ಸುದ್ದಿಒನ್, ದಾವಣಗೆರೆ, ಏಪ್ರಿಲ್. 05 : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ವಿಚಾರ ಬಹಳಷ್ಟು ಕುತೂಹಲಕಾರಿಯಾಗಿತ್ತು. ಯಾಕಂದ್ರೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ ಅಂತ ಬಂಡಾಯವೆದ್ದಿದ್ದರು. ಬಂಡಾಯ ಶಮನಕ್ಕೆ ಹಲವರು ಶ್ರಮಿಸಿದ್ದರು. ಸಚಿವ ಜಮೀರ್ ಅಹ್ಮದ್ ಅವರು ಬಂದ್ರೆ ಇಲ್ಲಿನ ಅಲ್ಪಸಂಖ್ಯಾತರ ಕೋಪ ತಣ್ಣಗಾಗಬಹುದು ಅಂತಾನೇ ಕಾಯ್ತಾ ಇದ್ದರು. ಆದರೆ ಜಮೀರ್ ಅವರಿಗೆ ಕೇರಳ ಜವಾಬ್ದಾರಿ ಜಾಸ್ತಿಯಾಗಿದ್ದ ಕಾರಣಕ್ಕೆ ದಾವಣಗೆರೆಗೆ ಬರುವ ಸಾಹಸ ಮಾಡಿರಲಿಲ್ಲ. ಕಡೆಗೂ ಇಂದು ಜಮೀರ್ ಅಹ್ಮದ್ ದಾವಣಗೆರೆಗೆ ಬಂದು, ಮಲ್ಲಣ್ಣ ಮನೆಯಲ್ಲಿ ಊಟ ಮಾಡಿ, ನಮ್ಮ ನಡುವೆ ಅಂತದ್ದೇನು ಇಲ್ಲ ಎಂಬುದನ್ನ ತಿಳಿಸಿದ್ದಾರೆ.
ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ಊಟ ಮಾಡಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದು, ಕೇರಳ ಸ್ಟಾರ್ ಕ್ಯಾಂಪೇನರ್ ಹಿನ್ನೆಲೆ ಕೇರಳ ಹೋಗಿದ್ದೆ. ನಾಮಪತ್ರ ಸಲ್ಲಿಕೆ ದಿನ ಸದನದಲ್ಲಿ ಪ್ರಶ್ನೆಯಿತ್ತು. ಏಪ್ರಿಲ್ 5ಕ್ಕೆ ಪ್ರಚಾರಕ್ಕೆ ಬರ್ತೀನಿ ಎಂದು ಹೇಳಿದ್ದೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸಬೇಕು.
MLC ಜಬ್ಬರ್ ಪ್ರಚಾರಕ್ಕೆ ಬರದಿದ್ದರ ಬಗ್ಗೆ ಮಾತನಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ನೂರಕ್ಕೆ ನೂರು ಗೆಲ್ಲುತ್ತಾರೆ. ನಾಳೆ ಬಾಗಲಕೋಟೆಗೆ ಪ್ರಚಾರಕ್ಕೆ ಹೋಗುತ್ತೇನೆ. ಮತ್ತೆ ಬಂದು ಹೋಗಿ ಎಂದರೆ ನಾನು ಬರುತ್ತೇನೆ. ಕಳೆದ ಚುನಾವಣೆಯಲ್ಲೂ ಪಕ್ಷೇತರ, ಇತರೆ ಅಭ್ಯರ್ಥಿಗಳಿದ್ದರು. ದಾವಣಗೆರೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಯಾರು ಬರಲಿ, ಯಾರು ಬಿಡಲಿ ಕಾಂಗ್ರೆಸ್ ಗೆಲ್ಲುತ್ತದೆ. ನಾವು ಅಸಮಾಧಾನ ಸರಿಪಡಿಸುತ್ತೇವೆ ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ. ಈ ಮೂಲಕ ಯಾವುದೇ ಮನಸ್ತಾಪ ಇಲ್ಲ ಎಂಬುದನ್ನ ಸಾರಿದಂತೆ ಆಗಿದೆ.





















