Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಕ್ತವನ್ನ ಯಾವ ಜಾತಿಯದ್ದು ಬೇಕಾದ್ರೂ ತಗೋಳ್ತೀವಿ, ಆಗ ಜಾತಿ ಬರಲ್ಲ : ಸಿದ್ದರಾಮಯ್ಯ

---Advertisement---

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಹೊಸದಾಗಿ ನೇಮಕ ಆಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನ ವಿತರಣೆ ಮಾಡುವುದಕ್ಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿ, ನೇಮಕಾತಿ ಪತ್ರವನ್ನ ವಿತರಣೆ ಮಾಡಿದರು. ಈ ವೇಳೆ ಜಾತಿ ಎಂಬ ವಿಚಾರದ ಬಗ್ಗೆ ಮಾತನ್ನಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಖಾಲಿ ಇರುವ ಹುದ್ದೆಗಳನ್ನ ಹಂತ ಹಂತವಾಗಿ ಭರ್ತಿ ಮಾಡ್ತೀವಿ ಅಂತ ಜನರಿಗೆ ಭರವಸೆ ನೀಡಿದ್ದೇವೆ. ಭರ್ತಿ ಆಗಲೇಬೇಕು. ನೀವೆಲ್ಲರೂ ಕೂಡ ಜನರ ಹಾಗೂ ಸರ್ಕಾರದ ಮಧ್ಯೆ ಸೇತುವೆಯಾಗಿ ಕೆಲಸ ಮಾಡ್ತಿರೋರು. ಬಹಳ ಮುಖ್ಯವಾಗಿ ಸಮಾಜದ ಸ್ವಾಸ್ಥ್ಯಗಳನ್ನ ಕಾಪಾಡಬೇಕು ಅಂದ್ರೆ, ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇವು ಹೆಚ್ಚಾಗಿ ಖಾಲಿ ಇರಬಾರದು. ಹೀಗಾಗಿ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಬೇಕೆಂದು ಸರ್ಕಾರ ತೀರ್ಮಾನಿಸಿದೆ. ಕಾರಣಾಂತರಗಳಿಂದ ವಿಳಂಬ ಆಯ್ತು. ಒಳ ಮೀಸಲಾತಿ ಸಮಸ್ಯೆ ಇತ್ತು, ಈಗ ಆ ಸಮಸ್ಯೆಯೂ ಬಗೆ ಹರಿದಿದೆ.

ಮಾನವೀಯತೆಯಿಂದ ಕೆಲಸ ಮಾಡಬೇಕು. ಮಾನವೀಯತೆಯಿಂದ ಕೆಲಸ ಮಾಡೋದು ಇದೆಯಲ್ಲ ಅದು ಬಹಳ ಮುಖ್ಯ. ನಿಮ್ಮಲ್ಲಿ ಯಾವುದೇ ಜಾಯಿ, ಧರ್ಮ ಯಾವುದು ಬರಲ್ಲ. ಮಾನವೀಯತೆ ಒಂದೇ. ನಮ್ಮ ಮನುಷ್ಯ ಜಾತಿ ಇದೆಯಲ್ಲ, ಸ್ವಾರ್ಥಿಗಳು ನಾವು. ಕಾಯಿಲೆ ವಾಸಿ ಆಗುವ ತನಕ ಯಾವುದೇ ಜಾತಿ ಇರಲ್ಲ, ಕಾಯಿಲೆ ವಾಸಿ ಆದ್ಮೇಲೆ ಜಾತಿ ಶುರುವಾಗುತ್ತೆ. ಶಸ್ತ್ರಚಿಕಿತ್ಸೆ ಇರುತ್ತಲ್ಲ ಆಗ ರಕ್ತ ಕೊಡಲೇ ಬೇಕು. ಆ ರಕ್ತ ಕೊಡುವಾಗ ಯಾವ ಜಾತಿಯವನಾದರೂ ತಗೋಳ್ತೀವಿ. ಸೀದಾ ದೇಹದ ಒಳಗಡೆಯೇ ತಗೋಳ್ತೀವಿ. ಆಗ ಯಾವುದೇ ಜಾತಿ ಬರಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ