ಸುದ್ದಿಒನ್, ಚಿತ್ರದುರ್ಗ, ಜೂ.22 : 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ನಗರದ ತುರುವನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಹಿಳೆಯರಿಗಾಗಿ ಏರ್ಪಡಿಸಿದ್ದ ಯೋಗಾಸನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಯೋಗ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
18ರಿಂದ 45ವರ್ಷ ವರ್ಷದೊಳಗಿನ ಸ್ಪರ್ಧಾ ವಿಭಾಗದಲ್ಲಿ ಪ್ರಥಮ ಬಹುಮಾನ ಅನಿತಾ, ದ್ವಿತೀಯ ಅರುಣ ಹಾಗೂ ತೃತೀಯ ಬಹುಮಾನ ರಮಾ ಪಡೆದರೆ 45 ರಿಂದ 70 ವರ್ಷದೊಳಗಿನ ವಿಭಾಗದಲ್ಲಿ ಶ್ರೀಮತಿ ವನಜಾಕ್ಷಮ್ಮ ಪ್ರಥಮ, ಶ್ರೀಮತಿ ತಿಪ್ಪಮ್ಮ ದ್ವಿತೀಯ ಹಾಗೂ ಶ್ರೀಮತಿ ಸುಧಾ ತೃತೀಯ ಬಹುಮಾನ ಪಡೆದರು.
ಸ್ಪರ್ದೆಯ ತೀರ್ಪುಗಾರರಾಗಿ ಭಾಗವಹಿಸಿದ್ದ ಹಿರಿಯ ಯೋಗ ಪಟು ತಿಪ್ಪೇಸ್ವಾಮಿ ಭರಮಸಾಗರ ಮಾತನಾಡಿ “ಯೋಗಾಸನ ಸ್ಪರ್ಧೆಗಳು ಕೇವಲ ಬಹುಮಾನ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿರದೆ, ವ್ಯಕ್ತಿತ್ವ ವಿಕಸನ ಮತ್ತು ಯೋಗದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾರ್ವಜನಿಕವಾಗಿ ಇಂತಹ ಸ್ಪರ್ಧೆಗಳು ನಡೆದಾಗ, ಸಾಮಾನ್ಯ ಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡುತ್ತದೆ. ವಿಶಾಲ ಸಮಾಜಕ್ಕೆ ಯೋಗದ ವಿವಿಧ ಆಸನಗಳು ಮತ್ತು ಅದರ ಸೌಂದರ್ಯವನ್ನು ಪರಿಚಯಿಸಲು ಇವು ಅತ್ಯುತ್ತಮ ವೇದಿಕೆಗಳಾಗಿವೆ. ಗೆಲುವು-ಸೋಲುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಯೋಗ ಸ್ಪರ್ಧೆಗಳು ಕಲಿಸುತ್ತವೆ. ಕೇವಲ ಗೆಲ್ಲುವುದಷ್ಟೇ ಅಲ್ಲ, ಇತರರ ಪ್ರತಿಭೆಯನ್ನು ಗೌರವಿಸುವ ಮತ್ತು ಅವರಿಂದ ಕಲಿಯುವ ಮನೋಭಾವ ಬೆಳೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.
ಯೋಗಾಸನ ಸ್ಪರ್ದೆಗಳ ಆಯೋಜಕರಾದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಯೋಗ ಶಿಕ್ಷಕ ರವಿ ಕೆ.ಅಂಬೇಕರ್ ಮಾತನಾಡಿ ಪ್ರತಿ ವರ್ಷದ ವಿಶ್ವ ಯೋಗ ದಿನಾಚರಣೆಗಾಗಿ ಯೋಗ ಪ್ರಚಾರಗೊಳಿಸುವುದಕ್ಕಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಅದರಂತೆ ಈ ಸಾಲಿನ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಜಿಲ್ಲಾ ಕಾರಾಗೃಹ ಬಂಧಿ ನಿವಾಸಿಗಳಿಗೆ , ಜಿಲ್ಲೆಯ ಹಲವಾವಾರು ಶಾಲಾಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಚಿಯ ಯೋಗ ತರಬೇತಿಯನ್ನು ನೀಡಲಾಯಿತು ಮತ್ತು ಮಹಿಳೆಯರಿಗೆ ಯೋಗದ ಬಗ್ಗೆ ಉತ್ತೇಜನ ನೀಡುವ ಸಲುವಾಗಿ ಈ ಮಹಿಳಾ ಯೋಗಾಸನ ಸ್ಪರ್ಧೆಗಳನ್ನು ನಡೆಸಲು ಉದ್ಧೇಶಿಸಲಾಯಿತು ಎಲ್ಲಾ ಸ್ಪರ್ಧಿಗಳು ತುಂಬಾ ಉತ್ಸಾದಿಂದ ಪಾಲ್ಗಂಡಿದ್ದಾರೆ ಮುಂದಿನ ದಿನಯ ರಾಜ್ಯ ಮಟ್ಟದ ಯೋಗಾಸನ ಸ್ಪರ್ದೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸದಸ್ಯೆ ಶ್ರೀಮತಿ ನಾಗಲತ ಮಾತಾಜೀ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಇದುವರೆಗೆ ಸಾರ್ವಜನಿಕರಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುವುದು.
ಉಚಿತ ಯೋಗ ಶಿಬಿರಗಳು ಮತ್ತು ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುವುದು.ಜನರಲ್ಲಿ ಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದು 2026 ಈ ಸಾಲಿನ ವಿಶ್ವ ಯೋಗ ದಿನದ ಆಚರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಯೋಗದ ಕಡೆ ಸೆಳೆಯಲು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ವಿವಿಧ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿದ್ದು ಎಲ್ಲಾ ಮಹಿಳೆಯರು ಉತ್ಸಾಹದಿಂದ ಪಾಲ್ಗಂಡಿದ್ದು ವಿಶೇಷ ಯೋಗ ನಾವು ಕಲಿಯುವ ಜೊತೆಗೆ ಇತರರಿಗೂ ಹೇಳಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ರಾಜ್ಯದ ಹೆಸರಾಂತ ಹಿರಿಯ ಯೋಗ ಸಾಧಕ ತಿಪ್ಪೇಸ್ವಾಮಿ ಭರಮಸಾಗರ ಅವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಸಾಧಕರಾದ ಸುಮಿತ್ರಮ್ಮ ,ಸುಧಾಮಣಿ, ಸಾವಿತ್ರಮ್ಮ, ಸುಕನ್ಯಾ ಇನ್ನಿತರರು ಪಾಲ್ಗೊಂಡಿದ್ದರು.
__________________
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












