Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಯುವ್ಯ ಸಾರಿಗೆ ಸಂಸ್ಥೆಗೆ ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ : ಸಿಎಂ ಡಿ.ಕೆ.ಶಿವಕುಮಾರ್

---Advertisement---

ಬೆಳಗಾವಿ : ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗುವುದು. ಚೆನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ತಕ್ಷಣವೇ ಆದೇಶ ನೀಡಲಾಗುವುದು. ಶಾಸಕರ ಬೇಡಿಕೆ ಮೇರೆಗೆ ಮುಂದಿನ ಬಜೆಟ್‌ನಲ್ಲಿ ₹40 ಕೋಟಿ ಅನುದಾನ ನೀಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಿತ್ತೂರು ಉತ್ಸವದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ನಾನು ನೀರಾವರಿ ಸಚಿವನಾಗಿದ್ದಾಗ ಈ ಭಾಗದ ರೈತರ ಬದುಕಿಗೆ ಶ್ರೀ ಚನ್ನವೃಷಭೇಂದ್ರ ಅವರ ಹೆಸರಲ್ಲಿ ಏತ ನೀರಾವರಿ ಯೋಜನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. 520 ಕೋಟಿ ರೂ. ಮೊತ್ತದ ಯೋಜನೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕ್ಷೇತ್ರದಲ್ಲಿ 100 ಹಾಸಿಗೆಗಳ ಆಸ್ಪತ್ರೆ, 300 ಕೋಟಿ ರೂಪಾಯಿ ಮೊತ್ತದ ಲೋಕೋಪಯೋಗಿ ಇಲಾಖೆ ಕಾಮಗಾರಿ ಸೇರಿದಂತೆ ಸುಮಾರು 1000  ಕೋಟಿ ವೆಚ್ಚದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಿತ್ತೂರಿಗೆ ತನ್ನದೇ ಆದ ಇತಿಹಾಸವಿದೆ. ಚೆನ್ನಮ್ಮ ಕನ್ನಡದ ಮಣ್ಣಿಗಾಗಿ ಮಡಿದ ದಿಟ್ಟ ಹೋರಾಟಗಾರ್ತಿ. ಕಿತ್ತೂರಿನ ಕಥೆ ಚೆನ್ನಮ್ಮ ಅವರ ಇತಿಹಾಸ ಸಾರುತ್ತದೆ, ಸ್ವಾಭಿಮಾನದ ಮಹಿಮೆ. ರಾಣಿ ಚೆನ್ನಮ್ಮನ ಧೈರ್ಯ ಪ್ರತಿ ಪೀಳಿಗೆಗೆ ಸ್ವಾಭಿಮಾನದ ಪಾಠ. ಕಿತ್ತೂರು ಎಂದರೆ ವೀರರ ಸಂಕೇತ. ಕಿತ್ತೂರು ಉತ್ಸವ ನಾಡಿನ ಹೆಮ್ಮೆಯ ಸಂಕೇತ. ಚೆನ್ನಮ್ಮನ ಸಾಹಸ ನಮ್ಮೆಲ್ಲರ ಸ್ಫೂರ್ತಿ, ಅವರ ತ್ಯಾಗದ ನೆನಪು ಅಜರಾಮರ. ಚೆನ್ನಮ್ಮ ಎಂಬುದು ಕೇವಲ ಹೆಸರಲ್ಲ ಸ್ವಾಭಿಮಾನ, ಶೌರ್ಯ, ಸ್ವಾತಂತ್ರ್ಯದ ಸಂಕೇತ ಎಂದು ಹೇಳಿದರು.

ರಾಜ್ಯದಲ್ಲಿ ಶಾಂತಿಯುತ ಉತ್ತಮ ಆಡಳಿತ ನೀಡುತ್ತಿದ್ದೇವೆ. ಈ ಕ್ಷೇತ್ರದ ಶಾಸಕರ ಜೊತೆ ಇಡೀ ಸರ್ಕಾರ ಇದೆ. ಇಲ್ಲಿನ ಸುವರ್ಣ ಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಿದೆವು. ಸಮಾನತೆಯಿಂದ ಬೆಳೆಯಲು, ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯಲು ಕಾರ್ಯಕ್ರಮ ರೂಪಿಸಿದ್ದೇವೆ. ಕರ್ನಾಟಕದ ನೆಲ ಬಸವಣ್ಣನವರ ಕಾಯಕ, ದಾಸೋಹ ಹಾಗೂ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದೆ ಎಂದರು.

Join WhatsApp

Join Now

Join Telegram

Join Now