ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಎದುರು ನೋಡುತ್ತಿರುವವರಿಗೆ ಉತ್ತಮ ಅವಕಾಶ ಸಿಕ್ಕಿದೆ. ದೇಶಾದ್ಯಂತ 23,757 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.ಈ ನೇಮಕಾತಿಯಲ್ಲಿ ಗ್ರಾಮೀಣ ಡಾಕ್ ಸೇವಕ್ (GDS), ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಹಾಗೂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) ಹುದ್ದೆಗಳು ಸೇರಿವೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಎಸ್ಎಸ್ಎಲ್ಸಿ/10ನೇ ತರಗತಿ ತೇರ್ಗಡೆಯಾಗಿರಬೇಕು. ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು. ಜೊತೆಗೆ, ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು. ಕರ್ನಾಟಕದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನ್ನಡ ಭಾಷೆ ತಿಳಿದಿರಬೇಕು.ಈ ನೇಮಕಾತಿಯ ಪ್ರಮುಖ ವಿಶೇಷತೆಯೆಂದರೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸುವ ಮೆರಿಟ್ ಪಟ್ಟಿಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ ಎಷ್ಟು?
ಅಭ್ಯರ್ಥಿಗಳ ವಯಸ್ಸು 18ರಿಂದ 40 ವರ್ಷಗಳೊಳಗಿರಬೇಕು. ಮೀಸಲಾತಿ ನಿಯಮಗಳ ಪ್ರಕಾರ ಎಸ್ಸಿ, ಎಸ್ಟಿ, ಒಬಿಸಿ ಸೇರಿದಂತೆ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ದೊರೆಯಲಿದೆ.
ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗದ ಪುರುಷ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಕರ್ನಾಟಕದಲ್ಲಿ 1,116 ಹುದ್ದೆಗಳು
ರಾಜ್ಯವಾರು ಹುದ್ದೆಗಳ ಪೈಕಿ ಕರ್ನಾಟಕದಲ್ಲಿ 1,116 ಹುದ್ದೆಗಳು ಲಭ್ಯವಿವೆ. ಪ್ರಮುಖ ರಾಜ್ಯಗಳ ಹುದ್ದೆಗಳ ವಿವರ ಹೀಗಿದೆ:
ಕರ್ನಾಟಕ – 1,116
ಮಹಾರಾಷ್ಟ್ರ – 2,297
ತಮಿಳುನಾಡು – 2,118
ಪಶ್ಚಿಮ ಬಂಗಾಳ – 1,619
ಉತ್ತರ ಪ್ರದೇಶ – 1,691
ಮಧ್ಯಪ್ರದೇಶ – 1,450
ಜಾರ್ಖಂಡ್ – 1,379
ಕೇರಳ – 1,373
ಒಡಿಶಾ – 1,353
ಈಶಾನ್ಯ ರಾಜ್ಯಗಳು – 2,614
ಬಿಹಾರ – 1,098
ರಾಜಸ್ಥಾನ – 1,009
ಆಂಧ್ರಪ್ರದೇಶ – 917
ಒಟ್ಟು ಹುದ್ದೆಗಳು – 23,757
ಪ್ರಮುಖ ದಿನಾಂಕಗಳು
ಆಗಸ್ಟ್ 31: OTR ನೋಂದಣಿ ಪ್ರಾರಂಭ
ಸೆಪ್ಟೆಂಬರ್ 2: ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ
ಸೆಪ್ಟೆಂಬರ್ 21: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಸೆಪ್ಟೆಂಬರ್ 23 ಮತ್ತು 24: ಅರ್ಜಿ ತಿದ್ದುಪಡಿಗೆ ಅವಕಾಶ
ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಭಾರತೀಯ ಅಂಚೆ ಇಲಾಖೆಯ ಅಧಿಕೃತ ನೇಮಕಾತಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಯೋಮಿತಿ, ಅರ್ಹತೆ, ಶುಲ್ಕ ಹಾಗೂ ಇತರ ಷರತ್ತುಗಳನ್ನು ಪರಿಶೀಲಿಸುವುದು ಅಗತ್ಯ.











