Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಇಂದು ‘ಶೂನ್ಯ ನೆರಳು’ ಅದ್ಭುತ: ಮಧ್ಯಾಹ್ನ ನೆರಳು ಕಾಣೆಯಾದ ಕ್ಷಣ

---Advertisement---

ಇದು ಒಂದು ಅಪರೂಪದ ಖಗೋಳೀಯ ಘಟನೆ. ‘ಶೂನ್ಯ ನೆರಳಿನ ದಿನ’ದಲ್ಲಿ ಮಧ್ಯಾಹ್ನದ ವೇಳೆ ಸೂರ್ಯನು ನೇರವಾಗಿ ತಲೆಯ ಮೇಲ್ಭಾಗದಲ್ಲೇ ಕಾಣಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ನಿಂತಿರುವ ವ್ಯಕ್ತಿ ಅಥವಾ ವಸ್ತುವಿನ ನೆರಳು ಭೂಮಿಯ ಮೇಲೆ ಬೀಳದೆ ಸಂಪೂರ್ಣವಾಗಿ ಕಾಣೆಯಾಗುತ್ತದೆ.ಈ ವಿಶೇಷ ಘಟನೆ ವರ್ಷಕ್ಕೆ ಎರಡು ಬಾರಿ ಮಾತ್ರ ಸಂಭವಿಸುತ್ತದೆ.

ಕರ್ಕಾಟಕ ವೃತ್ತ ಮತ್ತು ಮಕರ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವಾಸಿಸುವವರಿಗೆ ಮಾತ್ರ ಇದು ಗೋಚರಿಸುತ್ತದೆ. ನೆರಳು ಕಾಣೆಯಾಗುವ ಕ್ಷಣವು ಅತಿ ಸ್ವಲ್ಪ ಸಮಯ—ಕೆಲವೇ ಕ್ಷಣಗಳು ಅಥವಾ ಒಂದು ನಿಮಿಷದವರೆಗೆ ಮಾತ್ರ ಇರುತ್ತದೆ.ಚಿತ್ರದುರ್ಗದಲ್ಲಿ ಈ ಅಪರೂಪದ ದೃಶ್ಯ ಇಂದು, ಏಪ್ರಿಲ್ 28ರಂದು ಮಧ್ಯಾಹ್ನ ಸುಮಾರು 12.05ರ ಹೊತ್ತಿಗೆ ಕಾಣಿಸಿಕೊಳ್ಳಲಿದೆ. ಭೂಮಿ ತನ್ನ ಅಕ್ಷದ ಮೇಲೆ ಸುಮಾರು 23.5 ಡಿಗ್ರಿ ಓರೆಯಾಗಿ ತಿರುಗುತ್ತಾ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವುದರಿಂದ, ಕೆಲ ಸಂದರ್ಭಗಳಲ್ಲಿ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲ್ಭಾಗಕ್ಕೆ ಬೀಳುತ್ತವೆ.

ಇದರ ಪರಿಣಾಮವಾಗಿ ಈ ‘ಶೂನ್ಯ ನೆರಳು’ ವಿದ್ಯಮಾನ ಸಂಭವಿಸುತ್ತದೆ.ಈ ಕ್ಷಣವನ್ನು ಗಮನಿಸಲು ನೇರವಾಗಿ ಒಂದು ಕಂಬ ಅಥವಾ ಕಡ್ಡಿಯನ್ನು ನೆಟ್ಟಿಟ್ಟು ಅದರ ನೆರಳನ್ನು ನೋಡಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ. ಸ್ವಾಮಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...