ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ನ. 15 : ಹಿಂದಿನ ಕಾಲದಲ್ಲಿ ನಮ್ಮ ಕೃಷಿಗೆ ಅಗತ್ಯವಾಗಿ ಬೇಕಾದ ಸಾಮಾನುಗಳನ್ನು ನಾವೇ ತಯಾರು ಮಾಡಿಕೊಳ್ಳಲಾಗುತ್ತಿತ್ತು. ಅದರೆ ಇಂದಿನ ದಿನಮಾನದಲ್ಲಿ ಎಲ್ಲದಕ್ಕೂ ಸಹಾ ಬೇರೆಯವರನ್ನು ಅವಲಂಬಿಸುವಂತಾಗಿದೆ. ನಾವುಗಳು ನಮಗೆ ದುಡಿಯದೇ ಕಂಪನಿಗಳಿಗೆ ದುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉತ್ತರ ಪ್ರಾಂತ್ಯದ ಕಿಸಾನ್ ಸಂಘದ ಪ್ರಚಾರಕರಾದ ಪುಟ್ಟಸ್ವಾಮಿ ವಿಷಾಧಿಸಿದರು.
ಚಿತ್ರದುರ್ಗ ನಗರದಲ್ಲಿ ಕಳೆದ 12 ರಿಂದ ನಡೆಯುತ್ತಿರುವ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿನ ಸ್ವದೇಶಿ ಮೇಳದ ನಾಲ್ಕನೇ ದಿನವಾದ ಶನಿವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದದಲ್ಲಿ ಸಾವಯವ ಕೃಷಿ ಬಹು ಬೆಳೆ ಪದ್ದತಿ ಮೌಲ್ಯ ವರ್ಧನೆ ಮಾರುಕಟ್ಟೆ ವ್ಯವಸ್ಥೆ ಸಹಕಾರಿ ವ್ಯವಸ್ಥೆ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಕಬ್ಬನಿಂದ ಬೆಲ್ಲವನ್ನು ತಯಾರು ಮಾಡಲಾಗುತ್ತಿತ್ತು. ಇಂದಿನಂತೆ ಸಕ್ಕರೆಯನ್ನು ತಯಾರು ಮಾಡುತ್ತಿರಲಿಲ್ಲ. ಅಗ ಬೆಲ್ಲದ ತಯಾರಿಕಾ ಕೇಂದ್ರಗಳು ಹೆಚ್ಚಾಗಿದ್ದವು. ಆದರೆ ಇಂದಿನ ದಿನದಲ್ಲಿ ಬೆಲವನ್ನು ತಯಾರಿಸುವ ಕೇಂದ್ರಗಳು ಕಡಿಮೆಯಾಗಿ ಸಕ್ಕರೆಯನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ ಕೃಷಿಯನ್ನು ಉಳಿಸಿಕೊಳ್ಳಲಾಗುತ್ತಿತ್ತು ಆದರೆ ಇಂದಿನ ದಿನದಲ್ಲಿ ಕೃಷಿಯನ್ನು ಕಳೆದುಕೊಳ್ಳಲಾಗುತ್ತಿದೆ ಎಂದು ವಿಷಾಧಿಸಿದರು.
ನಮ್ಮ ತಾತ ಮುತ್ತಾತಂದಿರು ಕೃಷಿಯನ್ನು ಮಾಡುವಾಗ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಅವರೇ ಸ್ವಂತಹ ಮಾಡಿಕೊಳ್ಳುತ್ತಿದ್ದರು. ಬೀಜ, ಗೊಬ್ಬರ ಕ್ರೀಮಿ ನಾಶಕ ಸೇರಿದಂತೆ ಇತರೆ ವಸ್ತುಗಳನ್ನು ಹೂರಗಿನಿಂದ ತರದೇ ತಾವೇ ತಯಾರು ಮಾಡುವುದರ ಮೂಲಕ ಕೃಷಿಯನ್ನು ಮಾಡುತ್ತಿದ್ದರು. ಆದರೆ ಈಗ ಎಲ್ಲದಕ್ಕೂ ಸಹಾ ನಾವುಗಳು ಕಂಪನಿಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದಾರೂ ಒಂದು ವಸ್ತು ಸಿಗದಿದ್ದರೆ ಕೃಷಿಯನ್ನು ಮಾಡುವುದೇ ನಿಲ್ಲಿಸಬೇಕಾದ ವಾತಾವರಣ ನಿರ್ಮಾಣವಾಗಿದೆ, ಭೂಮಿಗೆ ಸಾವಯವ ಗೊಬ್ಬರವನ್ನು ಹಾಕುವುದರ ಮೂಲಕ ಭೂಮಿಯನ್ನು ಫಲವತ್ತಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ನಾವುಗಳು ರಾಸಾಯಿನಿಕ ಗೊಬ್ಬರವನ್ನು ಹಾಕಿ ಭೂಮಿಯನ್ನು ಹಾಳು ಮಾಡಿದ್ದೇವೆ ಎಂದರು.
ಕೃಷಿ ಎಂದರೆ ಮೂಲ ಜಾನುವಾರುಗಳು ಜಾನುವಾರುಗಳು ಇಲ್ಲದಿದ್ದರೆ ಕೃಷಿ ಇಲ್ಲವಾಗುತ್ತದೆ, ಆಕಳು ವೈದ್ಯರಿದ್ದ ಹಾಗೇ ಅದರ ಹಾಲು ಅಮೃತಕ್ಕೆ ಸಮಾನ, ಅದನ್ನು ಸೇವಿಸಿದರೆ ವಿವಿಧ ರೀತಿಯ ಪೋಷಕಾಂಶಗಳು ನಮಗೆ ಲಭ್ಯವಾಗುತ್ತವೆ. ಕೃಷಿ 10 ಸಾವಿರ ವರ್ಷದಿಂದ ಇದೆ, ಇದು ನಿನ್ನೆ ಮೊನ್ನೆಯಿಂದ ಬಂದಿರುವುದು ಅಲ್ಲ ಎಂದ ಅವರು, ಇಂದಿನ ದಿನಮಾನದಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಯುವಜನತೆ ಕೃಷಿಯನ್ನು ಬಿಟ್ಟು ಉದ್ಯೋಗಕ್ಕಾಗಿ ನಗರದ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರ ಬಗ್ಗೆ ಎಲ್ಲರೂ ಚಿಂತನೆಯನ್ನು ಮಾಡಬೇಕಿದೆ. ಎಲ್ಲರೂ ನಗರಕ್ಕೆ ಹೋದರೆ ಹೊಟ್ಟೆಗೆ ಅನ್ನವನ್ನು ಯಾರೂ ನೀಡುತ್ತಾರೆ. ಈ ಹಿನ್ನಲೆಯಲ್ಲಿ ಯುವ ಜನತೆ ಗ್ರಾಮದ ಕಡೆಗೆ ಬರಬೇಕಿದೆ ಕೃಷಿಯಲ್ಲಿ ತೂಡಗಬೇಕಿದೆ ಎಂದು ಕರೆ ನೀಡಿದರು.
ಸಾವಯವ ಕೃಷಿಕರಾದ ರಘು ಅರಸಿಕೆರೆ ಮಾತನಾಡಿ, ನಾವು ಬೆಳೆದ ಬೆಳೆಗಳನ್ನು ಹಾಗೇಯೇ ಮಾರಾಟ ಮಾಡಿದರೆ ನಮಗೆ ಆದಾಯ ಕಡಿಮೆ ಬರುತ್ತದೆ ಇದರ ಬದಲು ಅದೇ ಬೆಳೆಯನ್ನು ಮೌಲ್ಯವರ್ಧನೆ ಮಾಡುವುದರ ಮೂಲಕ ಮಾರಾಟ ಮಾಡಿದರೆ ನಮಗೂ ಲಾಭ ಬರುತ್ತದೆ ಇದರ ಬಗ್ಗೆ ನಮ್ಮ ರೈತರು ಆಲೋಚನೆಯನ್ನು ಮಾಡಬೇಕಿದೆ. ನಾವೇ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಳ್ಳಬೇಕಿದೆ. ರೈತರು ತಮ್ಮಲ್ಲಿನ ಭೂಮಿಯಲ್ಲಿ ಒಂದೇ ಬೆಳೆಯನ್ನು ಹಾಕುವ ಬದಲು ವಿವಿಧ ರೀತಿಯ ಬೆಳೆಯನ್ನು ಹಾಕುವುದರ ಮೂಲಕ ಸದಾ ಹಣವನ್ನು ನೋಡಬಹುದಾಗಿದೆ. ನನ್ನ 11 ಎಕರೆಯಲ್ಲಿ ಬಹು ಬೆಳೆಗಳನ್ನು ಹಾಕಿದ್ದೇನೆ ಒಂದು ಬೆಳೆ ಬಂದ ಮೇಲೆ ಮತ್ತೊಂದು ಬೆಳೆ ಬರುವಂತೆ ಮಾಡಿದ್ದೆನೆ ಇದರಿಂದ ನನಗೆ ಮಾರುಕಟ್ಟೆ ಹೊರೆಯಾಗದೇ ಸದಾ ಹಣವನ್ನು ನೋಡಲಾಗುತ್ತದೆ ಎಂದರು.
ನಮ್ಮಲ್ಲಿ ಕೆಲವು ಜನ ನಾವು ರೈತರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ ಮಗ ಏನು ಮಾಡುತ್ತಾನೆ ಎಂದು ಕೇಳಿದರೆ ಹಲವಾರು ಪೋಷಕರು ನನ್ನ ಮಗ ಹೊಲದ ಕೆಲಸ ಮಾಡುತ್ತಾನೆ ಎಂದು ಹೇಳುವುದಿಲ್ಲ, ನಾವು ಕೃಷಿಕರು ಎಂದು ಹೇಳುವುದಕ್ಕೆ ಯಾವುದೇ ಹಿಂಜರಿಕೆ ಬೇಡ ಅಥವಾ ಕೃಷಿಯ ಬಗ್ಗೆ ಕೀಳಿರಿಮೆಯನ್ನು ತೊರಿಸಬೇಡಿ ಎಂದು ಕಿವಿ ಮಾತು ಹೇಳಿದ ಅವರು, ತಾವು ಬೆಳೆದ ಬೆಳೆಗಳ ಉಪ ಉತ್ಪನ್ನಗಳನ್ನು ಮಾಡುವುದರ ಮೂಲಕ ಮಾರಾಟವನ್ನು ಮಾಡಿ ಅರ್ಥಿಕವಾಗಿ ಲಾಭವನ್ನು ಪಡೆಯಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಸಂಘಟಕರಾದ ಜಗದೀಶ್, ರೈತರಾದ ಹುಲಿಕರೆ ವಿಶ್ವಶ್ವೇರಯ್ಯ, ಸಿದ್ದವ್ವನಹಳ್ಳಿ ಜ್ಞಾನೇಶ್, ಸಹಾಯಕ ಕೃಷಿ ನಿರ್ದೇಶಕರಾದ ಮಿಥನ್, ಪ್ರಕಾಶ್ ಕೆ.ಟಿ.ಕುಮಾರಸ್ವಾಮಿ, ಭಾಗವಹಿಸಿದ್ದರು, ಮೂರಾರ್ಜಿ ರೈತ ಗೀತೆಯನ್ನು ಹಾಡಿದರೆ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಸ್ವಾಗತಿಸಿದರು, ರೇಖಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿನ್ನೆ ನಿಧನರಾದ ಸಾಲುಮರದ ತಿಮ್ಮಕ್ಕರವರ ನಿಧನಕ್ಕೆ ಸಭೆಯಲ್ಲಿ ಎರಡು ನಿಮಿಷಗಳ ಕಾಲ ಮೌನಾಚರಣೆಯನ್ನು ನಡೆಸಲಾಯಿತು.


