತುಂಬಾನೇ ಆಪ್ತರಾಗಿದ್ದಾರೆ. ದತ್ತಾ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಟಾಟಾ ಟ್ರಸ್ಟ್ ನಲ್ಲಿ ಕಳೆದ 9 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ರತನ್ ಟಾಟಾ ಹಾಗೂ ಮೋಹಿನಿ ಅವರಿಗೆ ಸುಮಾರು 60 ವರ್ಷದ ಗೆಳೆತನವಿದೆ. ಇದೀಗ ಅವರ ಹೆಸರಿಗೂ 500 ಕೋಟಿ ರೂಪಾಯಿಯಷ್ಟು ಆಸ್ತಿ ಬರೆದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment